ತುರುವೇಕೆರೆ: ಪೊಲೀಸ್ ಠಾಣೆಯ “ಸಿಬ್ಬಂದಿಗಳ ಆರೋಗ್ಯ ದೃಷ್ಟಿಗಾಗಿ ಪಿ.ಎಸ್.ಐ ಪ್ರೀತಮ್” ರವರ ವಿನೂತನ ಪ್ರಯತ್ನ.!

ತುರುವೇಕೆರೆ: ರಾಜ್ಯದಲ್ಲಿ ಕೋರೊನಾ ಎರಡನೇ ಅಲೆಯು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಪೊಲೀಸ್ ನ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊರೋನಾ ವಾರಿಯರ್ಸ್ ಗಳಾದ ಆರಕ್ಷಕ ಸಿಬ್ಬಂದಿಗಳ ಆರೋಗ್ಯ ದೃಷ್ಟಿಗಾಗಿ, ಸಿಲಿಂಡರ್ ಗ್ಯಾಸ್ ನ ಬಳಸಿ,ಕುಕ್ಕರ್ ನಲ್ಲಿ ನೀರು, ಕೆಲವು ಔಷಧಿ ಗುಣಗಳುಳ್ಳ ಸೊಪ್ಪುಗಳನ್ನು ಬಳಸಿ, ನೀರನ್ನು ಕುದಿಸಿ ನೈಸರ್ಗಿಕವಾಗಿ ಅದರ ಆವಿಯನ್ನು ದೇಹಕ್ಕೆ ತೆಗೆದುಕೊಳ್ಳುವ ಮೂಲಕ ಕೊರೋನಾದಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ, ವಿನೂತನ ಕಾರ್ಯಕ್ಕೆ ಮುಂದಾಗಿದ್ದು, ಜಿಲ್ಲೆಯಲ್ಲೆ ಮೊಟ್ಟಮೊದಲ ಈ ಕಾರ್ಯಕ್ಕೆ ಜಿಲ್ಲೆಯಾದ್ಯಂತ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ವಂಶಿಕೃಷ್ಣ ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಉದೇಶ್ ರವರ ಮತ್ತು ಕುಣಿಗಲ್ ಉಪ ವಿಭಾಗದ ಡಿ.ವೈ.ಎಸ್ಪಿ ಜಿ‌.ಆರ್.ರಮೇಶ್ ರವರ ಸಲಹೆ, ಸೂಚನೆಯಂತೆ ಮತ್ತು ತುರುವೇಕೆರೆ ಸಿ.ಪಿ.ಐ. ಸಿ.ಪಿ.ನವೀನ್ ರವರ ಸಹಯೋಗದೊಂದಿಗೆ ತುರುವೇಕೆರೆ ಠಾಣೆಯ
ಪಿ.ಎಸ್.ಐ ಪ್ರೀತಮ್ ರವರು ಈ ವಿನೂತನ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಸಿಲಿಂಡರ್ ನ ಗ್ಯಾಸ್ ಬಳಸಿ ಕುಕ್ಕರ್ ನಲ್ಲಿ ನೀರಿನ ಜೊತೆಗೆ ನೀಲಗಿರಿ, ಪುದೀನಾ,ತುಳಸಿ,ತುಂಬೆ, ನಿಂಬೆರಸ, ಸೇರಿದಂತೆ ಹಲವು ಆಯುರ್ವೇದ ಗುಣವುಳ್ಳ ಗಿಡಮೂಲಿಕೆಗಳನ್ನು ನೀರಿನಲ್ಲಿ ಬೆರೆಸಿ,ಚೆನ್ನಾಗಿ ಕುದಿಸಿ ಅದರ ಆವಿಯನ್ನು ಪೈಪ್ ಗಳ ಮೂಲಕ(ಸ್ಟೀಮ್) ಆವಿಯನ್ನು ಏಕಕಾಲಕ್ಕೆ ಮೂರು ಸಿಬ್ಬಂದಿಗಳು ನಿಂತು ದೇಹದೊಳಗೆ ತೆಗೆದುಕೊಳ್ಳುವಂತಹ ಕಾರ್ಯವನ್ನು ಮಾಡಿಸಿದ್ದಾರೆ.

ಇದರ ಅನುಕೂಲವನ್ನು ವಿವರಿಸಿದ ಪಿ.ಎಸ್.ಐ ಪ್ರೀತಮ್ ರವರು ರಾಜ್ಯದ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಕರೋನಾ ವಿರುದ್ಧ ಹಗಲಿರುಳು ಶ್ರಮಿಸಿದ್ದಾರೆ. ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೆಲಸ ನಿರ್ವಹಿಸಿದ್ದಾರೆ. ಎಷ್ಟೊ ಮಂದಿ ಪ್ರಾಣ ತೆತ್ತಿದ್ದಾರೆ. ಆರಕ್ಷಕ ಇಲಾಖೆಯ ನಾವುಗಳು ಎಲ್ಲಾರು ಸಹಾ ಒಂದು ಕುಟುಂಬವಿದ್ದಂತೆ. ಈಗಾಗಲೇ ಕೊರೋನಾ ಎರಡನೇ ಅಲೆಯು ವ್ಯಾಪಕವಾಗಿ ಹಬ್ಬುತ್ತಿದೆ, ತಾಲೂಕಿನಲ್ಲಿ ಕೊರೊನಾ ವಿರುದ್ಧ ಕೆಲಸ ನಿರ್ವಹಿಸುತ್ತಿದ್ದು, ನಮ್ಮ ಠಾಣೆಯ ಸಿಬ್ಬಂದಿಗಳು ಸಹ ನಮಗೆ ಒಂದು ಕುಟುಂಬವಿದ್ದಂತೆ. ಅವರವರ ಆರೋಗ್ಯದ ಅನುಕೂಲಗಳನ್ನು ಮನೆಯಲ್ಲಿ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮೇಲಾಧಿಕಾರಿಗಳ ಸಲಹೆ, ಸೂಚನೆಯಂತೆ, ಈ ಕಾರ್ಯಕ್ಕೆ ಕೈ ಜೋಡಿಸಿದ್ದು,ನಮ್ಮ ಎಲ್ಲಾ ಸಿಬ್ಬಂದಿಗಳ ಆರೋಗ್ಯ ದೃಷ್ಟಿಗಾಗಿ, ನೈಸರ್ಗಿಕವಾಗಿ ಕುಕ್ಕರ್ ನ ನೀರಿನಲ್ಲಿ ಕೆಲವು ಔಷಧಿ ಗುಣವುಳ್ಳ ಸೊಪ್ಪುಗಳನ್ನು ಬಳಸಿ ನೀರಿನ ಆವಿಯಲ್ಲಿ ಬರುವಂತಹ ಗಾಳಿಯನ್ನು ದೇಹಕ್ಕೆ ತೆಗೆದುಕೊಳ್ಳುವುದರೊಂದಿಗೆ, ಶ್ವಾಸಕೋಶದಲ್ಲಿನ ಹಲವು ಸಾಂಕ್ರಾಮಿಕ ಕ್ರಿಮಿಗಳು ಸಾಯುತ್ತವೆ ಹಾಗೂ ಬಿಸಿನೀರಿನ ಆವಿಯಿಂದ ದೇಹಕ್ಕೆ ಸಾಕಷ್ಟು ಲಾಭವಿದೆ. ಅಲ್ಲದೇ ಬಿಸಿನೀರಿಗೆ ತನ್ನದೇ ಆದ ಮಹತ್ವ ಹೊಂದಿದೆ ಎಂದು ವಿವರಿಸಿದರು. ತಾಲೂಕಿನ ಸಮಸ್ತ ನಾಗರಿಕರು ರಾಜ್ಯ ಸರ್ಕಾರದ ಆದೇಶಗಳನ್ನು ಪಾಲಿಸುತ್ತಾ, ಸುರಕ್ಷಿತವಾಗಿರಿ, ಅನಗತ್ಯವಾಗಿ ಓಡಾಟ ಮಾಡಬೇಡಿ, ದಂಡವನ್ನು ತೆತ್ತಬೇಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿಗಳಾದ ಎ.ಎಸ್‌.ಐ ಶಿವಲಿಂಗಯ್ಯ, ರಮೇಶ್, ಕೇಶವಮೂರ್ತಿ, ಸುಪ್ರೀತ್, ಶಶಿಧರ್ ಸೇರಿದಂತೆ ಎಲ್ಲಾ ಸಹ ಸಿಬ್ಬಂದಿಗಳು ಇದ್ದರು.

ವರದಿ- ಸಚಿನ್ ಮಾಯಸಂದ್ರ.

Leave a Reply

Your email address will not be published. Required fields are marked *

error: Content is protected !!