ಹುಬ್ಬಳ್ಳಿ: ಜೆಡಿಎಸ್’ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ. ಹೆಚ್.ಡಿ.ಕುಮಾರಸ್ವಾಮಿ ಅವರು ಟಿಕೆಟ್ ತ್ಯಾಗ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಒತ್ತಾಯ ಮಾಡುವ ಮೂಲಕ ಸಿಪಿ ಯೊಗೇಶ್ವರ ಪರ ಬ್ಯಾಟಿಂಗ್ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಸಹಾಯ ನಮಗೆ ಬೇಕು. ನಮ್ಮ ಶಕ್ತಿ ಕುಮಾರಸ್ವಾಮಿ ಅವರಿಗೆ ಬೇಕು. ಕುಮಾರಸ್ವಾಮಿ ಬಂದಿರೋದ್ರಿಂದ ನಮಗೆ ಲೋಕಸಭೆಯಲ್ಲಿ ಅನುಕೂಲ ಆಗಿದೆ. ಜೆಡಿಎಸ್ ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ. ಎರಡು ಕಡೆಯವರಿಗೂ ಲಾಭ ಆಗಿದೆ. ಉಪಚುನಾವಣೆಯಲ್ಲಿ ಟಿಕೆಟ್ ನ್ನು ನಮ್ಮ ಪಕ್ಷದ ಕಾರ್ಯಕರ್ತರಿಗೆ ಕೊಡಬೇಕು ಅನ್ನೋದು ಮುಖ್ಯ. ಕುಮಾರಸ್ವಾಮಿ ಅವರು ಟಿಕೆಟ್ ತ್ಯಾಗ ಮಾಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೇಸ್ ಸರ್ಕಾರ ಮುಸ್ಲೀಂಮರ ತುಷ್ಠಿಕರಣಕ್ಕೆ ಮುಂದಾಗಿದೆ.

ಇನ್ನೂ ಗಂಗಾಜಲದಿಂದ ಬಿಜೆಪಿ ಕಚೇರಿಗಳ ಶುದ್ದಿಕರಣ ವಿಚಾರವಾಗಿ ಮಾತನಾಡಿ ಹಳೇ ಹುಬ್ಬಳ್ಳಿ ಗಲಭೆ ವಾಪಸ್ ಪಡೆದಿರೋದು ದುರಂತ. ದೇಶದ್ರೋಹಿಗಳು ಪೊಲೀಸ್ ಠಾಣೆ ಸುಡಲು ಮುಂದಾಗಿದ್ರು. ದೇಶದಲ್ಲಿ ಯಾವುದೇ ಪಕ್ಷ ಇದ್ರು ಇಂತಹದ್ದನ್ನು ಒಪ್ಪಿಕೊಳ್ಳಬಾರದು. ಪೋಲೀಸರ ನೈತಿಕತೆ ಅಡಗಿ ಹೋಗುತ್ತದೆ. ಕೆಜೆ ಹಳ್ಳಿ ಡಿಜೆ ಹಳ್ಳಿ ನಂತರ ಹುಬ್ಬಳ್ಳಿ ಗಲಭೆ ಬಹಳ ಗಂಭೀರವಾದದ್ದು
ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ತೆಗೆದುಕೊಳ್ಳಬಾರದು
ಹಾಗೇನಾದ್ರೂ ಮಾಡಿದ್ರೆ ಹೈಕೋರ್ಟ್ ಮೆಟ್ಟಿಲು ಹತ್ತುತ್ತೇವೆ, ಕಾಂಗ್ರೆಸ್ ಸರ್ಕಾರ ಮುಸ್ಲಿಂರ ತುಷ್ಟಿಕರಣಕ್ಕೆ  ಮುಂದಾಗಿದೆ ಎಂದು ಆರೋಪಿಸಿದರು.

ವಕ್ಫ್ ಬೋರ್ಡ್ ಆಸ್ತಿ ಜಮೀರ್ ಅವರ ಅಪ್ಪಂದಾ…?

ವಕ್ಫ್ ಬೋರ್ಡ್ ಆಸ್ತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಜಮೀರ್ ಅಹ್ಮದ್ ಬಂದಾಗ 11 ಸಾವಿರ ಎಕರೆ ಇತ್ತು, ಜಿಲ್ಲಾಧಿಕಾರಿ ನನಗೆ ಮಾಹಿತಿ ಕೊಟ್ಟ ಹಾಗೇ 16 ಸಾವಿರ ಎಕರೆ, ಕರ್ನಾಟಕದಲ್ಲೇ ಆರುವರೆ ಲಕ್ಷ ಎಕರೆ ಕ್ಲೇಮ್ ಮಾಡ್ತಾ ಇದ್ದಾರೆ. ರಾಜ್ಯದಲ್ಲೇ ಹೀಗಾದ್ರೆ ದೇಶದಲ್ಲಿ ಎರಡು ಪಾಕಿಸ್ತಾನ್ ಆಗುತ್ತೆ‌. ಹೊಸ ಪಾರ್ಲಿಮೆಂಟ್ ಕ್ಲೇಮ್ ಮಾಡ್ತಾ ಇದ್ದಾರೆ. ಈ ಆಸ್ತಿ ಜಮೀರ್ ಅಹ್ಮದ್ ಅಪ್ಪಂದ ಏನ್ರಿ?. ಮೊಘಲರು ಅಯೋಗ್ಯ ನನ್ನ ಮಕ್ಕಳು, 1500 ವರ್ಷದ ಹಿಂದೆ ಎಲ್ಲಿ ಮುಸಲ್ಮಾನರೆಲ್ಲಿ ಇದ್ರು,
ನಮ್ಮಿಂದ ಟಿಪ್ಪು ಸುಲ್ತಾನ್ ಸೇರಿ ಹಲವರಿಂದ ಹೆದರಿ ಮತಾಂತರಗೊಂಡವರು ಇಲ್ಲಿ ಬಿತ್ತಿದ ಬೀಜಗಳು ಅಲ್ಲಾ ಇವು ಇವರಿಗೆ ಈ ದೇಶದ ಮೇಲೆ ಯಾವುದೇ ಹಕ್ಕಿಲ್ಲ ಎಂದರು.

LEAVE A REPLY

Please enter your comment!
Please enter your name here