ತುಮಕೂರು: ವೈದ್ಯೋ ನಾರಾಯಣೋ ಹರಿ ಅಂತಾ ವೈದ್ಯರನ್ನ ದೇವರಿಗೆ ಹೋಲಿಕೆ ಮಾಡ್ತಾರೆ, ಇಲ್ಲೊಬ್ಬ ವೈದ್ಯ ಅಂತಹ ವೃತ್ತಿಗೆ ಕಪ್ಪು ಮಸಿ ಬಳಿಯುವ ಕೆಲಸ ಮಾಡಿದ್ದಾನೆ…
ಚಿಕಿತ್ಸೆಗೆಂದು ಕ್ಲಿನಿಕ್ ಗೆ ಬಂದಿದ್ದ ಯುವತಿಯ ಮೇಲೆ ದಂತ ವೈದ್ಯ ಅತ್ಯಾಚಾರವೆಸಗಿ ದುಷ್ಕೃತ್ಯ ಮೆರೆದಿದ್ದಾನೆ. ತುಮಕೂರು ನಗರದ ಶೆಟ್ಟಿಹಳ್ಳಿ ಅಂಡರ್ ಪಾಸ್ ಬಳಿಯಿರುವ ವಿನಾಯಕ ಡೆಂಟಲ್ ಕ್ಲೀನಿಕ್ ನಲ್ಲಿ ಜು 12 ರಂದು ಶುಕ್ರವಾರ ಸಂಜೆ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ದಂತ ವೈದ್ಯ ಡಾ. ಸಂಜಯ್ ನಾಯಕ್ ನ್ನ ಮಹಿಳಾ ಠಾಣಾ ಪೊಲೀಸರು ಬಂದಿಸಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಟಾಸ್ಕ್ ಪೋರ್ಸ್ ನಲ್ಲಿ ಸದಸ್ಯನಾಗಿದ್ದ ಆರೋಪಿ ಡಾ.ಸಂಜಯ್ ನಾಯಕ್ ಯುವತಿ ಕುಟುಂಬಕ್ಕೆ ಫ್ಯಾಮಿಲಿ ಡಾಕ್ಟರ್ ಆಗಿದ್ದ ಎಂದು ತಿಳಿದು ಬಂದಿದೆ.
ಜು 12 ರಂದು ಶುಕ್ರವಾರ ಸಂಜೆ ಯುವತಿಯನ್ನ ಕ್ಲೀನಿಕ್ ಗೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದಾನೆ. ದೌರ್ಜನ್ಯಕ್ಕೊಳಗಾದ ಯುವತಿ ಮನೆಯಲ್ಲಿ ಮಂಕಾಗಿ ಕುಳಿತಿದ್ದನ್ನ ಗಮನಿಸಿದ ತಂದೆ ತಾಯಿ, ಯುವತಿಯನ್ನ ವಿಚಾರಿಸಿದಾಗ ವೈದ್ಯನ ದುಷ್ಕೃತ್ಯ ಬಗ್ಗೆ ತಿಳಿದು ಬಂದಿದೆ.
ಬಳಿಕ ಯುವತಿ ಪೋಷಕರೊಂದಿಗೆ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನ ಮೆರೆಗೆ ಮಹಿಳಾ ಪೊಲೀಸರು ಆರೋಪಿ ವೈದ್ಯ ಡಾ ಸಂಜಯ್ ನಾಯಕ್ ನ ಬಂದಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ತನಿಖೆ ಮುಂದುವರಿಸಿದ್ದಾರೆ.