ತುರುವೇಕೆರೆ: ಪಿ.ಎಸ್.ಐ. “ಪ್ರೀತಮ್”, ಸಿ.ಪಿ.ಐ ಹುದ್ದೆಗೆ ಮುಂಬಡ್ತಿ.

ತುರುವೇಕೆರೆ: ತಾಲೂಕಿನಲ್ಲಿ ಜನಸ್ಪಂದನ ಅಧಿಕಾರಿಯಾಗಿ ಮತ್ತು ಕೋವಿಡ್-19ರ ಕೊರೋನಾ ವಾರಿಯರ್ ಎಂದೇ ಉತ್ತಮ ಸೇವೆ ಸಲ್ಲಿಸುತ್ತಿರುವ, ಪಟ್ಟಣದ ಪಿ.ಎಸ್.ಐ. “ಪ್ರೀತಮ್” ಅವರಿಗೆ ರಾಜ್ಯ ಗುಪ್ತವಾರ್ತೆ ಇಲಾಖೆಯ ಸಿ.ಪಿ.ಐ. ಹುದ್ದೆಗೆ ರಾಜ್ಯ ಸರ್ಕಾರವು ಮುಂಬಡ್ತಿ ನೀಡಲಾಗಿದೆ.

ತಾಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸಿ ಇಲಾಖೆಯ ಸಿಬ್ಬಂದಿಗಳ ಆರೋಗ್ಯ ದೃಷ್ಟಿಗಾಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಕೊರೊನಾ ವಿರುದ್ಧ ಹೋರಾಡಿದ ಇವರಿಗೆ ತುಮಕೂರು ಜಿಲ್ಲೆಯ ಮೊದಲ “ಆರಕ್ಷಕ ರತ್ನ” ಪ್ರಶಸ್ತಿಯೂ ಸಹಾ ಲಭಿಸಿತ್ತು ಹಾಗೂ ಸಾರ್ವಜನಿಕ ವಲಯದಲ್ಲಿ ಹೆಗ್ಗಳಿಕೆಯ ಮೆಚ್ಚುಗೆಗೆ ಪಾತ್ರರಾಗಿದ್ದ ಇವರಿಗೆ, ಇಲಾಖೆಯ ಉನ್ನತ ಅಧಿಕಾರಿಗಳು, ಠಾಣೆಯ ಸಿಬ್ಬಂದಿಗಳು ಹಾಗೂ ತಾಲೂಕಿನ ಹಿರಿಯ ಮುಖಂಡರು, ಜನಪ್ರತಿನಿಧಿಗಳು, ಸಾರ್ವಜನಿಕರು ಇವರ ಸೇವೆ ರಾಜ್ಯದಲ್ಲಿ ಇನ್ನಷ್ಟು ಉತ್ತುಂಗಕ್ಕೇರಿ ಎಂದು ಅಭಿನಂದನೆಗಳನ್ನು ಕೋರಿದ್ದಾರೆ.

ವರದಿ – ಸಚಿನ್ ಮಾಯಸಂದ್ರ.

error: Content is protected !!