ತಿಪಟೂರು. ಸತ್ಯಗಣಪತಿ ಸೇವಾ ಸಂಘ ಟ್ರಸ್ಟ್ ಹಾಗೂ ಸೊಗಡು ಜನಪದ ಹೆಜ್ಜೆ ತಿಪಟೂರು ಮತ್ತು ಇವರ ಹಲವು ಸಂಘ-ಸಂಸ್ಥೆಗಳು, ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಜುಲೈ 13 ಶನಿವಾರ ಹಾಗೂ 14 ಭಾನುವಾರ ಶ್ರೀ ಸತ್ಯಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ 2 ದಿನಗಳ ಕಾಲ ಹಲಸಿನ ಹಬ್ಬವನ್ನು ಆಚರಣೆ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಗುರು ಸಿರಿಗಂಧ ತಿಳಿಸಿದರು.

ಶ್ರೀ ಸತ್ಯಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಆಯೋಜನೆಗೊಂಡ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಹಲಸಿನ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ, ಹಲಸಿನ ಅಡುಗೆ ಸ್ಪರ್ಧೆ, ನಾ ಕಂಡ ಹಲಸು-ಮಕ್ಕಳಿಗೆ ಚಿತ್ರ ಕಲಾ ಸ್ಪರ್ಧೆ, ತೂಕದ ಹಲಸಿನ ಪ್ರದರ್ಶನ ಹಾಗೂ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೆರೆಗೋಡಿ –ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಗುರುಪರದೇಶಿಕೇಂದ್ರ ಮಹಾಸ್ವಾಮಿಜಿಯವರು ವಹಿಸಲಿದ್ದು, ಉದ್ಘಾಟನೆಯನ್ನು ಶಾಸಕ ಕೆ.ಷಡಕ್ಷರಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅದ್ಯಕ್ಷತೆಯನ್ನು ಸೊಗಡು ಜನಪದ ಹೆಜ್ಜೆಯ ಅಧ್ಯಕ್ಷ ಗುರು ಸಿರಿಗಂಧ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ಸಿ,ನಾಗೇಶ್, ಸೊಗಡು ಜನಪದ ಹೆಜ್ಜೆ ಗೌರವಾಧ್ಯಕ್ಷ ಮುರುಳೀಧರ್, ಉಪವಿಭಾಗಾಧಿಕಾರಿ ಸಪ್ತಶ್ರೀ, ಸತ್ಯ ಗಣಪತಿ ಸೇವಾ ಸಂಘ ಟ್ರಸ್ಟ್‍ನ ಅದ್ಯಕ್ಷ ಬಿ.ಆರ್, ಶ್ರೀ ಕಂಠ, ಕೆ.ವಿ.ಕೆ.ಕೊನೇಹಳ್ಳಿ ಮುಖ್ಯಸ್ಥ ಗೋವಿಂದೇಗೌಡ, ಚೌಡೇಶ್ವರಿ ಪತ್ತಿನ ಸಹಕರ ಸಂಘದ ಅಧ್ಯಕ್ಷ ಸೋಮಶೇಖರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕ ಚಂದ್ರಶೇಖರ್, ಕೊರಟಗೆರೆ ತಾಲ್ಲೂಕಿನ ತೋವಿನಕೆರೆಯ ಬಯಲು ಸೀಮೆಯ ಹಲಸಿನ ಹರಿಕಾರ ಪದ್ಮರಾಜು ಭಾಗವಹಿಲಿದ್ದು, ಕಾರ್ಯಕ್ರಮದಲ್ಲಿ ಮುತ್ತಾತನ ಕಾಲದ ಪಾರಂಪರಿಕ ಹಲಸಿನ ಮರ ಸಂರಕ್ಷಕರಾದ ಮಲ್ಲಿಕಾರ್ಜುನಯ್ಯ ಸನ್ಮಾನಿಸಲಾಗುವುದು ಎಂದರು.

ಸುದ್ದಿಗೋಷ್ಟಿಯಲ್ಲಿ ಸೊಗಡು ಜನಪದ ಹೆಜ್ಜೆ ಗೌರವಾಧ್ಯಕ್ಷ ಮುರುಳೀಧರ್, ಕಾರ್ಯದರ್ಶಿ ಚಿದಾನಂದ್, ನಿರ್ಧೇಶಕರಾದ ನಿಜಗುಣ, ಕಿರಣ್, ಸತ್ಯ ಗಣಪತಿ ಸೇವಾ ಸಂಘ ಟ್ರಸ್ಟ್‍ನ ಅದ್ಯಕ್ಷ ಬಿ.ಆರ್, ಶ್ರೀ ಕಂಠ, ಜೇಮ್ಸ್ ಪೌಂಡಷೇನ್ ಕಾರ್ಯದರ್ಶಿ ತರಕಾರಿ ಗಂಗಾಧರ್, ಮಂಜುಳ ತಿಮ್ಮೇಗೌಡ, ಅಕ್ಕಮಹಾದೇವಿ ಸಂಘದ ಪ್ರಭ ಮತ್ತಿತ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here