ಪೈಪ್ ಲೈನ್ ಹೊಡೆದು ಕಾಲೋನಿಗೆ ನುಗ್ಗಿದ ನೀರು:ರಸ್ತೆ‌ ತಡೆದು ಪ್ರತಿಭಟನೆ.

ತಿಪಟೂರು: ಪೈಪ್ ಲೈನ್ ಹೊಡೆದು ಕಾಲೋನಿಯೊಳಗೆ ನೀರು ನುಗ್ಗಿದ ಪರಿಣಾಮ ರೊಚ್ಚಿಗೆದ್ದ ನಿವಾಸಿಗಳು ದಿಡೀರ್ ರಸ್ತೆ ತಡೆದು ಪ್ರತಿಭಟನೆ ನಡೆಸಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ.

ನಗರದ 31 ನೇ ವಾರ್ಡ್ ಗೊರಗೊಂಡನಹಳ್ಳಿಯಲ್ಲಿ ಸೋಮವಾರ ರಾತ್ರಿ ಕುಡಿಯುವ ನೀರಿನ ಪೈಪ್ ಲೈನ್ ಹೊಡೆದು ಅಪಾರ ಪ್ರಮಾಣದ ನೀರು ಕಾಲೋನಿ ಒಳಗೆ ನುಗ್ಗಿದೆ. ಇದರಿಂದ ಕೆಲಕಾಲ ಮನೆಗಳಿಗೆ ನೀರು ನುಗ್ಗುತ್ತದೆ ಎಂಬ ಆತಂಕ ಎದುರಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ನಿವಾಸಿಗಳು ಕಾಲೋನಿಯೋಳಗೆ ಹರಿಯುತ್ತಿದ್ದ ನೀರನ್ನ ನಿಯಂತ್ರಿಸಲು ಹರಸಾಹಸ ಪಟ್ಟರು ಆದ್ರೂ ಸಾದ್ಯವಾಗಲಿಲ್ಲ.

ಬಳಿಕ ನೀರನ್ನ ಸ್ಥಗಿತಗೊಳಿಸಿ ಸಮಸ್ಯೆ ಸರಿಪಡಿಸಲು ನಗರಸಭೆ ಅಧಿಕಾರಿಗಳು, ಕೌನ್ಸಿಲರ್ ಗಳ ಪೋನ್ ಮಾಡಿದ್ರೆ ಯಾರೋಬ್ಬರು ಸ್ಪಂದಿಸಿಲ್ಲ. ಇದರಿಂದ ಬೇಸತ್ತ ಕಾಲೋನಿ‌ ನಿವಾಸಿಗಳು ವೈಟಿ ರಸ್ತೆಗೆ ಅಡ್ಡಲಾಗಿ ಮರದ ತುಂಡು, ಕಲ್ಲುಗಳನ್ನ ಹಾಕಿ ವಾಹನಗಳನ್ನ ತಡೆದು ದಿಡೀರ್ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಕೆಲಕಾಲ‌ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಬಳಿಕ ನಗರಸಭೆ ಆಯುಕ್ತ ಉಮಾಕಾಂತ್ ಅವರಿಗೆ ವಿಷಯ ತಿಳಿಸಿದ ಮೇಲೆ ಸಮಸ್ಯೆಯನ್ನ ಅರಿತ ಆಯುಕ್ತರು ಎಂಜಿನಿಯರ್ ಗಳನ್ನ ಸ್ಥಳಕ್ಕೆ ಕಳುಹಿಸಿ ತಕ್ಷಣ ನೀರು ನಿಲ್ಲಿಸಿದ್ರು. ಸಮಸ್ಯೆಯನ್ನ ಸರಿಪಡಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನ ಸ್ಥಗಿತಗೊಳಿಸಿದರು.

ಅವೈಜ್ಞಾನಿಕ ಕಾಮಗಾರಿ: ಅಧಿಕಾರಿಗಳ ನಿರ್ಲಕ್ಷ್ಯ.

ಇತ್ತೀಚೆಗಷ್ಟೆ ವೈ ಟಿ ರಸ್ತೆ ಬದಿಯಲ್ಲಿ 24×7 ಕುಡಿಯುವ ನೀರಿನ ಯೋಜನೆಗೆ ಪೈಪ್ ಲೈನ್ ಅಳವಡಿಸುವ ಕಾಮಗಾರಿ ನಡೆದಿತ್ತು. ಕಾಮಗಾರಿಯನ್ನ ಅವೈಜ್ಞಾನಿಕವಾಗಿ ಮಾಡಲಾಗಿದ್ದು ಕಾಮಗಾರಿ ನಡೆಸಿದ ಸ್ಥಳದಲ್ಲಿ ಹಲವೆಡೆ ಮಣ್ಣು ಕುಸಿದು ಗುಂಡಿ- ಕಂದಕಗಳುಂಟಾಗಿದೆ. ಕಾಲೋನಿಗೆ ಅಡ್ಡರಸ್ತೆಗಳಲ್ಲಿಯೂ ಮಣ್ಣು ಕುಸಿದು ಗುಂಡಿಬಿದ್ದಿದ್ದರಿಂದ ನಿವಾಸಿಗಳು, ವಾಹನಗಳು ಓಡಾಡಲು ಅಡಚಣೆಯಾಗಿದೆ.

ಹಲವು ಭಾರಿ ವಾಹನಗಳು ಗುಂಡಿಯಲ್ಲಿ ಸಿಲುಕಿ ಚಾಲಕರು ಪರಾದಾಡುವಂತಾಗಿದೆ. ಕಾಲೋನಿ ಬಳಿ ವೈ ಟಿ ರಸ್ತೆ ಬದಿಯಲ್ಲಿ ಅರ್ದ ಕಿಲೋಮೀಟರ್ ಗೂ ಹೆಚ್ಚು ಕಡೆ ಮಣ್ಣು ಕುಸಿದು ಗುಂಡಿಗಳಾಗಿದ್ದು ಸಾರ್ವಜನಿಕರ ಬಲಿಗಾಗಿ ಬಾಯ್ತೆರೆದು ಕಾಯುತ್ತಿವೆ. ಇದನ್ನ ಸರಿಪಡಿಸುವಂತೆ 31 ನೇ ವಾರ್ಡ್ ಕೌನ್ಸಿಲರ್‌ ಅಶ್ವಿನಿ‌ದೇವರಾಜ್ ಅವರಿಗೆ ಹೇಳಿದ್ರೆ ಒಮ್ಮೆಯೂ ಇತ್ತ ತಿರುಗಿ ನೋಡುವ ಪ್ರಯತ್ನ‌ಮಾಡಿಲ್ಲವಂತೆ. ಇನ್ನೂ ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದ್ರು ಪ್ರಯೋಜನವಾಗಿರಲಿಲ್ಲ‌ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಈಗಾಗಿ ಕೂಡಲೆ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.

error: Content is protected !!