ಒಂದೇ ಸೂರಿನಡಿ ವಿವಿಧ ಆರೋಗ್ಯ ಸೌಲಭ್ಯ: ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್


ತುಮಕೂರು : ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಯಕ್ರಮಗಳು ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ್ರಗಳನ್ನು ಮೇಲ್ದರ್ಜೆಗೇರಿಸುವ ಕುರಿತು ಸಾರ್ವಜನಿಕ ಅರಿವು ಮೂಡಿಸುವ ಸಲುವಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಎಲ್‌ಇಡಿ ವಾಹನಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಹಸಿರು ನಿಶಾನೆ ತೋರಿದರು.

ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿಗಳು, ಈ ಎಲ್‌ಇಡಿ ವಾಹನವು ಜಿಲ್ಲೆಯ ತುಮಕೂರು ತಾಲೂಕಿನ ತುಮಕೂರು ನಗರ, ಹೆಬ್ಬೂರು, ನಾಗವಲ್ಲಿ, ಕ್ಯಾತ್ಸಂದ್ರ, ಮಲ್ಲಸಂದ್ರ; ಸಿರಾ ತಾಲೂಕಿನ ಶಿರಾ ನಗರ, ಬ್ರಹ್ಮಸಂದ್ರ, ಪಟ್ಟನಾಯಕನಹಳ್ಳಿ, ಬುಕ್ಕಾಪಟ್ಟಣ, ತಾವರೇಕೆರೆ; ಕುಣಿಗಲ್ ತಾಲೂಕಿನ ಕುಣಗಲ್ ಪಟ್ಟಣ, ಯಡಿಯೂರು, ಹುಲಿಯೂರುದುರ್ಗ, ಅಮೃತೂರು, ಹುತ್ರಿದುರ್ಗ; ಚಿಕ್ಕನಾಯಕನಹಳ್ಳಿ ತಾಲೂಕಿನ ಚಿಕ್ಕನಾಯಕನಹಳ್ಳಿ ಪಟ್ಟಣ, ಹುಳಿಯಾರು, ದಸೂಡಿ, ಹಂದನಕೆರೆ, ಕುಪ್ಪೂರು ಹಾಗೂ ತಿಪಟೂರು ತಾಲೂಕಿನ ತಿಪಟೂರು ನಗರ, ಹಾಲ್ಕುರಿಕೆ, ನೊಣವಿನಕೆರೆ, ಕೆ.ಬಿ ಕ್ರಾಸ್, ಹೊನ್ನವಳ್ಳಿ ಪ್ರದೇಶಗಳಲ್ಲಿ ಸಂಚರಿಸಿ ಜನ ಜಾಗೃತಿ ಮೂಡಿಸಲಿದೆ.

ಒಂದೇ ಸೂರಿನಡಿ ಗರ್ಭಿಣಿ/ಬಾಣಂತಿ ಆರೈಕೆ, ನವಜಾತ ಶಿಶುಗಳ ನೋಂದಣಿ/ಆರೈಕೆ/ಸಲಹೆ ಮತ್ತು ಚಿಕಿತ್ಸೆ, ಸಾಂಕ್ರಾಮಿಕ ರೋಗಗಳ ತಪಾಸಣೆ ಹಾಗೂ ಚಿಕಿತ್ಸೆ, ಅರ್ಹ ದಂಪತಿಗಳಿಗೆ ತಾತ್ಕಾಲಿಕ ಮತ್ತು ಶಾಶ್ವತ ಗರ್ಭನಿರೋಧಕ ಸೇವೆಗಳು, ಕಣ್ಣು-ಕಿವಿ-ಗಂಟಲು-ಬಾಯಿ ಸಂಬಂಧಿ ರೋಗಗಳ ತಪಾಸಣೆ, ಆಪ್ತ ಸಮಾಲೋಚಕರೊಡನೆ ಚರ್ಚಿಸುವ ಸೌಲಭ್ಯ ಸೇರಿದಂತೆ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಪಿಹೆಚ್‌ಸಿಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ. ಸಿಇಓ ಗಂಗಾಧರಸ್ವಾಮಿ, ಡಿ.ಹೆಚ್.ಓ ಡಾ|| ನಾಗೇಂದ್ರಪ್ಪ, ಆರ್‌ಸಿಹೆಚ್ ಅಧಿಕಾರಿ ಡಾ|| ಕೇಶವರಾಜ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ|| ಸನತ್‌ಕುಮಾರ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ|| ಮೋಹನ್ ದಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!