ತುರುವೇಕೆರೆ: ಮಾಯಸಂದ್ರ ಗ್ರಾಮದ ಮುಸ್ಲಿಂ ಯುವಕರಿಂದ ಕೊರೋನಾ ವಾರಿಯರ್ಸ್ ಗೆ ಊಟೋಪಾಹಾರದ ಸೇವೆ.

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ ಖಾದೀರ್ ಪಾಷಾ ಹಾಗೂ ಸಹಭಾಗಿತ್ವ ತಂಡದ ವತಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೊರೋನ ವಾರಿಯರ್ಸ್ ಗಳಿಗೆ ಮಧ್ಯಾಹ್ನದ ಊಟೋಪಾಹಾರದ ಸೇವೆಯನ್ನು ಶನಿವಾರ ಮಾಡಲಾಯಿತು.

ಮಾಯಸಂದ್ರ ಗ್ರಾಮದ ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಬೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆ, ಗೃಹರಕ್ಷಕದಳ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ, ಅಗತ್ಯ ವಾಹನಗಳ ಸವಾರರು, ನಿರ್ಗತಿಕರು, ಅಸಹಾಯಕರಿಗೆ, ಆಹಾರ ಪೊಟ್ಟಣಗಳಲ್ಲಿ ಊಟೋಪಾಹಾರ ಪೂರೈಕೆಯನ್ನು ಗ್ರಾಮದ ಮುಸ್ಲಿಂ ಯುವಕರ ತಂಡವು ಮಾಡಲಾಯಿತು. ತಂಡದವರ ಸಮಾಜಮುಖಿ ಕಾರ್ಯಕ್ಕೆ ಗ್ರಾಮದಲ್ಲಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಂಡದ ವಾಸಿಫ್ ಅಹಮದ್, ನುಮಾನ್ ಪಾಷಾ, ಫಾಯಿಜ್ಅಹಮದ್,ಸಾಧೀಕ್ ಚೌನಿ, ಸಾಧೀಕ್, ಇಮ್ರಾನ್ ಖಾನ್, ಶಾಹಜಾನ್,ಮತ್ತು ಆರೋಗ್ಯ ಇಲಾಖೆಯ ಶಂಕರೇಗೌಡ, ಆಶಾ ಕಾರ್ಯಕರ್ತೆಯರು, ಸಹ ಸಿಬ್ಬಂದಿಗಳು, ಪ್ರಭಾರ ಪಿ.ಡಿ.ಒ. ಸುರೇಶ್, ಪೊಲೀಸ್ ಇಲಾಖೆಯ ಉಮೇಶ್, ಚೆಕ್ ಪೋಸ್ಟ್ ಸಿಬ್ಬಂದಿಗಳಾದ ನರಸಿಂಹಮೂರ್ತಿ, ಗೃಹರಕ್ಷಕ ಇಲಾಖೆ ಕೆಂಪಯ್ಯ ಸೇರಿದಂತೆ ಮುಂತಾದವರಿದ್ದರು.

ವರದಿ- ಸಚಿನ್ ಮಾಯಸಂದ್ರ.

Leave a Reply

Your email address will not be published. Required fields are marked *

error: Content is protected !!