ತಿಪಟೂರು: ಮಾರನಗೆರೆ ರೈಲ್ವೆ ಕೆಳಸೇತುವೆಯಲ್ಲಿ ಬಿರುಕು: ಕಳಪೆ ಕಾಮಗಾರಿ ವಿರುದ್ದ ದೂರು.

ತಿಪಟೂರು: ಮಾರನಗೆರೆ ರೈಲ್ವೆ(ಬ್ರಿಡ್ಜ್) ಕೆಳಸೇತುವೆ ಉದ್ಘಾಟನೆಗೂ ಮೊದಲೆ ಬಿರುಕು ಬಿಟ್ಟಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ತಿಪಟೂರು ನಗರದಿಂದ ಮಾರನಗೆರೆ ಹಾಗೂ ಶಾರದನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಕೆಳ ಸೇತುವೆ ಕಾಮಗಾರಿ ಸಂಪುರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು ಉದ್ಘಾಟನೆಗೂ ಮೊದಲೇ ಬಿರುಕು ಬಿಟ್ಟಿದೆ. ಕೇಳ ಸೇತುವೆ ಕಬ್ಬಿಣದ ಸರಳುಗಳನ್ನ ಬಳಸದೆ ಕೇವಲ ಕಾಂಕ್ರೀಟ್ ನಿಂದ ಸುಮಾರು 12 ರಿಂದ 15 ಅಡಿ ಎತ್ತರದ ತಡೆಗೊಡೆಯನ್ನ ನಿರ್ಮಾಣ ಮಾಡಲಾಗಿದೆ. ಇದರಿಂದ ಮಣ್ಣಿನ ಒತ್ತಡಕ್ಕೆ ತಡೆಗೊಡೆಗಳು ಬಿರುಕು ಬಿಟ್ಟು ರಸ್ತೆಗೆ ಭಾಗಿದ್ದು ಕುಸಿದು ಬೀಳುವ ಸಾದ್ಯತೆ ಇದೆ. ಇಷ್ಟೆ ಅಲ್ಲದೆ ವಿದ್ಯುತ್ ಕಂಬ ಹಾಗೂ ಗೈ ವೈರ್ ನ ತಂತಿಯನ್ನ ತೆರವುಗೊಳಿಸದೆ ರಸ್ತೆ ಕಾಮಗಾರಿಯನ್ನ ಮಾಡಿ, ಇತ್ತೀಚೆಗೆ ತೆರವುಗೊಳಿಸಿದ್ದು ವಿದ್ಯುತ್ ಕಂಬದ ಗೈ ವೈರ್ ನ್ನ ಸೇತುವೆಯ ತಡೆಗೋಡೆಗೆ ಸಿಕ್ಕಿಸಿದ್ದಾರೆ. ಜೊತೆಗೆ ಕಳಪೆ ಕಾಮಗಾರಿಯನ್ನ ಮರೆಮಾಚಲು ಬಿರುಕು ಬಿಟ್ಟ ಜಾಗದಲ್ಲಿ ಸಿಮೆಂಟ್ ಪೇಸ್ಟ್ ಹಾಕಿ ಮುಚ್ಚಿದ್ದು ಬಾಗಿರುವ ಗೋಡೆ ಪಕ್ಕದಲ್ಲಿ ಅವೈಜ್ಞಾನಿಕವಾಗಿ ಮತ್ತೊಂದು ಗೋಡೆಯನ್ನ ನಿರ್ಮಾಣ ಮಾಡುತ್ತಿದ್ದಾರೆ.

ಅಂದಾಜು 2 ಕೋಟಿ ಮೊತ್ತದಲ್ಲಿ ನಿರ್ಮಾಣವಾಗಿರುವ ಈ ರೈಲ್ವೆ ಕೆಳ ಸೇತುವೆ ಕಾಮಗಾರಿಯನ್ನ ಆಂದ್ರ ಮೂಲದ ಜೆ ಕೆ ಕನ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಇಂಜಿನಿಯರ್ ಗಳು ಕಬ್ಬಿಣ ಬಳಸಿ ತಡೆಗೊಡೆ (ಆರ್ ಸಿ ಸಿ) ಬದಲಿಗೆ ಕೇವಲ ಸಿಮೆಂಟ್ ಕಾಂಕ್ರಿಟ್ (ಎಂ ಸಿ ಸಿ) ಬಳಸಿ ತಡೆಗೋಡೆಗೆ ಯೊಜನೆ ರೂಪಿಸಿದ್ದಾರೆ ಅದರಂತೆ ಕಾಮಗಾರಿಯನ್ನ ನಡೆಸಿದ್ದೆವೆ. ತಡೆಗೋಡೆಗಳು ಜಂಟಿಯಾಗಿರುವ ಜಾಗದಲ್ಲಿ ಸಹಜವಾಗಿ ಬಿರುಕು ಮೂಡುತ್ತದೆ. ತಡೆಗೋಡೆಗಳು ಎಂ ಸಿ ಸಿ ಕಾಂಕ್ರಿಟ್ ಆಗಿದ್ದು ಇತ್ತೀಚೆಗೆ ಮಳೆ ಹೆಚ್ಚಾಗಿ ಸುರಿದಿರುವುದರಿಂದ ಮಣ್ಣಿನ ಒತ್ತಡ ಹೆಚ್ಚಾಗಿ ಗೋಡೆಗಳು ಬಿರುಕು ಬಿಟ್ಟು ಬಾಗಿವೆ, ಬಾಗಿರುವ ತಡೆಗೋಡೆಯ ರಕ್ಷಣೆಗಾಗಿ ಪಕ್ಕದಲ್ಲೆ ಆರ್ ಸಿ ಸಿ ಗೋಡೆಯನ್ನ ನಿರ್ಮಾಣ ಮಾಡುತ್ತಿದ್ದೆವೆ. ಇನ್ನೂ ಆರು ತಿಂಗಳು ನಾವೇ ನಿರ್ವಹಣೆಯನ್ನ ಮಾಡುತ್ತೇವೆ ಯಾವುದೇ ತೊಂದರೆ ಬಂದರೂ ಅದನ್ನ ಸರಿಪಡಿಸುತ್ತೆವೆ ಎನ್ನುತ್ತಾರೆ ಗುತ್ತಿಗೆದಾರರು.

ಕೆಳ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಸಾರ್ವಜನಿಕರ ಸಂಚಾರಕ್ಕೆ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ಅರಸಿಕೆರೆ ಜಂಕ್ಷನ್ ನಡುವೆ ಸಂಪರ್ಕ ಕಲ್ಪಿಸುವ ಈ ಸೇತುವೆ (ಬ್ರಿಡ್ಜ್) ಮೇಲೆ ಹತ್ತಾರು ರೈಲು ಗಾಡಿಗಳು ಸಂಚರಿಸುತ್ತಿವೆ, ಕೆಳ ಸೇತುವೆಯಲ್ಲಿ ಮಾರನಗೆರೆ, ಶಾರದನಗರ, ಗಾಂದಿನಗರದ ಸಾವಿರಾರು ಜನರು, ವಾಹನಗಳು ಸಂಚರಿಸುತ್ತಾರೆ. ಈ ಬ್ರಿಡ್ಜ್ ಸಮೀಪವೆ ತಿಪಟೂರು ರೈಲು ನಿಲ್ದಾಣವಿದೆ, ಒಂದು ವೇಳೆ ತಡೆಗೋಡೆ ಕುಸಿದು ಬಿದ್ದರೆ ರೈಲ್ವೆ ಹಳಿಗಳ ಜೋಡಣೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಇದರಿಂದ ನಿತ್ಯ ಸಂಚರಿಸುವ ರೈಲುಗಾಡಿಗಳಿಗೂ ಅಪಾಯ ತಪ್ಪಿದ್ದಲ್ಲ. ಕೆಳ ಸೇತುವೆಯಲ್ಲಿ ಸಂಚರಿಸುವ ಜನರಿಗೆ ಅಪಾಯ ಕಟ್ಟಿಟ್ಟ ಬುತ್ತಿ.

ಇಷ್ಟೆಲ್ಲಾ ಕಳಪೆ ಕಾಮಗಾರಿಯನ್ನ ನಡೆಸುತ್ತಿದ್ದರು ಸ್ಥಳೀಯ ಜನಪ್ರತಿನಿಧಿಗಳು ಮಾತ್ರ ಕಂಡರು ಕಾಣದಂತೆ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ ಹಿಂಡಿಸ್ಕೆರೆ ದೇವರಾಜು ರೈಲ್ವೆ ಇಲಾಖೆ ಅದೀಕ್ಷಕರಿಗೆ ದೂರು ನೀಡಿದ್ದು ಕೆಳಸೇತುವೆ ಕಾಮಗಾರಿ ಸಂಪೂರ್ಣ ಕಳೆಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ, ಸ್ಥಳೀಯ ಜನರಿಗೆ ಹಾಗೂ ರೈಲುಗಳಿಗೆ ಅಪಾಯವಾಗುವ ಸಾದ್ಯತೆ ದಟ್ಟವಾಗಿದೆ ಕೂಡಲೆ ಇದನ್ನ ತೆರವುಗೊಳಿಸಿ ಉತ್ತಮ ಗುಣಮಟ್ಟದ ಕಾಮಗಾರಿಯನ್ನ ಮರು ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಕಳಪೆ ಕಾಮಗಾರಿಯನ್ನ ಮಾಡಿ ಹಣವನ್ನ ಲೂಟಿ ಹೊಡೆದಿರುವ ಗುತ್ತಿಗೆದಾರ ಕಂಪನಿ ವಿರುದ್ದ ಕಾನೂನು ಕ್ರಮಕೈಗೊಂಡು ಕಂಪನಿಯ ಪರವಾನಿಗೆಯನ್ನ ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ.

error: Content is protected !!