ಬನ್ನೇರುಘಟ್ಟ- ಹುಲಿ ಪ್ರತ್ಯಕ್ಷ

ಆನೆಕಲ್: ಬನ್ನೇರುಘಟ್ಟ ಬಳಿ ರಾಗಿಹಳ್ಳಿ ರಸ್ತೆಯ ಕಾಳೇಶ್ವರಿ ಗೇಟ್ ನಿಂದ ಹೋಗುವ ರಸ್ತೆಯಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದೆ.

ಕಳೆದ ರಾತ್ರಿ 9.48 ರ ಸಮಯದಲ್ಲಿ ಹುಲಿ ರಸ್ತೆ ದಾಟುತ್ತಿದ್ದಾಗ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಬನ್ನೇರುಘಟ್ಟ ಅರಣ್ಯದಲ್ಲಿ ಹುಲಿ ಕಾಣಿಸಿಕೊಳ್ಳುತ್ತಿದ್ದು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ನಾಲ್ಕು ವಲಯಗಳಲ್ಲಿ ಹುಲಿ ಕಾಣಿಸಿಕೊಳ್ಳುತ್ತಿದೆ.

ರಸ್ತೆಯಲ್ಲಿ ಹುಲಿಯನ್ನ ಕಂಡ ವಾಹನ ಸವಾರರು ಕಂಗಾಲಾಗಿದ್ದು, ಅರಣ್ಯದ ಒಂದು ಬದಿಯಿಂದ ಮತ್ತೊಂದು ಬದಿಗೆ ರಸ್ತೆ ದಾಟಿ ಹೋಗುತ್ತಿರುವ ದೃಶ್ಯವನ್ನ ಮೊಬೈಲ್ ಕ್ಯಾಮರಾದಲ್ಲಿ ವಾಹನ ಸವಾರರು ಸೆರೆಹಿಡಿದಿದ್ದಾರೆ. ಈಗಾಗಲೇ ಗ್ರಾಮಸ್ಥರಿಗೆ ರಾತ್ರಿ ಸಮಯದಲ್ಲಿ ಓಡಾಡದಂತೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

error: Content is protected !!