ಚಿಲ್ಲರೆ 100 ರೂ ವಾಪಸ್ ಕೊಡು ಇಲ್ಲಾ ಪತ್ನಿಯನ್ನ ಕಳುಹಿಸು: ಚಿಲ್ಲರೆ ಹಣಕ್ಕಾಗಿ ದಲಿತ ಕೂಲಿ ಕಾರ್ಮಿಕನ ಮೂಳೆ ಮುರಿದ ಸವರ್ಣೀಯರು:

ತಿಪಟೂರು: 100 ರೂ ಚಿಲ್ಲರೆ ಹಣವನ್ನ ವಾಪಸ್ ನೀಡಿಲ್ಲವೆಂದು ಸಿಮೆಂಟ್ ಅಂಗಡಿಯ ಗುಮಾಸ್ತನೊಬ್ಬ ದಲಿತ ಹಮಾಲಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆಗೈದು ಭುಜದ ಮೂಳೆ ಮುರಿದಿರುವ ಘಟನೆ ತಿಪಟೂರು ತಾಲ್ಲೂಕಿನ ಗೊರಗೊಂಡನಹಳ್ಳಿಯಲ್ಲಿ ಅ 13 ರಂದು ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಗೊರಗೊಂಡನಹಳ್ಳಿ ಗ್ರಾಮದ ಕಾಲೋನಿ ನಿವಾಸಿ ನಾರಾಯಣ (32) ದೌರ್ಜನ್ಯಕ್ಕೊಳಗಾದ ಹಮಾಲಿ. ಗ್ರಾಮದಲ್ಲಿರುವ ಭಾರತಿ ಸಿಮೆಂಟ್ ಅಂಗಡಿಯಲ್ಲಿ ನಾರಾಯಣ ಹಮಾಲಿಯಾಗಿ ಕೆಲಸ ಮಾಡುತ್ತಿದ್ದ. ಅ.13 ರಂದು ಸಿಮೆಂಟ್ ಅಂಗಡಿಯ ಗುಮಾಸ್ತ ದರ್ಶನ್ ಕೂಲಿ ಹಣವಾಗಿ 500 ರೂ ನೋಟು ನೀಡಿ 100 ರೂ ಚಿಲ್ಲರೆ ಹಣವನ್ನ ವಾಪಸ್ ನೀಡುವಂತೆ ತಿಳಿಸಿದ್ದ. ಬಳಿಕ ಚಿಲ್ಲರೆ ಹಣವನ್ನ ಹಿಂತಿರುಗಿಸಿಲ್ಲವೆಂದು ಅವಾಚ್ಯ ಶಬ್ಧಗಳಿಂದ ಜಾತಿನಿಂದನೆ ಮಾಡಿ ಚಿಲ್ಲರೆ ಹಣ ಕೊಡು ಇಲ್ಲಾಂದ್ರೆ ನಿನ್ನ ಹೆಂಡತಿಯನ್ನ ನನ್ನ ಬಳಿ ಕಳುಹಿಸು ಸೂ… ಭೋ…ಮಗನೆ ಎಂದು ಏಕಾಏಕಿ ರಾಡ್ ನಿಂದ ಹಲ್ಲೆಗೈದಿದ್ದಾರೆಂದು ನಾರಾಯಣ ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆಗೊಳಗಾಗಿ ಅಂಗಡಿ ಬಾಗಿಲಿನಲ್ಲಿ ಬಿದ್ದಿದ್ದ ಗಾಯಾಳು ನಾರಾಯಣನನ್ನ ಗ್ರಾಮದ ಯುವಕರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಾರಾಯಣ್ ಗೆ ಬುಜದ ಮೂಳೆ ಮುರಿದಿದ್ದು ಹಾಯ್ಕೊಂಡು ತಿನ್ನುವ ಕೋಳಿಯ ಕಾಲು ಮುರಿದಂತಾಗಿದೆ. ನಾರಾಯಣಗೆ ಎರಡು ಮಕ್ಕಳಿದ್ದು ಸಾಲ ಸೋಲ ಮಾಡಿ ಜೀವನ ಸಾಗಿಸ್ತಿದ್ದೆವು ಭುಜದ ಮೂಳೆ ಮುರಿದಿದ್ದು ಕೆಲಸ ಮಾಡಲು ಸಾದ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ ಮುಂದೆ ನಮಗ್ಯಾರು ದಿಕ್ಕು ಎಂದು ಕಣ್ಣೀರಿಡುತ್ತಾರೆ ಪತ್ನಿ ಕಾವ್ಯ.

ಇಷ್ಟೇ ಅಲ್ಲದೆ ಪ್ರಕರಣ ನಡೆದ ಬಳಿಕ ದೂರು ನೀಡದಂತೆ ಪ್ರಾಣ ಬೆದರಿಕೆಯೊಡ್ಡಿರುವ ಆರೋಪಿಗಳು ನಮ್ಮ ಬಳಿ ಹಣವಿದೆ, ನೀವು ಬಡವರು ನೀವು ಎಲ್ಲಿ ಹೋದ್ರು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಕಾನೂನಿನ ಮೇಲೆ ಸವಾಲು ಹಾಕಿದ್ದಾರೆ ಎಂದು ದೌರ್ಜನ್ಯಕ್ಕೊಳಗಾದ ನಾರಾಯಣ ಆರೋಪಿಸಿದ್ದಾರೆ.

ಸದ್ಯ ಭಾರತಿ ಸಿಮೆಂಟ್ ಅಂಗಡಿ ಮಾಲಿಕ ದೀಪು ಹಾಗೂ ಗುಮಾಸ್ತ ಬೆಳಗರಹಳ್ಳಿ ನಿವಾಸಿ ದರ್ಶನ್ ಮೇಲೆ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ, ಹಲ್ಲೆ, ಪ್ರಾಣ ಬೆದರಿಕೆ ಯೊಡ್ಡಿದ ಬಗ್ಗೆ ದೂರು ದಾಖಲಾಗಿದೆ.

error: Content is protected !!