ರಾಷ್ಟ್ರ ರಾಜಧಾನಿಯಲ್ಲಿ ‘ಹಳದಿ ಅಲರ್ಟ್’ ಘೋಷಣೆ

ನವದೆಹಲಿ, ಡಿಸೆಂಬರ್ 29(ಯು.ಎನ್.ಐ) ರಾಷ್ಟ್ರ ರಾಜಧಾನಿಯಲ್ಲಿ ದಿನೇ ದಿನೇ ಕೋವಿಡ್-19 ಮತ್ತು ಕೋವಿಡ್ ನ ಹೊಸ ರೂಪಾಂತರಿ ಒಮೈಕ್ರಾನ್ ಹೆಚ್ಚಳವಾಗುತ್ತಿರುವ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಳದಿ ಅಲರ್ಟ್ ಘೋಷಿಸಿದ್ದಾರೆ.

ಈಗಾಗಲೇ ಭಾರತದಲ್ಲಿ 781 ಒಮೈಕ್ರಾನ್ ಪ್ರಕರಣಗಳು ಕಂಡು ಬಂದರೆ ದೆಹಲಿ ಒಮೈಕ್ರಾನ್ ಸೋಂಕಿನಲ್ಲಿ ಮೊದಲ ಸ್ಥಾನದಲ್ಲಿದ್ದು, ಪ್ರಕರಣಗಳ ಸಂಖ್ಯೆ 238ಕ್ಕೆ ಏರಿದೆ. ಕಳೆದ ಒಂದು ದಿನದಲ್ಲಿ 9,195 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ.

ಕೋವಿಡ್-19 ಪಾಸಿಟಿವಿಟಿ ದರವು ಸತತ ಎರಡು ದಿನಗಳವರೆಗೆ ಶೇಕಡಾ 0.50 ಕ್ಕಿಂತ ಹೆಚ್ಚಿದ್ದರೆ ಹಳದಿ ಅಲರ್ಟ್ ಅನ್ನು ವಿಧಿಸಲಾಗುತ್ತದೆ. ರಾಷ್ಟ್ರ ರಾಜಧಾನಿಯಲ್ಲಿ ಧನಾತ್ಮಕತೆಯ ದರವು ಪ್ರಸ್ತುತ ಶೇಕಡಾ 0.89 ರಷ್ಟಿದೆ, ಇದು 6 ತಿಂಗಳುಗಳಲ್ಲಿ ಅತ್ಯಧಿಕವಾಗಿದೆ.

ಪರಿಸ್ಥಿತಿ ಸುಧಾರಿಸದಿದ್ದರೆ, ದೆಹಲಿ ಸರ್ಕಾರವು ‘ಅಂಬರ್’, ‘ಆರೆಂಜ್’ ಅಥವಾ ‘ರೆಡ್’ ಅಲರ್ಟ್ ಕೂಡ ಘೋಷಿಸಬಹುದು ಮತ್ತು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ಅಡಿಯಲ್ಲಿ ಹೆಚ್ಚಿನ ನಿಬರ್ಂಧಗಳನ್ನು ವಿಧಿಸಬಹುದು. ಈಗಾಗಲೇ ದೆಹಲಿಯಲ್ಲಿ ರಾತ್ರಿ ಕಫ್ರ್ಯೂ ಕೂಡ ಜಾರಿಯಲ್ಲಿದೆ.

ಶಾಲೆಗಳು, ಕಾಲೇಜುಗಳು, ಚಿತ್ರಮಂದಿರಗಳು, ಅಮ್ಯೂಸ್‍ಮೆಂಟ್ ಪಾರ್ಕ್‍ಗಳು, ಈಜುಕೊಳಗಳು ಮತ್ತು ಜಿಮ್‍ಗಳು ಮುಚ್ಚಲ್ಪಡುತ್ತವೆ, ಮೆಟ್ರೋ ರೈಲುಗಳು ಮತ್ತು ಬಸ್‍ಗಳು ನಗರದಲ್ಲಿ ಶೇಕಡಾ 50 ರಷ್ಟು ಆಸನ ಸಾಮಥ್ರ್ಯದ ಅನುಮತಿ ನೀಡಲಾಗಿದೆ. ಅಗತ್ಯ ವರ್ಗಗಳನ್ನು ಹೊರತುಪಡಿಸಿ, 50 ಪ್ರತಿಶತ ಸಿಬ್ಬಂದಿಗಳ ಭೌತಿಕ ಹಾಜರಾತಿಯೊಂದಿಗೆ ಖಾಸಗಿ ಕಚೇರಿಗಳು ಕಾರ್ಯನಿರ್ವಹಿಸುತ್ತವೆ.

ಮದುವೆಗಳು ಮತ್ತು ಅಂತ್ಯಕ್ರಿಯೆಗಳಿಗೆ 20 ಜನರಿಗೆ ಅನುಮತಿಸಲಾಗುವುದು ಮತ್ತು ಸಾಮಾಜಿಕ, ರಾಜಕೀಯ, ಸಾಂಸ್ಕøತಿಕ, ಧಾರ್ಮಿಕ ಮತ್ತು ಉತ್ಸವ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ಸಭೆಗಳನ್ನು ತಕ್ಷಣವೇ ಜಾರಿಗೆ ಬಂದಿರುವ ‘ಹಳದಿ ಅಲರ್ಟ್’ ಅಡಿಯಲ್ಲಿ ನಿಷೇಧಿಸಲಾಗಿದೆ. ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ 50 ಪ್ರತಿಶತದಷ್ಟು ಸಾಮಥ್ರ್ಯದೊಂದಿಗೆ ರೆಸ್ಟೋರೆಂಟ್‍ಗಳು ಕಾರ್ಯ ನಿರ್ವಹಿಸಬಹುದು ಆದರೆ ಬಾರ್‍ಗಳು ಸಹ ಅದೇ ಸಾಮಥ್ರ್ಯದೊಂದಿಗೆ ಮಧ್ಯಾಹ್ನ 12 ರಿಂದ ರಾತ್ರಿ 10 ರವರೆಗೆ ಕಾರ್ಯನಿರ್ವಹಿಸಬಹುದು.

error: Content is protected !!