ಮದುಗಿರಿಯಲ್ಲಿ ಎರಡು ಚಿರತೆಗಳು ಪ್ರತ್ಯಕ್ಷ

ಮದುಗಿರಿ: ಪಟ್ಟಣದಲ್ಲಿ ಇಂದು ಎರಡು ಚಿರತೆ ಗಳು ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿವೆ.

ಪಟ್ಟಣದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಇರುವ ಬಸವನ ಬೆಟ್ಟದಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದು ಎರಡು ಚಿರತೆಗಳು ಬೆಟ್ಟದ ಬಂಡೆಗಳ ಮೇಲೆ ವಿಹರಿಸುತ್ತಿರುವ ದೃಷ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ಮದುಗಿರಿ ಪಟ್ಟಣದ ಬವಸವನ ಬೆಟ್ಟದಲ್ಲಿ ಎರಡು ಚಿರತೆಗಳು ವಿಹರಿಸುತ್ತಿರುವ ದೃಷ್ಯ.

ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಬಸವನಬೆಟ್ಟದಲ್ಲಿ ಚಿರತೆಗಳು ಬೀಡು ಬಿಟ್ಟಿದ್ದು ಬೆಟ್ಟದ ಬುಡದಲ್ಲಿ ವಾಸವಿರುವ ನಿವಾಸಿಗಳು ಹಾಗೂ ಪಟ್ಟಣದ ನಾಗರಿಕರಲ್ಲಿ ಆತಂಕ ಉಂಟುಮಾಡಿದೆ.

ಬೆಟ್ಟದಲ್ಲಿ ಬೀಡುಬಿಟ್ಟಿರುವ ಚಿರತೆಗಳು ಆಹಾರ ಅರಸಿ ಯಾವ ಕ್ಷಣದಲ್ಲಾದ್ರೂ ಪಟ್ಟದೊಳಗೆ ಪ್ರವೇಶಿಸಬಹುದು ಎಂದು ನಾಗರೀಕರು ಆತಂಕ ವ್ಯಕ್ತಪಡಿಸಿದ್ದು ಬೆಟ್ಟದಲ್ಲಿ ಬೋನ್ ಗಳನ್ನ ಇಟ್ಟು ಚಿರತೆಗಳನ್ನ ಕೂಡಲೇ ಸೆರೆಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

error: Content is protected !!