ಜೀವನದಲ್ಲಿ ಹೆಣ್ಣು ಬಯಸುವು ಮೂರು ಬಯಕೆಗಳಿವು”-ನೀಲಗಿರಿ ಶರಣಪ್ಪ

ತುರುವೇಕೆರೆ: ನಮ್ಮ ನಾಡಿನಲ್ಲಿ ಪ್ರತಿ ಹೆಣ್ಣಿಗೂ ಸಹಾ ವಿಶೇಷ ಸ್ಥಾನಮಾನವಿದೆ.ಅದರಂತೆ ಜೀವನದಲ್ಲಿ ಪ್ರತಿ ಹೆಣ್ಣು ಬಯಸುವ ಮೂರೇ ಮೂರು ಬಯಕೆಗಳೆಂದರೆ, ತಾಳಿಭಾಗ್ಯ,
ತಾಯಿಭಾಗ್ಯ,
ಮುತೈದೆಭಾಗ್ಯ. ಎಂಬುದು ಬಹು ಮುಖ್ಯವಾದ
ಪ್ರತಿಯೊಂದು ಹೆಣ್ಣಿನ ಬಯಕೆಗಳಗಿವೆ.

ತಾಳಿ ಭಾಗ್ಯದ ಮಹತ್ವ. ಜೀವನದಲ್ಲಿ ನಾನು ಮದುವೆ ಮಾಡಿಕೊಳ್ಳಬೇಕು ಆ ಮದುವೆಯ ಸಂಭ್ರಮ ನಾನು ಸಹಾ ಅನುಭವಿಸಬೇಕು, ಹರಿಶಿನ ಹಚ್ಚಿಕೊಳ್ಳುವದು, ಆ ಅಲಂಕಾರಿತ ಮಂಟಪ, ಬಂಧು- ಬಳಗದ ಜೊತೆ ಇರಬೇಕು, ಶಾಸ್ತ್ರ ಗಳು, ಗಟ್ಟಿಮೇಳ, ಸ್ನೇಹಿತರು, ಕೈ ತುಂಬಾ ಬಳೆಗಳ ಹಾಕೋದು, ರೇಷ್ಮೆ ಸೀರೆ ಉಡೋದು, ಕೈಗೆ ಮದರಂಗಿ ಹಾಕಿಕೊಳ್ಳೋದು, ತಲೆ ತುಂಬಾ ಮಲ್ಲಿಗೆಯ ಹೂ ಮುಡಿದು ಕೊಳ್ಳೋದು, ಸಾವಿರಾರು ಜನರ ಸಮ್ಮುಖದಲ್ಲಿ ತನ್ನ ಜೀವನದ ಜೊತೆ ಇರುವ ತನ್ನ ಜೀವನಕ್ಕೆ ಬೆಳಕಾದ, ಕಷ್ಟ ಸುಖದಲ್ಲಿ ಬಾಗಿಯಾಗುವ, ಗಂಡನ ಕೈ ಇಂದ ಕರಿಮಣಿಯ ದಾರ ಕಟ್ಟಿಸಿಕೊಂಡು, ಗಂಡನ ಜೊತೆ ಏಳು ಹೆಜ್ಜೆ ನಡೆದು, ಗಂಡನ ಜೊತೆ ಯಾವಾಗ್ಲೂ ಖುಷಿಯಾಗಿ ಇರಬೇಕು ಅನ್ನೋ ಹಂಬಲ ಹೆಣ್ಣಿಗೆ ಅಲ್ಲವೇ..

ತಾಯಿ ಭಾಗ್ಯದ ಮಹತ್ವ.. ಒಂದು ಹೆಣ್ಣು ಇನ್ನೊಂದು ಜೀವಕ್ಕೆ ಜೀವ ಕೊಡುತ್ತಾಳೆ, ಆ ಜೀವ ಕೊಡೋಕೆ ತನ್ನ ಜೀವ ಪಣಕೀಡಬೇಕು, ಅಂತ ಪರಸ್ಥಿತಿ ಆ ಹೆಣ್ಣಿನದು, ಒಂದು ಹೆಣ್ಣಿಗೆ ತಾಯಿ ಆಗಬೇಕು, ನನಗು ಅಮ್ಮ ಅನ್ನಬೇಕು ನನ್ನ ಮಗು, ಆ ಮಗುವಿನ ಜೊತೆ ಆಟ ಆಡಬೇಕು, ಆ ಮಗುವಿಗೆ ಊಟ ಮಾಡಿಸೋದು, ಸ್ನಾನ ಮಾಡಿಸೋದು, ಬಟ್ಟೆ ಹಾಕೋದು, ತುಂಟ ನಗು ನೋಡೋದು, ಆ ತಾಯಿಗೆ ಮನದಾಸೇ ಇರುತ್ತೆ, ಆ ತಾಯಿಗೆ ಒಂದು ಮಗು ಆಗಿಲ್ಲಾ ಅಂದ್ರೆ ಆ ಹೆಣ್ಣಿನ ನೋವು, ಮತ್ತೆ ಯಾರಿಗೂ ಗೊತ್ತು ಆಗಲ್ಲ, ಆ ಹೆಣ್ಣಿಗೆ ಅನಿಸುತ್ತೆ, ನನ್ನ ಯಾರು ಶುಭ ಸಮಾರಂಭಗಳಿಗೆ ಕರೆಯಲ್ಲ, ಯಾರು ಸೀಮಂತಕ್ಕೆ ಕರೆಯಲ್ಲ, ಅಂತ ಆ ಹೆಣ್ಣು ಮನದಲ್ಲಿ ನೋವು ಉಣ್ಣುತ್ತಾಳೆ, ಅದಕ್ಕೇ ಆ ಹೆಣ್ಣು ನಾನು ತಾಯಿ ಆಗಬೇಕು ಅಂತ ಮನದಾಸೇಯನ್ನು ಹೊತ್ತುಕೊಂಡು ಇರುತ್ತಾಳೆ.

ಮಹತ್ವದ ಮುತೈದೆ ಭಾಗ್ಯ

ಹೆಣ್ಣು ಮನೆಯ ಬೆಳಕು ಅಂತಾರೆ, ಅದಕ್ಕೆ ಆ ಹೆಣ್ಣು ನಾನು ಮುತೈದೆಯಾಗಿ ಸಾಯಬೇಕು, ಅನ್ನೋ ಆಸೆ ಅವಳದು, ಕಾರಣ ನಾನು ಇದ್ದ ಮನೆ ವಿದುವೆಯ ಮನೆಯಾಗಿರಬಾರದು ,ನಾನು ಇದ್ದ ಮನೆ ಯಾವಾಗಲೂ ಸಂತೋಷವಾಗಿ ಇರಬೇಕು, ನನಗೆ ಮುತೈದೆಯಾಗಿ ಸಾವು ಬಂದರೆ, ನನಗೆ ಸ್ನಾನ ಮಾಡಿಸಿ, ಹೊಸ ಸೀರೆ ಉಡಿಸಿ, ತಲೆಗೆ ಹೂ ಮೂಡಿಸಿ, ಮುಖಕ್ಕೆ ಹರಸಿನ ಹಚ್ಚಿ, ಕೈ ತುಂಬ ಬಳೆಗಳನ್ನು ತೊಡಿಸಿ, ಮತ್ತೆ ನನಗೆ ಮಡಿಲು ತುಂಬ, ಅಕ್ಕಿ, ಬೆಲ್ಲ, ವಿಳ್ಳೆದ ಎಲೆ, ಅಡಿಕಿ, ಹರಿಶಿನ ಕೊಂಬು, ಹಾಕಿ ನೀನು ಮುತೈದೆಯಾಗಿ ಹೋಗಿ ಬಾರಮ್ಮ ಅಂತ ನನ್ನನ್ನು ಊರ ಜನರು, ಬಂದು ಬಳಗದವರು, ನನ್ನನ್ನು ಹರಸಿ ಕಳಿಸುತ್ತಾರೆ‌ ಎನ್ನುವ ಹಂಬಲವಿರುತ್ತದೆ.

ಹೆಣ್ಣುಮನೆಯ ನಂದಾದೀಪ ತನ್ನ ಮನೆ ಬಿಟ್ಟು ಇನ್ನೊಂದು ಮನೆಗೆ ಬಂದಿರುತ್ತಾಳೆ. ಒಂದು ಮನೆಯಲ್ಲಿ ಹುಟ್ಟುತ್ತಾಳೆ. ಇನ್ನೊಂದು ಮನೆಯಲ್ಲಿ ಸಾಯುತ್ತಾಳೆ. ಹುಟ್ಟಿದ ಮನೆಯನ್ನು ಬೆಳಗಿ ಬಂದು, ಮೆಟ್ಟಿದ ಮನೆಯನ್ನು ಸಹಾ ಬೆಳಗಿಸುವ ಓ‌ ಹೆಣ್ಣೆ ಸಾವಿನಲ್ಲೂ ನೀನೊಂದು ಕರುಣಾಮಯಿಯೇ,,

✍️ ನೀರಲಗಿ ಶರಣಪ್ಪ
ಮೊಬೈಲ್ : 8147323800.

error: Content is protected !!