ಗುಬ್ಬಿ. ಪ್ರಾಣಬಿಟ್ಟೇವು ಮರಗಳ ತೆರವಿಗೆ ಮಾತ್ರ ಅವಕಾಶ ನೀಡುವುದಿಲ್ಲ. ಮಾಜಿ ಜಿ.ಪಂ.ಸದಸ್ಯ ಚಂದ್ರಶೇಖರ್ ಬಾಬು.


ಬಾವಲಿಗಳ ಬಲಿಗೆ ಮುಂದಾದ ರಸ್ತೆ ಅಭಿವೃದ್ಧಿ ಅಧಿಕಾರಿಗಳು.ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಪನಹಳ್ಳಿ ಬಳಿಯಿರುವಂತಹ 2 ಮರಗಳಲ್ಲಿ ಸಾವಿರಾರು ಬಾವಲಿಗಳು ದಶಕಗಳ ಕಾಲದಿಂದಲೂ ಕೂಡ ಬದುಕನ್ನ ನಡೆಸುತ್ತಿದ್ದು ಅವುಗಳನ್ನು ರಸ್ತೆ ವಿಸ್ತರಣೆಯ ಹಿನ್ನೆಲೆಯಲ್ಲಿ ಎನ್ .ಎಚ್ 206 ಅಧಿಕಾರಿಗಳು ಅವುಗಳನ್ನು ಕಡಿಯಲೇ ಬೇಕು ಎಂದು ಹಠ ಮಾಡುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿಗಳು ಹಾಗೂ ಗ್ರಾಮಸ್ಥರು ಅವರ ವಿರುದ್ಧ ಪ್ರತಿಭಟನೆ ಮಾಡಿದ ಘಟನೆ ಶನಿವಾರ ನಡೆಯಿತು.

ಪ್ರತಿಭಟನೆ ಕುರಿತು ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರಬಾಬು ತುಮಕೂರಿನಿಂದ ಶಿವಮೊಗ್ಗ ಕಡೆಗೆ ಎನ್ಎಚ್ 206 ರಸ್ತೆ ಕಾಮಗಾರಿ ನಡೆಯುತ್ತಿದ್ದು ಈ ಮಧ್ಯದಲ್ಲಿರುವಂಥ 2ಮರಗಳನ್ನು ಉಳಿಸುವಂತೆ ಆರಂಭದಿಂದಲೂ ಸಹ ಕೇಳಿಕೊಳ್ಳುತ್ತಿದ್ದರು ಸಹ ಅಧಿಕಾರಿಗಳು ಮಾತ್ರ ಇದನ್ನು ಕಡಿಯಲು ಹಠ ಬಿದ್ದಿರುವ ರೀತಿಯಲ್ಲಿ ಮರ ಕಡಿಯಲು ಮುಂದಾಗಿದ್ದು ನಾವು ಸತ್ತರೂ ಪರವಾಗಿಲ್ಲ ಈ ಮರಗಳನ್ನು ಕಡಿಯಲುಮಾತ್ರ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಹಳ ಅಪರೂಪವಾದ ಸಾವಿರಾರು ಬಾವಲಿಗಳು ಮರದಲ್ಲಿದ್ದರೂ ಅವುಗಳನ್ನು ಓಡಿಸುವಂತಹ ಶತ ಪ್ರಯತ್ನ ಮಾಡುತ್ತಿದ್ದಾರೆ ಇವುಗಳನ್ನು ಸಂರಕ್ಷಣೆ ಮಾಡಲೇಬೇಕು ಎಂಬುದು ಪರಿಸರ ಪ್ರೇಮಿಗಳ ಒತ್ತಾಸೆಯಾಗಿದೆ.

ನ್ಯಾಯಲಯದ ಆದೇಶಕ್ಕೆ ಗೌರವ ನೀಡದ ಅಧಿಕಾರಿಗಳು.
ಇದರ ನಡುವೆ ಗುಬ್ಬಿಯ ನ್ಯಾಯಾಲಯದಲ್ಲೂ ಕೂಡ ಈ ಮರಗಳನ್ನು ಉಳಿಸುವಂತೆ ದಾವೆಯನ್ನೂ ಹೂಡಿದ್ದು ನ್ಯಾಯಾಧೀಶರು ಕೂಡ ಸ್ಥಳಕ್ಕೆ ಆಗಮಿಸಿ ಈ ಮರಗಳನ್ನು ಉಳಿಸುವಂತೆ ಮಾಹಿತಿಯನ್ನ ನೀಡಿದ್ದರೂ ಸಹ ಅವರಿಗೂ ಕೇರ್ ಮಾಡದಂತಹ ಅಧಿಕಾರಿಗಳು ಈ ಮರಗಳನ್ನು ಕತ್ತರಿಸಲು ಮುಂದಾಗಿರುವುದು ಸರಿಯಲ್ಲ ಎಂದು ಗುರಿ ಮುಂದೆ ದೂರಿದ ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ಸ್ಥಳಕ್ಕೆ ಧಾವಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಸಿದ್ದರಾಮಪ್ಪ, ಯಶಸ್ವಿನಿ ಪ್ರತಿಭಟನಾ ನಿರತರೊಂದಿಗೆ ಮಾತನಾಡಿ ಕೇವಲ ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ. ಮರ ಕಡಿಯುವ ಕೆಲಸಕ್ಕೆ ಮುಂದಾಗಿಲ್ಲ ಎಂದು ತಿಳಿಸಿ ಪರಿಸ್ಥಿತಿ ತಿಳಿಗೊಳಿಸಿದರು.ಪ್ರತಿಭಟನೆ ಯಲ್ಲಿ ರೈತಮುಖಂಡರು.ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!