ಗುಬ್ಬಿ. ಅಕ್ರಮ ಮದ್ಯ ಮಾರಾಟ ದ ವ್ಯಕ್ತಿ ಯಿಂದ ಯುವಕನ ಮೇಲೆ ಹಲ್ಲೆ. ಅಬಕಾರಿ ಅಧಿಕಾರಿಗಳ ನಿರ್ಲಕ್ಷ್ಯ.

ಗುಬ್ಬಿ: ತಾಲೂಕಿನ ಕಡಬ ಹೋಬಳಿ ಕಲ್ಲೂರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ ವ್ಯಕ್ತಿಯಿಂದ ಸ್ಥಳೀಯ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಕಲ್ಲೂರು ಗ್ರಾಮದ ಲೋಕಾಂಬ ವೈನ್ಸ್ ಸೆಂಟರ್ ಮುಂಭಾಗದಲ್ಲಿ ಅಂಗಡಿಯನ್ನು ಇಟ್ಟುಕೊಂಡಿರುವ ಮಹಾಂತೇಶ್ ಎಂಬಾತನು ತಡರಾತ್ರಿಯಾದರೆ ಅಕ್ರಮ ಮದ್ಯ ಮಾರಾಟ ಮಾಡುವಲ್ಲಿ ವಿಸೀಮನಾಗಿದ್ದಾನೆ. ತಡರಾತ್ರಿ 11 ರಿಂದ 2 ಗಂಟೆವರೆಗೂ ಈತ ಮನೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿವೆ. ನೆನ್ನೆಯೂ ಸಹ ತಡರಾತ್ರಿ ಯುವಕರು ಮದ್ಯವನ್ನು ಖರೀದಿ ಮಾಡಲು ಹೋದಂತಹ ಸಂದರ್ಭದಲ್ಲಿ ಮಾರಾಟಗಾರ ಮಹತೇಶ್ ಮದ್ಯವನ್ನು ಕೇಳಲು ಹೋದಂತ ಕಲ್ಲೂರು ಗ್ರಾಮದ ಯುವಕ ಆನಂದ ಮೇಲೆ ಬಾಟಲಿಯಿಂದ ಹೊಡೆದು ದೈಹಿಕವಾಗಿ ರಕ್ತ ಬರುವಂತೆ ಹಲ್ಲೆ ಮಾಡಿದ್ದು ಸ್ಥಳಕ್ಕೆ 112 ಪೊಲೀಸರು ಭೇಟಿ ನೀಡಿ ಗಲಾಟೆಯನ್ನು ನಿಯಂತ್ರಿಸಿ ಹಲ್ಲೆಗೆ ಒಳಗಾದ ಯುವಕ ಆನಂದವನ್ನು ಸಿ.ಎಸ್ ಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿರುತ್ತಾರೆ.

ಹಲ್ಲೆಗೆ ಒಳಗಾದ ವ್ಯಕ್ತಿಗಳು ಸಿಎಸ್ ಪುರ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿರುತ್ತಾರೆ.

ಗುಬ್ಬಿ ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ವ್ಯವಸ್ಥೆಯಾಗಿ ನಡೆಯುತ್ತಿದ್ದರೂ ಅಬಕಾರಿ ಇಲಾಖೆಯಾಗಲಿ ಪೊಲೀಸ್ ಇಲಾಖೆಯಲ್ಲಿ ಇತ್ತ ಕಡೆ ಗಮನ ಹರಿಸದೇ ಇರುವುದು ಇಂತಹ ಗಲಾಟೆಗೆ ಹೆಚ್ಚು ಆಸ್ಪದ ಕೊಟ್ಟಂತೆ ಆಗುತ್ತಿದೆ. ಎಂಬುದು ಸ್ಥಳೀಯ ಆರೋಪವಾಗಿದೆ.

ಗಲಾಟೆ ನಡೆದ ಸ್ಥಳಕ್ಕೆ 112 ಪೊಲೀಸರು ಭೇಟಿ ನೀಡಿದಾಗ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಮನೆಯಲ್ಲಿ ಸಂಗ್ರಹಿಸಲಾದ ಎರಡು ಕೇಸ್ ಮಧ್ಯದ ಬಾಟಲ್ ಗಳು ಹಾಗೂ ಪ್ಯಾಕೆಟ್ ಗ ಳನ್ನು ಸಿ.ಎಸ್ ಪುರ ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ವಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!