ತುರುವೇಕೆರೆ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರು ಮಾ.ಬೆಸ್ಕಾಂ ನಿರ್ದೇಶಕರಾದ ವಸಂತ್ ಕುಮಾರ್ ಹಾಗೂ ಮಾ.ಜಿ.ಪಂ.ಸದಸ್ಯರಾದ ಎನ್.ಆರ್.ಜಯರಾಮ್ ರವರ ನೇತೃತ್ವದಲ್ಲಿ ತಾಲೂಕಿನ ಪ್ರಮುಖ ಮುಖಂಡರೊಂದಿಗೆ ಸಾಂಕೇತಿಕ ಪ್ರತಿಭಟನೆ

ತುರುವೇಕೆರೆ: ತಾಲೂಕಿನ ಮಾಯಸಂದ್ರ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಮಾಯಸಂದ್ರ,ಟಿ.ಬಿ.ಕ್ರಾಸ್- ಬೆಂಗಳೂರು ಮುಖ್ಯರಸ್ತೆಯಲ್ಲಿನ ಸಿ.ಕೆ.ಟಿ. ಪೆಟ್ರೋಲ್ ಬಂಕ್ ಮುಂಭಾಗ 100 ನಾಟ್ ಔಟ್ ಎಂಬ ಘೋಷಣೆಯಡಿ ಹಿರಿಯ ಕಾಂಗ್ರೆಸ್ ಮುಖಂಡರು,ಮಾಜಿ ಬೆಸ್ಕಾಂ ನಿರ್ದೇಶಕರಾದ ವಸಂತ್ ಕುಮಾರ್ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎನ್.ಆರ್.ಜಯರಾಮ್ ರವರ ನೇತೃತ್ವದಲ್ಲಿ ತಾಲ್ಲೂಕಿನ ಪ್ರಮುಖ ಮುಖಂಡರು, ಕಾರ್ಯಕರ್ತರೊಂದಿಗೆ ಮೋದಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗವುದರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಾಂಕೇತಿಕ ಪ್ರತಿಭಟನೆಯನ್ನು ಭಾನುವಾರ ಬೆಳಗ್ಗೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಕಾಂಗ್ರೆಸ್ ಮುಖಂಡರಾದ ವಸಂತಕುಮಾರ್ ಮಾತನಾಡಿ ಕಾಂಗ್ರೇಸ್ ಪಕ್ಷದ ನಮ್ಮ ನೆಚ್ಚಿನ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ಪ್ರತಿ ಜಿಲ್ಲೆ,ತಾಲೂಕು ಹಾಗೂ ಹೋಬಳಿ, ಪ್ರತಿ ಹಳ್ಳಿಯ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿ ತೈಲ ಬೆಲೆ ಏರಿಕೆ ವಿರುದ್ಧ ಹೋರಾಟ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಮೋದಿ ಸರ್ಕಾರ ವೆಂಬುದು ಪ್ರಜಾಪೀಡಿತ ಸರ್ಕಾರವಾಗಿದೆ. ಏಳು ವರ್ಷಗಳ ಇವರ ಸಾಧನೆ ಏನೆಂದರೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ನೆಲಕಚ್ಚಿಸಿರುವುದು. ದೇಶದ ಇತಿಹಾಸದಲ್ಲಿ-7.3 ಜಿ.ಡಿ.ಪಿ. ತಲುಪಿದೆಯೆಂದರೆ ಇದಕ್ಕಿಂತ ದುರಾದೃಷ್ಟಕರ ಯಾವುದು? ಎಂದರು. ಅಲ್ಲದೆ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ದೇಶ ಆರ್ಥಿಕವಾಗಿ 20ರಿಂದ 30 ವರ್ಷ ಹಿಂದೆ ಸರಿದಿದೆ ಎನ್ನಬಹುದು. ಅಚ್ಚೆ ದಿನ್, ಅಚ್ಚೆ ದಿನ್ ,ಅಂತ ಇವರು ಏನು ಮಾಡಿದರು? ಇವರು ಏನೇ ಮಾಡಿದರು ಅಚ್ಚೆದಿನ್! ಯು.ಪಿ.ಎ ಸರ್ಕಾರದ ಅವಧಿಯಲ್ಲಿ 55ರಿಂದ 60 ರೂಗಳೊಗೆ ಪೆಟ್ರೋಲ್ ನೀಡುತ್ತಿತ್ತು.ನಾಯಕರಾದ ಮನಮೋಹನ್ ಸಿಂಗ್ ರವರ ಆಡಳಿತದಲ್ಲಿ ಆರ್ಥಿಕ ಪರಿಸ್ಥಿತಿ 10 ಜಿ.ಡಿ.ಪಿ ತಲುಪಿದ್ದನ್ನು ನಾವು ನೋಡಿದ್ದೇವೆ. ಹೀಗಿರುವಾಗ ಬಡವರು, ರೈತರು, ಸಾಮಾನ್ಯ ವರ್ಗದ ಜನಜೀವನದ ಜೊತೆ ಸವಾರಿ ನಡೆಸುವ ಕೇಂದ್ರ ಸರ್ಕಾರಕ್ಕೆ ನಮ್ಮ ದಿಕ್ಕಾರವಿರಲಿ ಎಂದರು. ತಮಗೆ ಆಳ್ವಿಕೆ ನಡೆಸಲು ಸಾಧ್ಯವಿಲ್ಲವಾದರೆ ಬಿಟ್ಟುಬಿಡಿ,ಕೆಳಗಿಳಿಯಿರಿ. ನಮ್ಮ ಕಾಂಗ್ರೆಸ್ ಪಕ್ಷ ಅಭಿವೃದ್ಧಿಯತ್ತ ಹಾಗೂ ಬಡ ಜನಸಾಮಾನ್ಯರ ಪರ ನಿಲ್ಲುವುದು. ಅಂಬಾನಿ, ಆದಾನಿ ಅಂತವರನ್ನು ಉದ್ದಾರ ಮಾಡುವುದಿಲ್ಲ ಎಂದು ಕಿಡಿಕಾರಿದರು. ಕೂಡಲೇ ತೈಲ ಬೆಲೆ ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಮಾ.ಜಿ.ಪಂ.ಸದಸ್ಯರಾದ ಎನ್.ಆರ್. ಜಯರಾಮ್ ರವರು ಮಾತನಾಡಿ ಇಡೀ ದೇಶದಲ್ಲಿ100ರೂ ಗಡಿ ದಾಟಿರುವ ಪೆಟ್ರೋಲ್ ದರ ಅಗತ್ಯವಸ್ತುಗಳ ದರ‌ ಗಗನಕ್ಕೇರಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಯಥೇಚ್ಛವಾಗಿದೆ. ಇಂದರಿಂದ ಜನಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸಿದರು. ಅಲ್ಲದೆ ಕೋವಿಡ್ ನಂತಹ ಸಂದರ್ಭದಲ್ಲಿ ಇದರ ಅವಶ್ಯಕತೆ ಇತ್ತೆ ಎಂದರು. ರಾಜ್ಯ ಸರ್ಕಾರವು ಸಹ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲಿ ಸಂಪೂರ್ಣ ವಿಫಲಗೊಂಡಿದೆ. ಮಧ್ಯಮವರ್ಗದ ಸಾಮಾನ್ಯ ಜನರ ಜೀವನ ಇಂದು ಸಂಕಷ್ಟದಲ್ಲಿದೆ. ಯು.ಪಿ.ಎ. ಸರ್ಕಾರದ ಅವಧಿಯಲ್ಲಿದ್ದ ಪರಿಸ್ಥಿತಿ ಇಂದು ಕಣ್ಮರೆಯಾಗಿದೆ. ಜನಸಾಮಾನ್ಯರ, ಬಡವರ ,ಪರವಿಲ್ಲದ ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ ತಾಲ್ಲೂಕು ಕಾಂಗ್ರೇಸ್ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಕೂಡಲೇ ಪೆಟ್ರೋಲ್ ಡೀಸೆಲ್ ದರ ಸೇರಿದಂತೆ ಅಗತ್ಯ ವಸ್ತುಗಳ ದರವನ್ನು ಇಳಿಕೆ ಮಾಡಬೇಕು ಇಲ್ಲವಾದರೆ ರಾಜ್ಯದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಭೈರಪ್ಪನವರು ಮಾತನಾಡಿ ಈ ತೈಲ ಬೆಲೆ ಏರಿಕೆಯಿಂದಾಗಿ ದೇಶದ ಪ್ರತಿ ರೈತರಿಗೂ, ಜನ ಸಾಮಾನ್ಯರಿಗೂ, ಬಡವರಿಗೂ ತೀರಾ ಅನ್ಯಾಯವಾಗುತ್ತಿದೆ. ಸಣ್ಣ ಪುಟ್ಟ ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ಬಂದಂತಹ ಸಣ್ಣಪುಟ್ಟ ಲಾಭವನ್ನು ಪೆಟ್ರೋಲ್ ಡೀಸೆಲ್ ಅಗತ್ಯ ವಸ್ತುಗಳಿಗೆ ದಂಡ ಕಟ್ಟುವಂತಹ ಪರಿಸ್ಥಿತಿ ಇಂದು ಉದ್ಭವಿಸಿದೆ. ಮುಂದಿನ ದಿನಗಳಲ್ಲಿ ಬಡವರು ರೈತಾಪಿಗಳ ಜೀವನ ಅಸ್ತವ್ಯಸ್ತವಾಗುವುದು ಎದುರಾಗಿದೆ. ಶ್ರೀಮಂತರ ಪರ ನಿಲ್ಲುವ ಮೋದಿ ಸರ್ಕಾರ, ಜನಸಾಮಾನ್ಯರ ಜೀವನ ಬಗ್ಗೆ ಚಿಂತಿಸುತ್ತಿಲ್ಲ. ಶೀಘ್ರವೇ ತೈಲ ಬೆಲೆ,ಎಲ್.ಪಿ.ಜಿ. ಅಗತ್ಯವಸ್ತುಗಳ ಬೆಲೆ ಇಳಿಕೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯ ಶತ ಸಿದ್ದ ಎಂದರು.

ತಾ.ಪಂ. ಸದಸ್ಯ ಮಹಾಲಿಂಗಯ್ಯ ಮಾತನಾಡಿ, ರಾಜ್ಯದಲ್ಲಿ ಸಾಮಾನ್ಯ ವರ್ಗದ ಜನಜೀವನ ಇಂದು ಅಸ್ಥಿರವಾಗಿದೆ.ಪೆಟ್ರೋಲ್,ಡೀಸೆಲ್‌ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಲೂ ಸಹಾ ಜನಜೀವನ ಕಷ್ಟಕರವಾಗಿದೆ. ಕೋವಿಡ್ 19ರ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲಗೊಂಡಿವೆ. ಹಾಗೂ ಕೋವಿಡ್ ಎಂಬ ಪರಿಸ್ಥಿತಿಯನ್ನು ಧಂದೆಯಾಗಿ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಯಾವ ಮಟ್ಟಕ್ಕೆ ನಿಲ್ಲುವುದೊ ಹೇಳಲು ಸಾಧ್ಯವಿಲ್ಲದಂತಾಗಿದೆ.ನಮ್ಮ ಕಾಂಗ್ರೆಸ್ ಪಕ್ಷ 60-70 ವರ್ಷಗಳಿಂದಲೂ ಸಹಾ ಬಡವರಿಗೆ ಅನುಕೂಲವಾಗುವಂತಹ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದೆ.ಕಾಂಗ್ರೆಸ್ ಪಕ್ಷದ ಇತಿಹಾಸವೇ ಬಡವರ ಪರವಾಗಿದೆ. ಆದರೆ ನೀವು ಮಾಡುತ್ತಿರುವುದೇನು? ದೇಶದಲ್ಲಿ -ರಾಜ್ಯದಲ್ಲಿ ಬಿಜೆಪಿ ಎಂಬುದು ಇಲ್ಲವಾದರಷ್ಟೇ ಬಡವರು- ಜನಸಾಮಾನ್ಯರಿಗೆ ನೆಮ್ಮದಿ ಅನಿಸುತ್ತಿದೆ ಕೂಡಲೇ ಅಗತ್ಯವಸ್ತುಗಳ ಬೆಲೆ ಇಳಿಕೆ ಮಾಡಿ ಬಡವರಪರ ನಿಲ್ಲಿ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನಕುಮಾರ್,ಎಚ್.ಕೆ. ನಾಗೇಶ್, ಗುಡ್ಡೇನಹಳ್ಳಿ ನಂಜುಂಡಪ್ಪ,ಗುರುಪ್ರಸಾದ್.ತಾ.ಪಂ ಸದಸ್ಯರಾದ ಮಂಜುನಾಥ್. ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ಎಂ. ಗೌಡ.ಗುರುರಾಜ್,ಗ್ರಾ.ಪಂ.ಸದಸ್ಯ ರಾದ ಹಜರತ್ ಅಲಿ,ಧನಂಜಯ್, ಕೆ.ಕಲ್ಲಹಳ್ಳಿ. ನಟರಾಜ್ ಸೊರವನಹಳ್ಳಿ,ಚಿಕ್ಕ ಶೆಟ್ಟಿಕೆರೆ ರಾಧಕೃಷ್ಣ.ಗ್ರಾ.ಪಂ ಸದಸ್ಯರಾದ ಖಾದಿರ್ ಪಾಷ,ಸಗೀರ್, ಸುಬ್ರಹ್ಮಣ್ಯ ಎಸ್.ಸಿ. ಘಟಕ ಅಧ್ಯಕ್ಷರು. ಕರಿಬಸವಯ್ಯ.ಟಿ.ಬಿ.ಕ್ರಾಸ್ ಯೋಗೇಶ್ ಗೋವಿಂದ್, ಸ್ಕಂದ ಬಾಯ್ಸ್ ಯುವಕರ ತಂಡ ಸೇರಿದಂತೆ ಪಕ್ಷದ ಮುಂತಾದ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ವರದಿ- ಸಚಿನ್ ಮಾಯಸಂದ್ರ.

error: Content is protected !!