ವಿಜಯ್ “ಬೀಸ್ಟ್” ರಿಲೀಜ್ ಡೇಟ್ ಫಿಕ್ಸ್

ಚೆನ್ನೈ, ಜನವರಿ 01, ಇಳಯದಳಪತಿ ವಿಜಯ್ ನಟನೆಯ ಭಾರಿ ಬಡ್ಜೆಟ್ ಸಿನಿಮಾ “ಬೀಸ್ಟ್” ಬಿಡುಗಡೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ದೆರೆತಿದೆ.! ಕಳಾನಿಧಿ ಮಾರನ್ ಅರ್ಪಿಸುತ್ತಿರುವ ಸನ್ ಪಿಕ್ಚರ್ಸ್ ನ ಅದ್ದೂರಿ ಮೇಕಿಂಗ್ ನೊಂದಿಗೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ವಹಿಸಲಿದ್ದಾರೆ ವಿಜಯ್ ಗೆ ನಾಯಕಿಯಾಗಿ ಪೂಜ ಹೆಗ್ಡೆ ನಟಿಸುತ್ತಿದ್ದಾರೆ.

2022 ರ ಹೊಸ ವರ್ಷದ ಶುಭಾಶಯಗಳನ್ನ ತಿಳಿಸುತ್ತ ಇತ್ತೀಚೆಗೆ ಚಿತ್ರದ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಈ ಸಿನಿಮಾವನ್ನು ಬೇಸಿಗೆಯಲ್ಲಿ ಬಿಡುಗಡೆಗೊಳಿಸುವುದಾಗಿ ಚಿತ್ರ ನಿರ್ಮಾಣ ತಂಡ ತಿಳಿಸಿದೆ.

ಈಗಾಗಲೇ ಬೇಸಿಗೆಲ್ಲಿ ಬಿಡುಗಡೆಯಾಗಲು ತೆಲುಗು ಸ್ಟಾರ್ ನಟರ ಚಿತ್ರಗಳು ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’, ಯಶ್ ನಟನೆಯ “ಕೆಜಿಎಫ್”, ಬಾಲಿವುಡ್ ಮಲ್ಟಿ ಸ್ಟಾರರ್ ಸಿನಿಮಾ ಲಾಲ್ ಸಿಂಗ್ ಚದ್ದಾ, ನಂಥ ಚಿತ್ರಗಳು ಸಾಲಗಟ್ಟಿ ನಿಂತಿವೆ. ಹೊಸದಾಗಿ ಈ ಪಟ್ಟಿಯಲ್ಲಿ ವಿಜಯ್ ನಟನೆಯ “ಬೀಸ್ಟ್” ಸಿನಿಮಾ ಕೂಡ ಈ ಸಾಲಿನಲ್ಲಿ ಸೇರ್ಪಡೆಯಾಗಿದೆ. ಈ ಬೇಸಿಗೆಯಲ್ಲಿ ಸಿನಿಪ್ರಿಯರನ್ನ ಈ ಸಿನಿಮಾಗಳು ಎಷ್ಟರ ಮಟ್ಟಿಗೆ ರಂಜಿಸಲಿದೆ ಎಂದು ಕಾದು ನೋಡಬೇಕಾಗಿದೆ.

error: Content is protected !!