ತುಮಕೂರು: ಸ್ನಾತಕೋತ್ತರ ಪದವಿ ಫಲಿತಾಂಶ ಪ್ರಕಟವಾಗಿ ಹತ್ತೇ ನಿಮಿಷದಲ್ಲಿ ಅತಿಥಿ ಉಪಾನ್ಯಾಸಕರನ್ನಾಗಿ ನೇಮಿಸಿ ಸುದ್ದಿಯಾಗಿದ್ದ ತುಮಕೂರು ವಿಶ್ವವಿದ್ಯಾನಿಲಯಲ್ಲಿ ಇದೀಗ ಮತ್ತೆ ಅಥಿತಿ ಉಪಾನ್ಯಾಸಕರ ನೇಮಕದಲ್ಲಿ ಗೋಲ್ ಮಾಲ್ ನಡೆದಿದೆ ಎಂಬ ಆರೋಪಗಳು ಕೇಳಿ‌ ಬಂದಿವೆ.

ತುಮಕೂರು ವಿಶ್ವ ವಿದ್ಯಾನಿಲಯವು 2024-25 ನೇ ಶೈಕ್ಷಣಿಕ ಸಾಲಿನ ಪದವಿ ತರಗತಿಗಳಿಗೆ ವಿಷಯವಾರು ಬೋಧನೆಗೆ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸೆ. 9 ರಂದು ಅರ್ಜಿ ಅಹ್ವಾನಿಸಿತ್ತು. ಅದರಂತೆ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಸೆ. 24 ರಂದು ಸಂದರ್ಶನಕ್ಕೂ ಹಾಜರಾಗಿದ್ದರು. ಸಂದರ್ಶನ ನಡೆದು 20 ದಿನಗಳು ಕಳೆದರೂ ಇಲ್ಲಿಯವರೆಗೂ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡದೆ ಏಕಾಏಕಿ ಕೆಲವರಿಗೆ ನೇಮಕಾತಿ ಮಾಡಿಕೊಂಡಿರುವುದು ಸಂಶಯಕ್ಕೆ ಎಡೆಮಾಡಿದೆ. ತುಮಕೂರು ವಿವಿಯಲ್ಲಿರುವ ಪ್ರಭಾವಿಗಳ ಅಪ್ತ ವಲಯದಲ್ಲಿ ಗುರುತಿಸಿಕೊಂಡಿರುವವರಿಗೆ ಈ ಬಾರಿ ಮಣೆ ಹಾಕಲಾಗಿದೆ ಎಂಬ ಆರೋಪವು ಒಂದೆಡೆ ಕೇಳಿಬಂದಿದೆ. ಈ ಬೆಳವಣಿಗೆಯಿಂದ ಸಂದರ್ಶನದಲ್ಲಿ ಹಾಜರಾಗಿದ್ದಂತಹ ಕೆಲವು ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ತುಮಕೂರು ವಿಶ್ವವಿದ್ಯಾನಿಲಯ ಸೆ. 9 ರಂದು ಅತಿಥಿ ಉಪನ್ಯಾಸಕರ ನೇಮಕಾತಿಗೆ ಹೋರಡಿಸಿದ್ದ ಅಧಿಸೂಚನೆಯಲ್ಲಿ ಯಾವ ವಿಷಯಕ್ಕೆ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಬಗ್ಗೆ ಉಲ್ಲೇಖವನ್ನೆ ಮಾಡದೆ ಇರುವುದು ವಿವಿ ಯ ಪಾರದರ್ಶಕತೆ ಬಗ್ಗೆ ಅನಃಮಾನ ಮೂಡಿಸಿದೆ. ವಿಷಯಗಳನ್ನಷ್ಟೇ ನಮೂದಿಸಿ ತಮ್ಮ ಅನುಕೂಲಕ್ಕೆ ಹುದ್ದೆ ಸೃಜಿಸಿಕೊಳ್ಳುವ ಹುನ್ನಾರವು ಇದರ ಹಿಂದೆ ಇದೆ ಎನ್ನಲಾಗಿದೆ. ಉದಾಹರಣೆಗೆ ಕನ್ನಡ ವಿಷಯಕ್ಕೆ 25 ಮಂದಿ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. ಇದರಲ್ಲಿ ಪಿಎಚ್ ಡಿ ಅರ್ಹತೆ ಹೊಂದಿರುವವರಿಗೂ ಅವಕಾಶ ಸಿಕ್ಕಿಲ್ಲ ಎನ್ನಲಾಗಿದೆ. ಆಯ್ಕೆ ಆದವರು ಹೊಂದಿರುವ ಅರ್ಹತೆ, ಮತ್ತು ಆಯ್ಕೆ ಆದವರ ಪಟ್ಟಿ ಬಿಡುಗಡೆ ಮಾಡದೆ ವಿವಿ ಆಡಳಿತ ಗೊಂದಲ ಸೃಷ್ಠಿಸಿದೆ ಎನ್ನಲಾಗಿದೆ.

ಅತಿಥಿ ಉಪನ್ಯಾಸಕರಲ್ಲಿ ಯಾರು ವಿಭಾಗದ ಮುಖ್ಯಸ್ಥರಿಗೆ ಆಪ್ತರಾಗಿರುತ್ತಾರೋ ಅಂತವರಿಗೆ ಅರ್ಹತೆ ಇಲ್ಲದಿದ್ದರು ಪೂರ್ಣಕಾಲಿಕ ಕಾರ್ಯಭಾರ ನೀಡುವುದು, ಇತರರು ಯುಜಿಸಿ ಅರ್ಹತೆ ಹೊಂದಿದ್ದರು ಅಂತವರಿಗೆ ಅರೆಕಾಲಿಕ ಕಾರ್ಯಭಾರ ನೀಡುವಂತಹ ಒಳರಾಜಕೀಯಗಳು ವಿವಿ ಆವರಣದಲ್ಲಿ ನಡೆಯುತ್ತಿದೆ ಇದರಿಂದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುವುದಲ್ಲದೆ ಅನರ್ಹರ ನೇಮಕಾತಿಯಿಂದ ವಿವಿಯ ಭೋದನಾ ಗುಣಮಟ್ಟದ ಮೇಲೂ ಪರಿಣಾಮ ಬೀರಲಿದೆ ಎಂದು ಅಭ್ಯರ್ಥಿಗಳು ಗಂಭೀರವಾಗಿ ಆರೋಪಿಸಿದ್ದಾರೆ.

ತುಮಕೂರು ವಿಶ್ವವಿದ್ಯಾನಿಲಯಕ್ಕೆ ದಾಖಲಾತಿ ಪಡೆಯುತ್ತಿರುವ ವಿದ್ಯಾರ್ಥಿಗಳ ಪ್ರಮಾಣ ಏರುಗತಿಯಲ್ಲೇ ಇದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಯುಜಿಸಿ ಮಾನದಂಡದಂತೆ ಉಪಾನ್ಯಾಸಕರನ್ನು ನೇಮಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡುವುದು ವಿವಿಯ ಜವಾಬ್ದಾರಿ. ಅದರೆ ವಿವಿಯ ಅತಿಥಿ ಉಪಾನ್ಯಾಸಕರ ನೇಮಕದ ಪ್ರಕ್ರಿಯೆ ಮುಚ್ಚಿಡುವ ತಂತ್ರವನ್ನು ಬಿಟ್ಟು, ನೇಮಕಾತಿಗಳಲ್ಲಿ ಮುಕ್ತ ವಾತಾವರಣ ಸೃಷ್ಟಿಸಿದರೆ ಮಾತ್ರ ವಿವಿಯ ವಿಶ್ವಾಸರ್ಹತೆ ಇನ್ನಷ್ಟು ಹೆಚ್ಚಾಗಲಿದೆ. ಅತಿಥಿ ಉಪನ್ಯಾಸಕರ ನೇಮಕಾತಿ ಆಯ್ಕೆ ಪ್ರಕ್ರಿಯೆಯನ್ನ ವಿವಿ ಸಮಿತಿಯನ್ನ ರಚನೆ ಮಾಡಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕಾಗಿದೆ. ಜೊತೆಗೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಂಡು ಜನರಿಗೆ ಸತ್ಯಾಸತ್ಯತೆಯನ್ನ ತಿಳಿಸುವ ಮೂಲಕ ವಿಶ್ವಾಸರ್ಹತೆಯನ್ನ ಸಾಭೀತುಪಡಿಸಿಕೊಳ್ಳುವ ಅನಿವಾರ್ಯತೆ ತುಮಕೂರು ವಿವಿಗೆ ಎದುರಾಗಿದೆ. ಈ ಬಗ್ಗೆ ವಿವಿಯ ಯಾವ ರೀತಿಯ ಕ್ರಮ ಕೖಗೊಳ್ಳುತ್ತದೆ ಎಂಬುದನ್ನ ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here