ತುಮಕೂರು: ಒಳಮೀಸಲಾತಿ ಅನುಷ್ಠಾನ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಪರಿಶಿಷ್ಟ ಜಾತಿಗಳಲ್ಲೇ ಅಸ್ಪೃಷ್ಯ ರಾಗಿ ಗುರುತಿಸಿಕೊಂಡು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದ ತಳ ಸಮಾಜಗಳಲ್ಲಿ ಹೊಸ ಭರವಸೆ ಚಿಗುರೊಡೆದಿದೆ. ಅದೇಷ್ಟೋ ವರ್ಷಗಳ ಹೋರಾಟದ ಫಲ ಕೈಸೇರುವ ಸಮಯ ಸನ್ನಿಹಿತವಾಗಿದೆ ಎಂಬ ಸಂಭ್ರಮ ತಳ ಸಮುದಾಯಗಳಲ್ಲಿ ಮನೆ ಮಾಡಿದೆ. ಇದರ ಜೊತೆಗೆ ಒಳಮೀಸಲಾತಿ ಕುರಿತು ಹಲವಾರು ವಿಶ್ಲೇಷಣೆಗಳು, ಗೊಂದಲಗಳು ಶುರುವಾಗಿವೆ. ಪ್ರಸ್ತುತ ಒಳ ಮೀಸಲಾತಿ ಕುರಿತು ನ್ಯಾ.ಸದಾಶಿವ ಆಯೋಗ ಹಾಗೂ ನ್ಯಾ. ನಾಗಮೋಹನ್ ದಾಸ್ ಆಯೋಗಗಳು ನೀಡಿರುವ ಎರಡು ವರದಿಗಳು ರಾಜ್ಯ ಸರ್ಕಾರದ ಮುಂದಿವೆ. ಈ ಎರಡು ವರದಿಗಳಲ್ಲಿ ಯಾವುದನ್ನ ಅನುಷ್ಠಾನ ಮಾಡಬೇಕು, ಯಾವ ವರದಿಯನ್ನ ಅನುಷ್ಠಾನ ಮಾಡಿದ್ರೆ ಸೂಕ್ತ, ವರದಿ ಜಾರಿಗೆ ಎದುರಾಗುವ ಸವಾಲುಗಳು ಏನು ಎಂಬ ಬಗ್ಗೆ ಒಳಮೀಸಲಾತಿ ಸಮೀತಿಯ ಅಧ್ಯಕ್ಷರಾಗಿದ್ದ ಮಾಜಿ ಕಾನೂನು ಸಚಿವ ಮಾಧುಸ್ವಾಮಿ ವಿಜಯವಾರ್ತೆಯೊಂದಿಗೆ ತಮ್ಮ ಅನುಭವವನ್ನು ಸವಿಸ್ತಾರವಾಗಿ ಹಂಚಿಕೊಂಡಿದ್ದಾರೆ.
ಸಂವಿಧಾನಾತ್ಮಕವಾಗಿ ನೀಡಿರುವ ಮೀಸಲಾತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುನ್ನು ಗೌರವದಿಂದ ಸ್ವಾಗತಿಸಿ ಅವರು ಮಾತನಾಡಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಆಶಯದಂತೆ ಸಂವಿಧಾನಾತ್ಮಕವಾಗಿ ರಾಜ್ಯದಲ್ಲಿ ಶೇ 15 ಪ.ಜಾ ಗೆ, 3 ಪ.ಪಂ ಕ್ಕೆ ಒಟ್ಟು ಶೇ 18 ಮೀಸಲಾತಿ ನಿಗದಿಯಾಗಿತ್ತು. ಆದರೆ ಅಸ್ಪೃಷ್ಯರಿಗೆ ಸಹಾಯವಾಗಬೇಕಾದ ಮೀಸಲಾತಿಯನ್ನ ಕೆಲವೇ ಸ್ಪೃಷ್ಯ ಜಾತಿಗಳು ಮಾತ್ರ ಬಳಸಿಕೊಳ್ಳುತ್ತಿವೆ ಎಂದು ಅಸ್ಪೃಷ್ಯ ಜಾತಿಗಳು ಹೋರಾಟ ಮಾಡಿ ಹೈಕೋರ್ಟ್ ಮೊರೆ ಹೋಗಿದ್ದರು. ರಾಜ್ಯದಲ್ಲಿ ಸುಮಾರು 102 ರಿಂದ 103 ಪ.ಜಾತಿಗಳ ಜನಾಂಗದವರಿದ್ದಾರೆ 53 ರಿಂದ 54 ಪರಿಶಿಷ್ಟ ಪಂಗಡದ ಜನಾಂಗದರಿವರಿದ್ದಾರೆ. ಪ್ರಮುಖವಾಗಿ ಪರಿಶಿಷ್ಟ ಜಾತಿಯವರು ಮಾತ್ರವೇ ಒಳಮೀಸಲಾತಿ ಜಾರಿಗೆ ಹೋರಾಟ ಮಾಡುತ್ತಿದ್ದರು, ಆಗ ಸರ್ಕಾರ ನ್ಯಾಯಾದೀಶ ಸದಾಶಿವ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚನೆ ಮಾಡಿ ಒಂದು ವರದಿ ಕೇಳಿತ್ತು ಅದರಂತೆ ಆಯೋಗ ವರದಿ ನೀಡಿದ್ದರು. ಅದರ ಪ್ರಕಾರ ಪರಿಶಿಷ್ಟ ಜಾತಿಯಲ್ಲಿ 4 ಗುಂಪುಗಳಾಗಿ ಮಾಡಿದರು. ಎಡಗೈ ಮಾದಿಗ ಸಮುದಾಯಕ್ಕೆ ಶೇ 6, ಬಲಗೈ ಒಲೆಯ ಸಮುದಾಯಕ್ಕೆ ಶೇ 5, ಇನ್ನಿತರೆ ಲಂಬಾಣಿ, ಬೋವಿ ಸಮುದಾಯಗಳು ಪ.ಜಾತಿಯಲ್ಲೇ ಸ್ಪೃಷ್ಯ ಜಾತಿಗಳು ಎಂದು ಶೇ 3 ನೀಡಿದ್ರು, ಇನ್ನೂ ಶೇ 1 ನ್ನ ಮೈಕ್ರೋ ಮೈನಾರಿಟೀಸ್ ಪ.ಜಾತಿಯವರಿಗೆ ನೀಡಲಾಯಿತು. ಇದಾದ ಮೇಲೆ ಯಾವುದೋ ಕೇಸಲ್ಲಿ ಸುಪ್ರಿಂ ಕೊರ್ಟ್ ಮುಂದೆ ಒಳಮೀಸಲಾತಿ ಮಾಡಬಾರದು ಎಂದು ನಿರ್ಧಾರವಾಯಿತು.
ಇದಾದ ಬಳಿಕ ನಮ್ಮ ಬಿಜೆಪಿ ಸರ್ಕಾರ ಬಂದಾಗ ಪ. ಜಾ ಮತ್ತು ಪ ಪಂಗಡದ ಮೀಸಲಾತಿಯನ್ನ ಹೆಚ್ಚು ಮಾಡಬೇಕು ಎಂದು ಬಹಳ ಒತ್ತಡ ಬಂದಾಗ ನ್ಯಾ. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಒಂದು ಆಯೋಗ ರಚನೆ ಮಾಡಿ ಕಮಿಟಿ ಮಾಡಿದ್ವಿ. ಅವರು ಎಸ್ ಸಿ ಗೆ 15 ರಿಂದ 17 ಮತ್ತು ಎಸ್ಟಿಗೆ 3 ರಿಂದ 7 ಮಾಡಿ ಶೇ 6 ಹೆಚ್ಚು ಮಾಡಿಕೊಟ್ಟರು. ಇದನ್ನ ಹೇಗೆ ಇತ್ಯರ್ಥ ಮಾಡಬೇಕೆಂದು ಒಳಮೀಸಲಾತಿ ಸಮೀತಿಗೆ ನನ್ನನ್ನ ಅಧ್ಯಕ್ಷನನ್ನಾಗಿ ಮಾಡಿ ಒಂದು ಶಿಫಾರಸನ್ನ ತಕ್ಷಣ ಕೊಡಬೇಕು ಎಂದು ಸರ್ಕಾರ ಅಪೇಕ್ಷೆ ಮಾಡಿದ ಮೇಲೆ ನಾವು ನಮ್ಮ ಸಮೀತಿಯವರು ಒಂದು ವರದಿಯನ್ನ ಕೊಟ್ಟೆವು. ಅದರ ಪ್ರಕಾರ ಸದಾಶಿವ ಆಯೋಗದಲ್ಲಿ ಎಡಗೈ ಮಾದಿಗ ಸಮಾಜಕ್ಕೆ ಶೇ 6 ಮಾಡಿದ್ದರು ಅದನ್ನು ಹಾಗೆ ಉಳಿಸಿ ಬಲಗೈ ಸಮಾಜಕ್ಕೆ 5 ಇದ್ದಿದ್ದನ್ನ 5.5 ಹೆಚ್ಚಿಸಿದ್ವಿ. ಲಂಬಾಣಿ ಬೋವಿ ಯವರಿಗೆ 3 ಇದ್ದಿದ್ದನ್ನು ಶೇ 4.5 ಮಾಡಿದ್ವಿ, ಮೈಕ್ರೋ ಮೈನಾರಿಟಿ ಸಣ್ಣ ಪುಟ್ಟ ಸಮುದಾಯಗಳಿಗೆ ಶೇ 1 ನೀಡಿ ಮೀಸಲಾತಿಯನ್ನ ಘೋಷಣೆ ಮಾಡಿದ್ದೇವೆ. ಇದರಲ್ಲಿ ಎರಡು ಸಮಸ್ಯೆಗಳು ಇದ್ದವು ಮೀಸಲಾತಿಯಲ್ಲಿ ಒಳಮೀಸಲಾತಿ ಮಾಡುವ ಅಧಿಕಾರ ರಾಜ್ಯಗಳಿಗೆ ಇಲ್ಲಾ ಎಂಬ ಸುಪ್ರೀಂ ಕೋರ್ಟ್ ನಿರ್ಧಾರ ಮತ್ತು ಶೇ 6 ಜಾಸ್ತಿ ಕೊಟ್ಟಿದ್ದರಿಂದ ಶೇ 50 ಮೀಸಲಾತಿಯನ್ನ ದಾಟಿ ಹೋಗಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವನ್ನ ದಾಟಿ ಹೋಗುತ್ತಿದೆ ಎಂಬುದು ಈ ಎರಡು ಪ್ರಕರಣಗಳು ನಮ್ಮ ಮುಂದೆ ಇತ್ತು. ನಾವು ಎರಡನೆಯದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ, ಶೇ 50 ದಾಟಿ ಹೋಗುವುದನ್ನ ಆಮೇಲೆ ನಿಭಾಯಿಸಿಕೊಳ್ಳುತ್ತೇವೆ ಎಂದು ಹೇಳಿ, ಈ ಶೇ 24 ಮೀಸಲಾತಿಯನ್ನ ವಿಂಗಡಿಸಿ ಕೊಟ್ಟೆವು. ಅದು ಅನುಷ್ಠಾನ ಮಾಡಲು ಸರ್ಕಾರದಿಂದ ಆದೇಶವನ್ನ ಮಾಡಲಾಯಿತು ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ಅಸ್ತು: ರಾಜ್ಯ ಸರ್ಕಾರದ ಮುಂದೆ ಎರಡು ಸವಾಲು;
ಇದೀಗ ಮತ್ತೆ ಸುಪ್ರೀಂ ಕೋರ್ಟ್ ಹೇಳಿದೆ ಮೀಸಲಾತಿಯಲ್ಲಿ ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ಇದೆ, ಇರಬೇಕು, ಇದರಲ್ಲಿ ಯಾವುದೇ ಗಹನವಾದ ವ್ಯತಿರಿಕ್ತ ಗಮನಿಸಿಲ್ಲ ಎಂದಿದೆ. ಅಲ್ಲಿಯ ಪರಿಸ್ಥಿತಿಗನುಗುಣವಾಗಿ ಜನಸಂಖ್ಯೆಗೆ(populations reservation) ಅನುಗುಣವಾಗಿ ಅವರ ಜೀವನದ ಮಟ್ಟಕ್ಕೆ ಅನುಗುಣವಾಗಿ ಪರಿಶಿಷ್ಟ ಜಾತಿಯಲ್ಲಿ ಯಾರು ಯಾರಿಗೆ ಎಷ್ಟು ಎಂಬುದನ್ನ ವಿಂಗಡಣೆ ಮಾಡಬಹುದು ಎಂಬ ತೀರ್ಮಾನ ಕೊಟ್ಟಿದೆ. ಈಗ ನಮ್ಮ ರಾಜ್ಯದ ಮುಂದೆ ಎರಡು ವಿಚಾರ ಇದೆ 18%, 15+3 ಕೊಟ್ಟುಕೊಂಡು ಹೋಗುವುದಾದ್ರೆ ಯಾವುದೇ ತಾಪತ್ರಯ ಕಾಂಗ್ರೇಸ್ ಸರ್ಕಾರಕ್ಕೆ ಇಲ್ಲಾ, ಅದು ನಮ್ಮಲ್ಲಿ ಚಾಲ್ತಿಯಲ್ಲಿದ್ದ 50% ಮೀಸಲಾತಿಯೊಳಗೆ ಬರಲಿದೆ. ಒಳಮೀಸಲಾತಿ ನಿಯಮ ಒಪ್ಪಿಕೊಬೇಕಾದ್ರೆ ಇದನ್ನ ತಕ್ಷಣ ಅನುಷ್ಠಾನ ಮಾಡಬೇಕಾದ್ರೆ ಯಾವ ಅಡಚಣೆ ಕಾನೂನಿನಲ್ಲಿ ಇದೆ ಎಂದು ನಾನು ಭಾವಿಸಿಲ್ಲ. ಆದರೆ ಹೆಚ್ಚುವರಿ ಶೇ 6 ನ್ನು ಸೇರಿಸಿ ಶೇ 24 ಮಾಡಿರೊದನ್ನ ಕೊಡಬೇಕು ಅಂದ್ರೆ ಅವರಿಗೆ 50% ದಾಟುತ್ತದೆ ಅಂದ್ರೆ ಹೆಚ್ಚುವರಿ ಕೊಟ್ಟಿರೊದಕ್ಕೆ ಅವರು ಸಂವಿದಾನದಲ್ಲಿ ತಿದ್ದುಪಡಿಯನ್ನ ಪಾರ್ಲಿಮೆಂಟ್ ಮುಂದೆ ಮಾಡಿಸಿಕೊಳ್ಳುತ್ತಾರಾ..? ಅಥವಾ ಅವರಿಗೊಂದು ಒತ್ತಡ ಇತ್ತು ಶೆಡ್ಯೂಲ್ 9 ರಲ್ಲಿ ಸೇರಿಸಿಕೊಡಿ, ಶೆಡ್ಯೂಲ್ 9 ರಲ್ಲಿ ಹೇಳಿದ್ರೆ ಹೈಕೊರ್ಟ್ ನಮ್ಮ ಮುಂದೆ ಬರಲ್ಲ ಇಮ್ಯೂನಿಟಿ ಇರುತ್ತೆ ಆ ಸೆಕ್ಷನ್ ಗೆ ಅಂತಾ, ಶೆಡ್ಯೂಲ್ 9 ಕೂಡ ಇಮ್ಯೂನ್ ಅಲ್ಲಾ ಅನ್ನೊದು ನಮ್ಮ ವಾದ ಇತ್ತು. ಶೆಡ್ಯೂಲ್ 9 ಪರಿಚಯಿಸಿದ್ದು ಬೇರೆ ಕಾರಣಕ್ಕೆ, ಹಾಗಾಗಿ ಅವೆಲ್ಲವನ್ನೂ ತಗೊಂಡೊಗಿ ಶೆಡ್ಯೂಲ್ 9 ನಲ್ಲಿ ಹಾಕಿ ಸುಪ್ರಿಂ ಕೋರ್ಟ್ ಗೆ ಆ ಶೆಡ್ಯೂಲ್ 9 ನಲ್ಲಿ ಹಾಕಿರೊರ ಮೇಲೆ ಅಧಿಕಾರ ವ್ತಾಪ್ತಿ ಇಲ್ಲಾ ಅಂತಾ ವಾದ ಮಾಡಲಿಕ್ಕೆ ಆಗದಿಲ್ಲ. ಅದರಂತೆ ಅಲ್ಲೂ ಕೂಡ ಅವರು ವಾದ ಮಾಡಬಹುದು ಅದರಂತೆ ತಮಿಳು ನಾಡು ಸರ್ಕಾರದು, ಬೇರೆ ಸರ್ಕಾರದು ಸುಪ್ರಿಂ ಕೊರ್ಟ್ನಲ್ಲಿ ಶೆಡ್ಯೂಲ್ 9 ನಲ್ಲಿ ಇದ್ರು ಕೊರ್ಟ್ ಮುಂದೆ ಪ್ರಶ್ನೆಯಾಗಿತ್ತು. ಆಗಾಗಿ ನಾವು ಏನಾಗುತ್ತೇ ಆಗಲಿ ಅಂತಾ ನಿರ್ಧಾರ ಮಾಡಿ ನಮ್ಮ ಸರ್ಕಾರ ಇದ್ದಾಗ ಮಾಡಿಕೊಟ್ಟೆವು ಎಂದಿದ್ದಾರೆ.
CM ಸಿದ್ದರಾಮಯ್ಯನವರ ಸರ್ಕಾರ ಪ.ಜಾತಿಗೆ 15% ಗೆ ನಿಲ್ತಾರೋ 17% ಹೋಗ್ತಾರೋ ಅದು ಅವರಿಗೆ ಬಿಟ್ಟದ್ದು: ಎರಡಕ್ಕೂ ಪರಿಹಾರ ಇದೆ.
ಇನ್ನೂ ಒಳಮೀಸಲಾತಿ ಅನುಷ್ಠಾನ ಕುರಿತು ಮಾತನಾಡಿದ ಮಾಜಿ ಸಚಿವ ಮಾಧುಸ್ವಾಮಿ ಈಗ ವೆಲ್ ಕಮ್ ಟ್ರೆಂಡ್, ಸ್ವಾಗತ ಮಾಡುವಂತ ತೀರ್ಮಾನ ಆಗಿದೆ, ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಇರಬೇಕು, ಇದನ್ನ ನಾನು ಸಾರ್ವಜನಿಕವಾಗಿಯೂ, ವೈಯಕ್ತಿಕವಾಗಿಯೂ ಬಹಳ ಮೆಚ್ಚುಗೆಯಿಂದ ಸ್ವಾಗತಿಸುತ್ತೇನೆ. ಯಾಕಂದ್ರೆ ನಿಜವಾಗಿಯೂ ಯಾರಿಗೆ ಅನ್ಯಾಯ ವಾಗ್ತಿತ್ತು, ಯಾರೆಲ್ಲಾ ತುಳಿತಕ್ಕೆ ಒಳಗಾಗಿದ್ರು ,ಸಮಾಜದಿಂದ ಬಹಿಷ್ಕೃತರು ಅಂತಾ ಜೀವನ ಮಾಡಿದ್ರು, ಊರಿಂದ ಆಚೆ ಇರಬೇಕು ಎನ್ನುವ ಸ್ಥಿತಿಯಲ್ಲಿ ಇದ್ರು ಅವರೆಲ್ಲರಿಗೂ ಮುಖ್ಯವಾಹಿನಿಗೆ ಬರುವ ಅವಕಾಶ ಸಿಕ್ಕಿದೆ. ಇವರ ಹೆಸರೇಳಿಕೊಂಡು ಚೆನ್ನಾಗಿರೊರೆಲ್ಲ, ಯಾವ್ಯಾವೊದೋ ಕಾರಣಕ್ಕೆ ನಾವು ಆ ಜಾತಿಯವರು ಈ ಜಾತಿಯವರು ಅಂತೇಳಿ 102 ಜಾತಿಗಳು ಪರಿಶಿಷ್ಟ ಜಾತಿಯಾಗಿ ಎಲ್ಲಾ ರಸವನ್ನ ಯಾರೋ ಬಳಸುತ್ತಿದ್ದವರಿಗೆ ಸುಪ್ರೀಂ ಕೋರ್ಟ್ ತೀರ್ಪು ಸಮಾಧಾನ ಆಗಿಲ್ಲ. ನಾನು ಈ ಹಿಂದೆ ಅನೇಕ ಸಭೆಗಳನ್ನ ಮಾಡಿ ಮನವೊಲಿಸಲು ಪ್ರಯತ್ನ ಮಾಡಿದೆ, ಒಂದು ಸಲ ಜನಸಂಖ್ಯೆ ಗೆ ಅನುಗುಣವಾಗಿ ರಿಸರ್ವೇಶನ್ ಆಗಬೇಕು ಅಂದ್ರೆ ನಾಗಮೋಹನ್ ದಾಸ್ ಅವರು ಹೇಳಿದ್ದು (all power with populations reservation) ಕೊಡಿ ಅಂತಾ, ನಾವು 17 ಮತ್ತು 6 ಕೊಟ್ಟಿದ್ದೇವೆ. ಜನಸಂಖ್ಯೆ ಗೆ ಅನುಗುಣವಾಗಿ ಒಳಮೀಸಲಾತಿ ಮಾಡಬೇಕು ಎಂದು ನಾನು ಅಧ್ಯಕ್ಷ ನಾಗಿದ್ದಾಗ ಎಲ್ಲಾ ಸ್ಪಷ್ಟವಾದ ಟ್ಯಾಬ್ಲೋ ಫಾರಂ ಮಾಡಿ ಯಾವ ಯಾವ ಜನಸಂಖ್ಯೆ ಎಷ್ಟು ಬರುತ್ತದೆ ಯಾರ್ಯಾರನ್ನ ಯಾವ್ಯಾವ ಗ್ರೂಪ್‌ನಲ್ಲಿಡಹುದು ಬರಿ ಎಡಗೈ, ಬಲಗೈ ಅಲ್ಲಾ ಅವರ ಜೊತೆಗೆ ಇನ್ನು 15, 20, 30 ಸಣ್ಣ ಪುಟ್ಟ ಜಾತಿಗಳನ್ನ ಗ್ರೂಪ್ ಮಾಡಿ ಕೊಟ್ಟಿದಿವಿ, ನನ್ನ ದೃಷ್ಠಿಯಲ್ಲಿ ಇದನ್ನ ರಾಜ್ಯ ಸರ್ಕಾರ ತಕ್ಷಣ ಅನುಷ್ಠಾನ ಮಾಡಬೇಕು. ಸಿದ್ದರಾಮಯ್ಯನವರ ಸರ್ಕಾರ ಪರಿಶಿಷ್ಟ ಜಾತಿಗೆ ಶೇ 15% ಗೆ ನಿಲ್ತಾರೋ ಶೇ 17% ಗೆ ಹೋಗ್ತಾರೊ ಅದು ಅವರಿಗೆ ಬಿಟ್ಟದ್ದು. ನಾವು ಶೇ 17% ಗೆ ಹೋಗಿ ಬಿಟ್ಟಿದ್ದೇವೆ, ಅವರು ಶೇ 17% ಗೆ ಹೋದ್ರೆ ಏನ್ ಮಾಡಬೇಕು ಎಂದು ನಾನು ಪರಿಹಾರ ಕೊಟ್ಟಿದ್ದೇನೆ, ಶೇ 17% ಗೆ ಹೋಗದೆ ಇದ್ರೆ ಏನ್ ಮಾಡಬೇಕು ಅನ್ನೊದಕ್ಕೆ ಸದಾಶಿವ ಆಯೋಗದ ವರದಿ ಇದೆ. ಯಾವುದಾದ್ರೂ ಅನುಷ್ಠಾನ ಮಾಡಲಿ ತಕ್ಷಣ ಒಳಮೀಸಲಾತಿಯನ್ನ ಜಾರಿಗೆ ತರೊದು ಸೂಕ್ತ. ಈಗಾಗಲೇ ಸುಮಾರು ವರ್ಷಗಳ ಕಾಲ ಹಾಳಾಗಿದೆ, ಇದರಿಂದ ಅವರಿಗೆ ಏನು ನ್ಯಾಯ ಸಿಕ್ಕಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಜಾತಿಯಲ್ಲೂ ಕೆನೆ ಪದರ ಗುರುತಿಸಬೇಕು.
ಕೆನೆ ಪದರ(Creamy layer) ವಿಚಾರವಾಗಿ ಮಾತನಾಡಿ ಪ.ಜಾತಿಯಲ್ಲೂ ಸಹ ಕೆನೆಪದರವನ್ನ ಗುರ್ತಿಸಬೇಕು ಎಂದು ನಾನು ವರದಿಯಲ್ಲಿ ಬರೆದಿದ್ದೇನೆ, ಸುಪ್ರೀಂ ಕೋರ್ಟು ಕೂಡ ಹೇಳಿದೆ. ಯಾರು ಮೀಸಲಾತಿಯನ್ನ ಬಳಸಿಕೊಂಡಿದ್ದಾರೆ, ಯಾರಿಗೆ ಶಕ್ತಿಯಿದೆ ಯಾರು ಮೀಸಲಾತಿಯನ್ನ ಬಳಸಿಕೊಂಡು ಮೇಲೆ ಬಂದಿದ್ದಾರೆ ಇನ್ಮುಂದೆ ಅವರನ್ನ ಮೀಸಲಾತಿಯಿಂದ ಹೊರಗಿಡಬೇಕು ಎಂಬ ಪ್ರಶ್ನೆ ಇದೆ. ಇದನ್ನ ಕೂಡ ಸರ್ಕಾರ ಗಮನಿಸಬೇಕು. ಎಲ್ಲಾ ಬಹಶಃ ಸಾಮಾಜಿಕ ನ್ಯಾಯ ಒದಗಿಸಬೇಕು ಯಾರ ತೀರ್ಮಾನ ಇದ್ರೂ ಉಳ್ಳವರಿಗೆ ಕೊಟ್ಟು ಕೊಂಡು ಹೋಗುವುದು ನ್ಯಾಯ ಅಂತಾ ನಾನು ಭಾವಿಸಿಲ್ಲ. ವಿವೇಚನೆ ಇರೊರು ಯಾರು ಭಾವಿಸಲ್ಲ. ಅಶಕ್ತರಿಗೆ ಶಕ್ತಿ ತುಂಬಲಿಕ್ಕೆ ಮೀಸಲಾತಿಯನ್ನ ಒಂದು ಆಯುಧ ಮಾಡಿಕೊಂಡಿದ್ದೆವೆ ಹಾಗಾಗಿ ಅಶಕ್ತರನ್ನ ಗುರ್ತಿಸಿ ಕೊಡಬೇಕು, ಅಶಕ್ತರು ಅಂದ್ರೆ ಯಾರು?. ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡೋರು, ಇದುವರೆಗೂ ಯಾವುದೇ ಸರ್ಕಾರಿ ಅನುಕೂಲ ಪಡೆಯದೆ ಇರೊರು, ಯಾರೋ ಒಬ್ಬ ಐಎಎಸ್ ಆಫೀಸರ್ ತನ್ನ ಮಗ ಎಸ್ ಸಿ ಎಂದು ಎಂಬಿಬಿಎಸ್ ನಲ್ಲಿ ಸೀಟು ತಗೊಳೊದು, ಎಕ್ಸಿಕ್ಯುಟಿವ್ ಇಂಜಿನಿಯರ್, ಚೀಫ್ ಇಂಜಿನಿಯರ್ ಮಕ್ಕಳಿಗೆ ತಗೊಂಡು ಎಲ್ಲಾ ರೀತಿಯಲ್ಲಿ ಸಮಾಜದ ಮೇಲ್ದರ್ಜೆಯ ಜನಗಳಿಗೆ ತಕ್ಕನಾಗಿರುವಂತಹ ಶೈಕ್ಷಣಿಕ ರಾಜಕೀಯ ಆರ್ಥಿಕ ಸ್ಥಿತಿಯಲ್ಲಿದ್ದು ಸಹ ಹುಟ್ಟು ಒಂದೇ ಆಧಾರ ಮಾಡಿಕೊಂಡು ಪ.ಜಾ ಅಂತಾ ಮೀಸಲಾತಿ ತೆಗೆದುಕೊಳ್ಳುತ್ತಿದ್ದಾರೆ ಅಂತಹವರನ್ನ ಆದಷ್ಟು ದೂರ ಇಟ್ರೆ ನಿಜವಾದ ಪರಿಶಿಷ್ಟ ಜಾತಿಯವರಿಗೆ ಒಳ್ಳೆದಾಗುತ್ತದೆ. ಈ ಕ್ರಿಯೆನಾ ನಾವು ಮಾಡಿಕೊಂಡು ಬಂದ್ರೆ ಇನ್ನೊಂದು 15-20 ವರ್ಷ ಗಳೊಳಗೆ ಬಹುತೇಕ ಇದು ಅಳಿಸಿಹೋಗಲಿದೆ. ಈಗಾಗಲೇ ಮೀಸಲಾತಿ ಯಾರಿಗೆ ಬೇಕು ಎಂಬ ಸಂಖ್ಯೆಯ ಬಾರ ಕಡಿಮೆಯಾಗಿದೆ.
ದೌರ್ಭಾಗ್ಯ ಅಂದ್ರೆ ಇರೊರೇ ತಗೊಳ್ತಾ ಇರೊದ್ರಿಂದ ಇದು ಎಲ್ಲೊ ಒಂದು ಕಡೆ 75 ವರ್ಷ ಆದ್ರೂ ಇನ್ನೂ ಬೇಕಾ ಅಂತಾ ಬೇರೆ ಸಮುದಾಯದವರು ಪ್ರಶ್ನೆ ಮಾಡೊ ಸ್ಥಿತಿ ಇದೆ. ನಾವೇನು ನಿರೀಕ್ಷೆ ಮಾಡಕೊಂಡು ಬಂದಿದ್ವಿ ಪ.ಜಾತಿಯವರನ್ನ ಶೈಕ್ಷಣಿಕವಾಗಿ ಆರ್ಥಿಕವಾಗಿ ಮೆಲಕ್ಕೆತ್ತಲು ಯಾಕೆ ಆಗಲಿಲ್ಲ ಅಂದ್ರೆ ಅದರಲ್ಲೆ ಇರುವಂತಹ ಕೆಲ ಗುಂಪು, ಜಾತಿ ಪ್ರಮುಖರು ಇದನ್ನ ಬಳಸಿಕೊಂಡು ಬಂದಿದ್ದು ದೌರ್ಭಾಗ್ಯ. ನಿಜವಾಗಲೂ ಸುಪ್ರೀಂ ಕೋರ್ಟ್ ನ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ನನಗೆ ಸಂತೋಷವಾಯಿತು ನಾನು ವರದಿಯಲ್ಲಿ ಬರೆದಿದ್ದೆ (Creamy layer as to be absorved) ಕೆನೆಪದರನ್ನ ಪರಿಶಿಲಿಸಿ ಇದರಲ್ಲೂ ಉಳ್ಳವರು ಉಳ್ಳದೆ ಇರೋರನ್ನ ಪರಿಶೀಲಿಸಬೇಕಾಗುತ್ತದೆ. ಇದನ್ನ ಬಳಸಿಕೊಂಡು ಸಾಮಾಜಿಕ ಆರ್ಥಿಕ ಸ್ಥಿತಿಗತಿಯನ್ನ ತಗೊಂಡು ಅಂತವರನ್ನ ಮೀಸಲಾತಿಯಿಂದ ತೆಗೆಯಬೇಕಾಗುತ್ತದೆ. ಮೀಸಲಾತಿ ಬಳಸಿಕೊಂಡು ಮೇಲೆ ಬಂದಮೇಲೆ ಮತ್ತೆ ಮತ್ತೆ ಅದೇ ಕುಟುಂಬದವರು ಅದನ್ನ ತೆಗೆದುಕೊಳ್ಳುವುದು ಗೌರವವಲ್ಲ ಎಂದು ನಾವು ಹೇಳಿದ್ವಿ. ಅದನ್ನೆ ಸುಪ್ರೀಂ ಕೋರ್ಟ್ ಒತ್ತಿ ಹೇಳಿರೊದ್ರಿಂದ ಅದನ್ನ ಕೂಡ ಇವತ್ತು ಇವರು ಆದೇಶದಲ್ಲಿ ಸೇರಿಸಿ ಸರ್ಕಾರಿ ಆದೇಶ ಹೊರಡಿಸಿ. ಇವರೇನೂ ಮಾಡಬೇಕಾಗಿಲ್ಲ, ರಿಮೂವ್ ಮಾಡಬೇಕು. ಅವರಿಗೆ ನಿಜವಾಗಿ ಕಾಳಜಿ ಇದ್ದರೆ 17% ಗೆ ಮಾಡಬೇಕು, ಇಲ್ಲಾ ಅಂದ್ರೆ ಕನಿಷ್ಠ 15% ಆದ್ರೂ ಮಾಡಿ ತಕ್ಷಣಕ್ಕೆ ಅವರಿಗೆ ಯಾರು ಯಾರಿಗೆ ಸ್ವಾಭಾವಿಕವಾಗಿ ಅವರ ಪಾಲಿದೆ ಅದನ್ನ ಹಂಚುವ ಕೆಲಸ ಸರ್ಕಾರ ಮಾಡಬೇಕು ಎಂದು ಸಚಿವ ಮಾಧುಸ್ವಾಮಿಯವರು ತಮ್ಮ ವಾದವನ್ನ ಸರ್ಕಾರದ ಮುಂದಿಟ್ಟಿದ್ದಾರೆ.
ಸುದ್ದಿಗೆ ಸಂಭಂದಿಸಿದ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.