ತುಮಕೂರು: ಬೆಳ್ಳಂ ಬೆಳಗ್ಗೆ ಮಂಜು ಮುಸುಕಿದ ರಸ್ತೆಯಲ್ಲಿ ಮುಂದೆ ಚಲಿಸುತ್ತಿದ್ದ ಟ್ರಾಕ್ಟರ್ ಗೆ ಬೈಕ್ ಡಿಕ್ಕಿ ಯಾಗಿ ಒಂದೇ ಕುಟಬದ ಮೂವರು ದಾರುಣವಾಗಿ ಸಾವನಪ್ಪಿರುವ ಘಟನೆ ನಡೆದಿದೆ.
ತುಮಕೂರು ತಾಲ್ಲೂಕಿನ ಓಬಳಾಪುರ ಗೇಟ್ ಬಳಿ ನಸುಕಿನ ಜಾವ 6:30 ರ ಸಮಯದಲ್ಲಿ ಅಪಘಾತ ಸಂಭವಿಸಿದೆ. ಮದುಗಿರಿ ತಾಲ್ಲೂಕಿನ ಪುರವರ ಹೋಬಳಿ ಗೊಂದಿಹಳ್ಳಿ ಗ್ರಾಮದ ಶಾಖೀರ್ ಹುಸೇನ್ (48) ಮಮ್ತಾಜ್ (38) ಮಹಮದ್ ಆಸಿಫ್ (12)ಮಗು ಸೇರಿದಂತೆ ಮೂವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕುಟುಂಬ ಸಮೇತ ಬೈಕ್ ತೆರಳುತ್ತಿದ್ದ ವೇಳೆ ಎದುರು ಚಲಿಸುತ್ತಿದ್ದ ಟ್ರಾಕ್ಟರ್ ನ ಟ್ರೈಲರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು ಪರಿಣಾಮ ಮೂವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಚಳಿಗಾಲವಾದ್ದರಿಂದ ಮಂಜು ಮುಸುಕಿದ ವಾತಾವರಣದಲ್ಲಿ ರಸ್ತೆಗಳು ಕಾಣದೆ ಇರುವುದೇ ಇಂತಹ ಅವಘಡಕ್ಕೆ ಕಾರಣ ಎಂದು ಸ್ಥಳಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಅಶೋಕ್ ಕೆವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.