ಮೇಷ ರಾಶಿ : ಈ ವಾರ ಈ ರಾಶಿ ಯವರು ಬಹಳ ತೀಕ್ಷ್ಣವಾದ ದೃಷ್ಟಿಯಿಂದ ಹೆಜ್ಜೆ ಇಡಬೇಕು  ಏಕೆಂದರೆ ಅಪಾರ್ಥದಿಂದ ನಿಮ್ಮ ಕೆಲಸ ಕಾರ್ಯಗಳಿಗೆ ತೊಂದರೆ ತರುವವರು ಇರುತ್ತಾರೆ,  ಗೊಂದಲ ಸಹ ಇರುತ್ತದೆ  ಅನಾವಶ್ಯಕ ವಾದ ವಿವಾದ ಬೇಡ  ಗಣಪತಿ ಆರಾಧನೆ ಮಾಡಿ ಗುರಿ ಅಥವಾ ಕೆಲಸದ ಕಡೆ ಗಮನ ಕೊಡಿ

ವೃಷಭ ರಾಶಿ :ಈ ವಾರವೂ ನಿಮಗೆ ಸಾಧಾರಣವಾಗಿ ಚಲಿಸ ಬಹುದು ಆಲಸ್ಯ ದಿಂದ ಕೆಲಸ ನಿದಾನವಾಗಿ ಉಂಟಾಗುತ್ತದೆ ಆರೋಗ್ಯದ ಕಡೆ ಗಮನ ಕೊಡುವುದು ಉತ್ತಮ ಆಹಾರ ಕ್ರಮದಲ್ಲಿ ಕೊಂಚ ವ್ಯಾತ್ಯಾಸ ಕಾಣಬಹುದು ಕಠೀಣ ಪರಿಶ್ರಮದಿಂದ ಕೊಂಚ ಅಭಿವೃದ್ಧಿ ಉಂಟಾಗುತ್ತದೆ ಉಳಿದ ಸಮಸ್ಯೆಗಳು ಪರಿಹರಿಸದಿದ್ದರೆ ಸಮಸ್ಯೆ ದೊಡ್ಡದಾಗುವುದು ಲಕ್ಷ್ಮಿ ನರಸಿಂಹ ಸ್ವಾಮಿ ದೇವರ ಅನುಗ್ರಹ ಪಡೆಯಿರಿ

ಮಿಥುನ ರಾಶಿ :  ಈ ರಾಶಿಯವರಿಗೆ  ಬಿಟ್ಟು ಹೋದ ಕೆಲಸ ಕಾರ್ಯ ಕೈ ಹಿಡಿಯುವ ಸಾದ್ಯತೆ ಇದೆ ಮರು ಹೊಂದಾಣಿಕೆ ಪ್ರೀತಿ ಪ್ರೇಮ ವಿಚಾರದಲ್ಲಿ ಧನಾತ್ಮಕವಾಗಿ ಬದಲಾವಣೆ ಅವಿವಾಹಿತರಿಗೆ  ಅನುಕೂಲ ವಿದೆ  ನಿಮ್ಮ ವಯಸ್ಸಿಗಿಂತ ಅಪಾರವಾದ ಜವಾಬ್ದಾರಿ ಕೆಲಸ ಮಾಡಲೆತ್ನಿಸಬಹುದಾದರೂ ಸ್ನೇಹಿತರು ಕುಟುಂಬದ ಸಾದಾರಣ ವಾತಾವರಣ ದಿಂದ ಹಿಂಜರಿಕೆ ಉಂಟಾಗುತ್ತದೆ  ವಿಷ್ಣುವಿನ ಆರಾಧನೆ  ಗರುಡ ದೇವನ ಅನುಗ್ರಹ ಪಡೆಯಿರಿ ಶುಭಮಸ್ತು

ಕರ್ಕಾಟಕ ರಾಶಿ :ಈ ರಾಶಿಯವರಿಗೆ ಈ ವಾರ ಉತ್ತಮ ಕಾರ್ಯೋನ್ಮುಖವಾಗಿ ಇರುವಂತೆ ಮಾಡಬಹುದು ಹೆಚ್ಚಿನ ಕೆಲಸ ಸಾಹಸ ಜವಾಬ್ದಾರಿ ನಿಮ್ಮ ಕೆಲಸದಲ್ಲಿ ಕಟ್ಟಿ ಹಾಕಬಹುದು ಹೊಸ ಉದ್ಯೋಗ ಕೆಲಸಕ್ಕೆ ಉತ್ತಮ ಸಮಯ ವಿದ್ಯಾರ್ಥಿಗಳು ವಿದ್ಯಾಬ್ಯಾಸ ಕಡೆಗೆ ಗಮನ ಹರಿಸಬೇಕು ಸ್ವಂತ ಆಲೋಚನೆ ಸ್ವಂತ ಶಕ್ತಿ ಕಡೆ ಗಮನ ಹರಿಸಿ ಗುರುವಿನ ಆರಾಧನೆ ಮಾಡಿ.

ಸಿಂಹ ರಾಶಿ : ನೀವು ಯಾವಾಗಲೂ ಮುಂದಿನ ಕ್ಷಣಕ್ಕೆ ಓಡುತ್ತಿದ್ದರೆ, ನೀವು ಇರುವವರೆಗೆ ಏನಾಗುತ್ತದೆ? ನಿಧಾನವಾಗಿ, ನೀವು ಇರುವ ಕ್ಷಣವನ್ನು ಆನಂದಿಸಿ ಮತ್ತು ನಿಮ್ಮ ಜೀವನವನ್ನು ಪೂರ್ಣವಾಗಿ ಜೀವಿಸಿ. ಕಳೆದ ಕೆಲವು ದಿನಗಳು ಕಠಿಣವಾಗಿವೆ ಮತ್ತು ನಿಮ್ಮ ಗುರಿಗಳು ಮತ್ತು ಮಹತ್ವಾಕಾಂಕ್ಷೆಗಳ ಬಗ್ಗೆ ನೀವು ನಿರ್ಲಕ್ಷಿಸುತ್ತಿದ್ದೀರಿ, ನಿಮ್ಮ ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯ ಯರನ್ನು ಸಂಪರ್ಕಿಸಿ ಶನಿದೇವರ ಆರಾಧನೆ ಮಾಡಿ.

ಕನ್ಯಾ ರಾಶಿ : ಈ ರಾಶಿಯವರು ಈ ವಾರ ಎಲ್ಲ ಸಮಯ ಸಂದರ್ಭಗಳಿಗೂ ಹೊಂದಿಕೊಳ್ಳುವುದು ಉತ್ತಮ  ಯಾವುದೇ ಕಠಿಣ ಸಂದರ್ಭದಲ್ಲಿ ನೀವು ಭಯ ಬೀತ ರಾಗದೆ ತಾಳ್ಮೆ ಸಹನೆ ಪರಿಪಾಲನೆ ಮಾಡುವ ಸಮಯ ವಾದರೂ ಜನ್ಮರಾಶಿ ಲಗ್ನ ದಲ್ಲಿ ಕೇತು ನಿಮಗೆ ಒಂದು ರೀತಿಯಲ್ಲಿ ಅಂಜಿಕೆ ಜೀವನ ಪ್ರಶ್ನೆ ಎಂಬುದು ಉಂಟು ಮಾಡಿಬಿಡುತ್ತದೆ  ಸಾದ್ಯ ವಾದರೆ ಹನುಮಂತನಿಗೆ ತುಳಸಿ ಮಾಲೆ ಅರ್ಪಿಸಿ ಅನುಗ್ರಹ ಪಡೆಯಿರಿ.

ತುಲಾ ರಾಶಿ : ಈ ವಾರ ನಿಮಗೆ ಕೆಲಸ ಕಾರ್ಯಗಳು ಸುಗಮವಾಗಿ ಆಗುವುದಿಲ್ಲ ಪ್ರತಿರೋಧ ಎದುರಿಸಲು ಸಿದ್ಧ ವಾಗಿರಬೇಕಾಗುತ್ತದೆ  ಕೆಲಸ ಕಾರ್ಯದಲ್ಲಿ   ಸ್ವಯಂ ಶಕ್ತಿ ಸ್ವಯಿಚ್ಚೆ   ಪ್ರಯತ್ನ ಉತ್ತಮ ಪರಿಹಾರ  ಸಹೊದ್ಯೋಗಿ , ಸಹಾಯಕರಿಂದ ಯಾವುದೇ ಬೆಂಬಲ ಪ್ರಯತ್ನ ಸಿಗುವುದಿಲ್ಲ ಕಠಿಣ ಪರಿಶ್ರಮ ದೇವರ ಅನುಗ್ರಹ ನಿಮಗೆ ಸಹಾಯಕ 

ವೃಶ್ಚಿಕ ರಾಶಿ:  ಈ ರಾಶಿಯವರಿಗೆ ಸಾಕಷ್ಟು ಟೀಕೆ ಟಿಪ್ಪಣಿಗಳು ಉಂಟಾಗಬಹುದು ಪ್ರಶ್ನಾರ್ಥಕ ವಾಗಿ ಸವಾಲು ಬರಬಹುದು ನಿಮ್ಮ ಅಂತರಾತ್ಮನ ನಾಯಕನನ್ನು ಜಾಗೃತಿ ಗೊಳಿಸಬೇಕು  ಪ್ರಮೂಖವಾಗಿ ಸಂವಹನ ಮಾತು ಮತ್ತು ಉತ್ತರ ಪ್ರತಿಕ್ರಿಯೆಗಳ ಮೇಲೆ ನಿಂತಿರುವ ಕಾರಣ ಅದರ ಮೇಲೆ  ಜ್ಞಾನ ಕೇಂದ್ರಿಕರಿಸುವುದು ಉತ್ತಮ ಮಾರ್ಗ .

ಧನಸ್ಸು ರಾಶಿ :  ಈ ರಾಶಿಯವರು ಕುಜನ ಒಂದು ಪ್ರಭಾವದಿಂದ ಕೋಪ ಉದ್ವೇಗ ಹಠ ಸಾದನೆಗೆ ಪ್ರೇರಣೆ ಉಂಟಾಗಬಹುದುದು  ಮೌನ ಕಾಪಾಡಿಕೊಳ್ಳುವುದು ಉತ್ತಮ  ಭಾವನಾತ್ಮಕವಾಗಿ ಹೆಚ್ಚು ಒಳಗಾಗುವ ಪರಿಣಾಮ ಸಂವೇದನೆಯನ್ನು ನಿಯಂತ್ರಿಸಲು ಪ್ರಯತ್ನಿಸಿ ದ್ವೇಷವನ್ನು ತಪ್ಪಿಸಿ.

ಮಕರ ರಾಶಿ :  ಈ ರಾಶಿಯವರು  ಕೆಲಸ ಕಾರ್ಯ ಉದ್ಯೋಗ ಹೆಚ್ಚು ಜವಾಬ್ದಾರಿ ಜಾಗೃತಿ ತೀಕ್ಷ್ಣ ದೃಷ್ಟಿ ಹರಿಸುವುದು ಉತ್ತಮ ಯಾವುದೇ ಸಂಕೋಚ ವಿಲ್ಲದ ನಿಮ್ಮ ಕೆಲಸ ಕಾರ್ಯಕ್ಕೆ ದಕ್ಕೆ ತರುವಂತಹದ್ದನ್ನು ಬೇರು ಸಮೇತ ವಾಗಿ ತೆಗೆದುಬಿಡಿ ಆಲಸ್ಯ ನಿರ್ಲಕ್ಷ್ಯ ಬೇಡ ಸಕರಾತ್ಮಕ ಆಲೋಚನೆ ಬೆಳಸಿಕೊಳ್ಳಿ  ಆಹಾರವನ್ನು ದಾನ ಮಾಡಿ.

ಕುಂಭ ರಾಶಿ : ಜೀವನದ ಪಾಠ ಎಷ್ಟು ಎಂದರೆ ಎಷ್ಟಾದರೂ ಮುಗಿಯುವುದಿಲ್ಲ ಹಾಗೆಯೇ ಈ ವಾರ ಹೊಸದಾಗಿ ಪಾಠ ಕಲಿಯಬಹುದು ಅನುಭವ ಅಥವಾ ನೋಡಿ ಯಾದರೂ ಕಲಿಯಬಹುದು ಅಜ್ಞಾನದ ಅಂದಕಾರ ಸುಳಿಯುವುದಕ್ಕೆ ಬಿಡಬೇಡಿ ಸುಲಭವಾಗಿ ಯಾರನ್ನು ನಂಬ ಬೇಡಿ  ಆರೋಗ್ಯ ಮತ್ತು ಹಣಕಾಸು ವಿಚಾರದಲ್ಲಿ ಗಮನ ಹರಿಸಿ ಮಾತೃವಿನ ಆಶೀರ್ವಾದ ಪಡೆಯಿರಿ 

ಮೀನ ರಾಶಿ : ಪ್ರಮುಖ ವಿಷಯವೆಂದರೆ ಅವಕಾಶವನ್ನು ತೆಗೆದುಕೊಳ್ಳಲು ಹೆದರುವುದಿಲ್ಲ. ನೆನಪಿಡಿ, ಪ್ರಯತ್ನಿಸದಿರುವುದು ದೊಡ್ಡ ವೈಫಲ್ಯ. ಒಮ್ಮೆ ನೀವು ಮಾಡಲು ಇಷ್ಟಪಡುವದನ್ನು ನೀವು ಕಂಡುಕೊಂಡರೆ, ಅದನ್ನು ಮಾಡುವಲ್ಲಿ ಅತ್ಯುತ್ತಮವಾಗಿರಿ. ಕೆಲಸದ ಸ್ಥಳದಲ್ಲಿ ನೀವು ಎದುರಿಸುತ್ತಿರುವ ಅಡೆತಡೆಗಳು ಅಥವಾ ಹಠಾತ್ ದ್ವೇಷದಿಂದ ವಿಚಲಿತರಾಗಬೇಡಿ ಏಕೆಂದರೆ ಅದು ಪರಿಹರಿಸಲ್ಪಡುತ್ತದೆ. ಒಟ್ಟಾರೆಯಾಗಿ, ದೀರ್ಘ ದಣಿದ ವಾರವು ನಿಮ್ಮಿಂದ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿಸಬೇಡಿ ಮತ್ತು ಕಡಿಮೆ ಆಕಾಂಶೆಯನ್ನು ಇಟ್ಟುಕೊಳ್ಳಬೇಡಿ.

ಪ್ರತಿ ವಾರದ ಭವಿಷ್ಯ ತಿಳಿಯಲು vijayavarthe.com ಇಂದೇ ಸಬ್ ಸ್ಕ್ರೈಬ್ ಮಾಡಿ.

 

LEAVE A REPLY

Please enter your comment!
Please enter your name here