ತುಮಕೂರು: ಮಹಿಳೆಯ ಶವ ಹುಡುಕಲು ಹೋದ ಪೋಲೀಸರಿಗೆ ಬಿಗ್ ಶಾಕ್!

ತುಮಕೂರು: ಹಣದ ವಿಚಾರವಾಗಿ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಕುತೂಹಲವೊಂದು ನಡೆದಿದ್ದು, ಮಹಿಳೆಯರನ್ನು ಹುಡುಕಲು ಹೋದ ಪೊಲೀಸರಿಗೆ ಮಹಿಳೆ ಶವ ಬದಲಿಗೆ ವೃದ್ಧನ ಶವ ಪತ್ತೆಯಾಗಿದೆ!

ಈ ಘಟನೆ ತುಮಕೂರಿನಲ್ಲಿ ನಡೆದಿದೆ. ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಲಾವತಿ ಎಂಬ 40 ವರ್ಷದ ಮಹಿಳೆಯ ಶವವನ್ನು ಪತ್ತೆಹಚ್ಚಲು ಪೊಲೀಸರು ಹೋದಾಗ ಅಲ್ಲಿ ವೃದ್ಧನೊಬ್ಬನ ಶವ ಪತ್ತೆಯಾಗಿದ್ದು, ಪೊಲೀಸರು ಶಾಕ್ ಆಗಿದ್ದಾರೆ

ತುಮಕೂರು ತಾಲೂಕಿನ ದೊಡ್ಡಸಾರಂಗಿ ಬಳಿ ಹೇಮಾವತಿ ನಾಲೆ ಬಳಿ ಪೊಲೀಸರು ಕೊಲೆಯಾದ ಕಲಾವತಿಗಾಗಿ ಹುಡುಕಾಟ ನಡೆಸಿದ್ದರು. ಆ ಸಂದರ್ಭದಲ್ಲಿ ವೃದ್ಧನ ಶವ ಕಂಡಿದ್ದು, ಈ ಬಗ್ಗೆ ಈ ತನಿಖೆ ಶುರು ಮಾಡಲಾಗಿದೆ.

ಗಜೇಂದ್ರ ಎಂಬಾತ ಕಲಾವತಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಕಲಾವತಿಯೇ ನಾಲೆಗೆ ಹಾರಿದ್ದಾಳೆ ಎಂದು ಒಮ್ಮೊಮ್ಮೆ ಪೊಲೀಸರಿಗೆ ಹೇಳಿಕೆ ನೀಡುತ್ತಿರುವ ಗಜೇಂದ್ರ ಇನ್ನೊಮ್ಮೆ ಕೊಲೆಯಾಗಿದೆ ಎಂದು ವ್ಯತಿರಿಕ್ತ ಹೇಳಿಕೆ ನೀಡುತ್ತಿದಾರೆ ಈ ಹಿನ್ನೆಲೆಯಲ್ಲಿ ನಾಲೆಯಲ್ಲಿ ಕಲಾವತಿಯವರ ಶವಕ್ಕಾಗಿ ಹುಡುಕಾಟ ಆರಂಭಿಸಲಾಗಿತ್ತು.

ತುಮಕೂರಿನ ಗಾರ್ಮೆಂಟ್ಸ್ ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಕಲಾವತಿ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಗಜೇಂದ್ರನೇ ಕೊಲೆ ಮಾಡಿರುವುದಾಗಿ ಆಕೆಯ ಪಾಲಕರು ಆರೋಪಿಸುತ್ತಿದ್ದು, ಶವಕ್ಕಾಗಿ ಶೋಧ ಕಾರ್ಯ ನಡೆದಿದೆ. ಈಗ ಸಿಕ್ಕಿರುವ ವೃದ್ಧನ ಮೃತದೇಹ ಯಾರದ್ದು ಎಂಬ ಪತ್ತೆಯಲ್ಲಿ ಪೊಲೀಸರು ತೊಡಗಿದ್ದಾರೆ.

error: Content is protected !!