ವಿಶ್ವಮಹಿಳಾ ದಿನಾಚರಣೆಯಂದು ಮಧುಗಿರಿ ಪಿಎಸ್ಐ ಮಂಗಳಗೌರಮ್ಮನವರಿಗೆ ವಾಸವಿ ಕ್ಲಬ್ ವತಿಯಿಂದ ಸನ್ಮಾನ

ಮಧುಗಿರಿ : ವಿಶ್ವ ಮಹಿಳಾ ದಿನಾಚರಣೆ ಅಂಗvವಾಗಿ ವಾಸವಿ ಕ್ಲಬ್ ವತಿಯಿಂದ ಪಟ್ಟಣದ ಮಧುಗಿರಿ ಪೆÇಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪಿಎಸ್‍ಐ ಮಂಗಳ ಗೌರಮ್ಮ ಮತ್ತು ಇಬ್ಬರು ಮಹಿಳಾ ಪೆÇಲೀಸ್ ಪೇದೆ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಾಸವಿ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ವಿಜಯ ಶ್ರೀನಾಥ್ ರವರು ಮಾತನಾಡುತ್ತಾ ಪ್ರತಿಯೊಂದು ಘಟ್ಟದಲ್ಲೂ ಮಹಿಳೆ ತಾನು ಅಬಲೆಯಲ್ಲ, ಸಬಲೆ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ. ಎಂತಹ ಕೆಲಸವನ್ನೇ ಆಗಲಿ ಸಮರ್ಪಕವಾಗಿ ನಿಭಾಯಿಸುವ ಶಕ್ತಿ ಆಕೆಯದು. ಜಾತಕ ಕುಂಡಲಿಯಲ್ಲಿ ಆಕೆಯ ಶಕ್ತಿಯನ್ನು ವಿಮರ್ಶಿಸುವ ತ್ರಿಗುಣಗಳಿವೆ. ಅವೇನೆಂದರೆ ಪ್ರಕೃತಿಯ ವಿಶೇಷ ಸೃಷ್ಟಿಯೇ ಮಹಿಳೆ. ಆಧುನಿಕ ಯುಗದಲ್ಲಿ ಆಕೆ ತನ್ನನ್ನು ಎಲ್ಲಾ ಕಾರ್ಯಕ್ಷೇತ್ರಗಳÀಲ್ಲಿ ತೊಡಗಿಸಿಕೊಂಡಿದ್ದಾಳೆ. ತನ್ನ ಸಾಮಥ್ರ್ಯವನ್ನು, ಪ್ರಾಬಲ್ಯವನ್ನು ಮೆರೆದಿದ್ದಾಳೆ. ಒಳಗಿನ ಹಾಗೂ ಹೊರಗಿನ ಕೆಲಸಗಳೆರಡನ್ನೂ ಶ್ರೇಣೀಕರಿಸದೆ ಸಮಾನ ಆಸಕ್ತಿಯಿಂದ, ಸಮಾನ ಪ್ರೀತಿಯಲ್ಲಿ, ಸಮಾನ ದಕ್ಷತೆಯಲ್ಲಿ ನಿಭಾಯಿಸುವ ಈ ಗುಣವೇ ಸ್ತ್ರೀಯರಲ್ಲಿರುವ ವಿಶಿಷ್ಟತೆ. ಇದಕ್ಕೆಲ್ಲಾ ಕಾರಣವಾಗಿರುವುದು ಸ್ತ್ರೀಯರಲ್ಲಿರುವ ಮನೋಬಲ. ಮನಸ್ಸೇ ಎಲ್ಲಕ್ಕೂ ಮೂಲ. ಈ ಮನಸ್ಸು ಅತ್ಯಂತ ಸೂಕ್ಷ್ಮ ಹಾಗೂ ಸಮರ್ಥವಾಗಿದ್ದರೆ ಇಡೀ ಪ್ರಪಂಚವನ್ನೇ ಅರಿತು, ಅನುಭವಿಸಿ ಆನಂದಿಸಲು ಸಾಧ್ಯ ಎಂದರು.
ಮೇಲ್ನೋಟಕ್ಕೆ ಮಹಿಳೆಯ ಮನಸ್ಸು ಮೃದು ಹಾಗೂ ಕೋಮಲವೆಂದು ಕಂಡುಬಂದರೂ ಆಂತರ್ಯದಲ್ಲಿ ಆಕೆಯ ಸಂಕಲ್ಪಶಕ್ತಿ ದೃಢವಾಗಿರುತ್ತದೆ. ಮನಸ್ಸಿನ ಈ ವಿಭಿನ್ನ ಸ್ವಭಾವಕ್ಕೆ ತ್ರಿಗುಣಗಳೇ ಆಧಾರವಾಗಿದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಸ್ತ್ರೀಯು ಕಾರ್ಯಪ್ರವೃತ್ತಳಾದಾಗ ಯಾವ ಗುಣ ಅಧಿಕ ಪ್ರಮಾಣದಲ್ಲಿರುವುದೋ ಆ ಗುಣ ಸ್ವಭಾವವಾಗಿ ಅಭಿವ್ಯಕ್ತವಾಗುತ್ತದೆ. ಹೆಣ್ಣು ತಾಯಿಯಾದಾಗ ಅವಳಲ್ಲಿರುವ ನೈಜ ಮನೋಗುಣ ಜಾಗೃತವಾಗುವುದು. ಮಗುವನ್ನು ಸಾಕಿ-ಸಲಹಿ, ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ಮಾಡುವಲ್ಲಿ ಪುರುಷನಿಗಿಂತ ಸ್ತ್ರೀಯ ಕೈಂಕರ್ಯವೇ ಹಿರಿದು. ಮಕ್ಕಳನ್ನು ಸಲಹುವಾಗ ಸ್ತ್ರೀಯರಲ್ಲಿ ತ್ರಿಗುಣಗಳು ಯಾವ ರೀತಿ ಸಹಕರಿಸುವವು ಎಂಬುದನ್ನು ಅವಲೋಕಿಸೋಣ ಎಂದರು.
ಈ ಸಂದರ್ಭದಲ್ಲಿ ವಾಸವಿ ಕ್ಲಬ್ ಕಾರ್ಯದರ್ಶಿ ಆಶಾ ಮಲ್ಲಿಕಾರ್ಜುನ್, ಜೋನಲ್ ಚೇರ್ಮನ್ ಭಾರತಿ ಲಕ್ಷ್ಮಿಕಾಂತ್, ಮಾಜಿ ಅಧ್ಯಕ್ಷರು ಸಹನಾ ನಾಗೇಶ್, ಖಜಾಂಚಿ ಲಕ್ಷ್ಮಿ ಮೂರ್ತಿ, ಕವಿತಾ, ಶೃತಿ ಲಲಿತಾ ಇದ್ದರು.

ವಿಶ್ವ ಮಹಿಳಾ ದಿನಾಚರಣೆ ಅಂಗvವಾಗಿ ವಾಸವಿ ಕ್ಲಬ್ ವತಿಯಿಂದ ಪಟ್ಟಣದ ಮಧುಗಿರಿ ಪೆÇಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪಿಎಸ್‍ಐ ಮಂಗಳ ಗೌರಮ್ಮ ಮತ್ತು ಇಬ್ಬರು ಮಹಿಳಾ ಪೆÇಲೀಸ್ ಪೇದೆ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು

error: Content is protected !!