ಬೈಕ್-ಬೊಲೇರೊ ನಡುವೆ ಅಪಘಾತ ಇಬ್ಬರು ಸಾವು : ಘಟನೆಗೆ ಪೊಲೀಸರೇ ಕಾರಣನಾ: ಪೊಲೀಸರು ಹೇಳಿದ್ದೇನು..?

ತಿಪಟೂರು: ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್-ಬೊಲೇರೊ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿರುವ ಕುಟುಂಬಸ್ಥರು ಮೃತ ದೇಹವನ್ನ ರಸ್ತೆಯಲ್ಲಿಟ್ಟು ಪೊಲೀಸರ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ಏನ್ ಹೇಳ್ತಾರೆ, ಇಲ್ಲಿ ನಿಜವಾಗಿಯೂ ತಪ್ಪು ಯಾರದ್ದು ಈ ಸುದ್ದಿ ಓದಿ.

ತಾಲ್ಲೂಕಿನ ಬಳುವನೇರಲು ಕ್ರಾಸ್ ಬಳಿ ಮಹಿಂದ್ರಾ ಬೊಲೇರೊ ಜೀಪು ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರರಾದ ಬಳುವನೇರಲು ಗ್ರಾಮದ ಹಾಲಿನ ಡೈರಿಯ ಮಾಜಿ ಕಾರ್ಯದರ್ಶಿ ನಾಗರಾಜು (65) ಹಾಗೂ ಚಿದಾನಂದ್ (55) ಮೃತಪಟ್ಟಿದ್ದಾರೆ. ನಾಗರಾಜು ಹಾಗೂ ಚಿದಾನಂದ್ ಒಂದೇ ಬೈಕಿನಲ್ಲಿ ತಿಪಟೂರು ಕಡೆಗೆ ತೆರಳುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಬೊಲೇರೋ ವಾಹನ ಡಿಕ್ಕಿಹೊಡೆದಿದೆ. ಪರಿಣಾಮ ನಾಗರಾಜು ತಲೆಗೆ ಗಂಭೀರವಾಗಿ ಗಾಯವಾಗಿ ಸ್ಥಳದಲ್ಲೆ ಸಾವನ್ನಪ್ಪಿದ್ದರೆ ಚಿದಾನಂದ್ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಬಗ್ಗೆ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.

ಘಟನೆಗೆ ಪೊಲೀಸರೇ ಕಾರಣನಾ: ಹೊನ್ನವಳ್ಳಿ ಪೊಲೀಸರು ಹೇಳೋದೆನು ?

ಹೊನ್ನವಳ್ಳಿ ಪೊಲೀಸರು ವಾಹನಗಳನ್ನ ಅಡ್ಡಗಟ್ಟಿ ದಂಡ ಹಾಕುತ್ತಿದ್ದರಿಂದ ಮಹಿಂದ್ರಾ ಬೊಲೇರೊ ಚಾಲಕ ತಪ್ಪಿಸಿಕೊಳ್ಳಲು ಯತ್ನಿಸಿ ಎದುರು ಬರುತ್ತಿದ್ದ ನಾಗರಾಜು ಮತ್ತು ಚಿದಾನಂದ್ ಅವರ ಬೈಕ್ ಗೆ ಡಿಕ್ಕಿಹೊಡೆದಿದ್ದಾನೆ ಇದರಿಂದ ಇಬ್ಬರು ಬೈಕ್ ಸವಾರರು ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎಂದು  ಕುಟುಂಬದವರು ಆರೋಪಿಸಿ ಮೃತ ದೇಹವನ್ನ ರಸ್ತೆಯಲ್ಲೇ ಬಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಪೊಲೀಸರು ನಿಂತಿರುವುದನ್ನ ಗಮನಿಸಿ ಗಾಡಿ ಹಿಡಿಯುತ್ತಾರೆ ಎಂಬ ಭಯದಿಂದ ದ್ವಿಚಕ್ರ ವಾಹನ ಸವಾರರೇ  ಎದುರಿಗೆ ಬರುತ್ತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದರು ಎಂಬ ಮಾತುಗಳು ಕೇಳಿಬಂದಿವೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ.  

ಕುಟುಂಬಸ್ಥರ ಆರೋಪವನ್ನ ತಳ್ಳಿಹಾಕಿರುವ ಹೊನ್ನವಳ್ಳಿ ಪೊಲೀಸರು ಘಟನೆಗೂ ನಮಗೂ ಸಂಬಂಧವೇ ಇಲ್ಲಾ ಎಂದಿದ್ದಾರೆ. ಐಎಂಎ ಹಾಕಲು ಕೊಡಿಗೆಹಳ್ಳಿ ನಮ್ಮ ಪಾಯಿಂಟ್ ಗೆ ತೆರಳುತ್ತಿದ್ದೆವು ಮಾರ್ಗ ಮದ್ಯೆ ಬಳುವನೇರಲು ಕ್ರಾಸ್ ಬಳಿ ನಮ್ಮ ವಾಹನ ನಿಲ್ಲಿಸಿದ್ದೆವು. ಈ ವೇಳೆ ವೇಗವಾಗಿ ಬಂದ ಬೊಲೆರೋ ವಾಹನ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದಿದ್ದಾನೆ ಎಂದು ಹೊನ್ನವಳ್ಳಿ ಪೊಲೀಸರು ತಿಳಿಸಿದ್ದಾರೆ.

ಸಂಚಾರಿ ನಿಯಮಗಳನ್ನ ಪಾಲಿಸಿದ್ರೆ ಪೊಲೀಸರ ಮೇಲೆ ಭಯವೇಕೆ.

ದಾಖಲೆ ಸರಿಯಾಗಿದ್ದರೇ, ನಿಯಮಗಳನ್ನ ಸರಿಯಾಗಿ ಪಾಲಿಸಿದರೆ ಯಾರಿಗೂ ಹೆದರುವ ಅವಶ್ಯಕತೆ ಇರೊದಿಲ್ಲ. ಸಂಚಾರಿ ನಿಯಮಗಳನ್ನ ಪಾಲಿಸದೇ ಉಲ್ಲಂಘನೆ ಮಾಡುವ ಕಾರಣಕ್ಕೆ ಪೊಲೀಸರು ವಾಹನಗಳನ್ನ ತಡೆದು ದಂಡಹಾಕ್ತಾರೆ. ಪ್ರಕರಣದಲ್ಲಿ ಬೊಲೇರೊ ವಾಹನ ಚಾಲಕ ಸಂಚಾರಿ ನಿಯಮ ಪಾಲಿಸಿದ್ದರೆ ಅಪಘಾತ ಸಂಭವಿಸುತ್ತಿರಲಿಲ್ಲ, ದ್ವಿಚಕ್ರ ವಾಹನ ಸವಾರರು ಹೆಲ್ಮೇಟ್ ದರಿಸಿದ್ದರೆ ಇಬ್ಬರ ಪ್ರಾಣವೂ ಹೋಗ್ತಿರಲಿಲ್ಲ. ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಚಾಲಕರು ಸಂಚಾರಿ ನಿಯಮಗಳನ್ನ ಪಾಲಿಸಿ ಎಂದು ಪೊಲೀಸರು ಹೇಳೋದು ಇದೇ ಕಾರಣಕ್ಕೆ. ಘಟನೆಗೆ ಕಾರಣಗಳು ಏನೇ ಇರಲಿ ಇಬ್ಬರ ಸಾವು ಮಾತ್ರ ದುರಂತ.

error: Content is protected !!