ತುರುವೇಕೆರೆ: ಅನಗತ್ಯ ಓಡಾಟದ 54 ವಾಹನಗಳ ಜಪ್ತಿ! ಖಡಕ್ ಎಚ್ಚರಿಕೆ ಕೊಟ್ಟ ಡಿ.ವೈ.ಎಸ್ಪಿ. ರಮೇಶ್.

ತುರುವೇಕೆರೆ: ತಾಲೂಕಿನಲ್ಲಿ ಕೋವಿಡ್ 19ರ ಎರಡನೇ ಅಲೆಯು ವ್ಯಾಪಕವಾಗಿ ಹಬ್ಬುತ್ತಿದ್ದು, ಗಣನೀಯವಾಗಿ ಪ್ರಕರಣಗಳು ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ತಪಾಸಣೆ ಮಾಡಿ, ಪಟ್ಟಣದ ಪೊಲೀಸರು ಮಂಗಳವಾರ ಮತ್ತು ಬುಧವಾರ ಸುಮಾರು 54 ವಾಹನಗಳನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ.

ತಾಲೂಕಿನಲ್ಲಿ ದಿನೇ ದಿನೆ ಕೋವಿಡ್ 19ರ ಪ್ರಕರಣಗಳು ಹೆಚ್ಚುತ್ತಿದ್ದು, ಸಾವಿನ ಪ್ರಕರಣಗಳು ಹೆಚ್ಚಾಗಿವೆ.ಸೋಂಕು ನಿಯಂತ್ರಣ ಗೊಳಿಸಲು ತಾಲ್ಲೂಕು ಆಡಳಿತ ಹಗಲಿರುಳೆನ್ನದೆ ಶ್ರಮಿಸುತ್ತಿದೆ. ಆದರೆ ಇದ್ಯಾವುದಕ್ಕೂ ಕ್ಯಾರೇ ಅನ್ನದ ನಾಗರಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ,ಮಾಸ್ಕ್ ಧರಿಸದೆ, ಅನಗತ್ಯವಾಗಿ ಇಲ್ಲಸಲ್ಲದ ಸಬೂಬುಗಳನ್ನು ಹೇಳಿಕೊಂಡು ಓಡಾಡುತ್ತಿರುವುದು ಕಂಡುಬಂದಿತ್ತು. ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಕಳೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಅಧಿಕಾರಿಗಳ ಮೇಲೆ ಗರಂ ಆಗಿದ್ದರು.

ಕುಣಿಗಲ್ ಉಪವಿಭಾಗದ ಡಿ.ವೈ.ಎಸ್ಪಿ. ರಮೇಶ್ ಜಿ.ಆರ್. ಹಾಗೂ ಸಿ.ಪಿ.ಐ ನವೀನ್ ರವರ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಮೂರು ಸರ್ಕಲ್ ಗಳಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳ ತಪಾಸಣೆಗೈದು, ಮುಲಾಜಿಲ್ಲದೆ 54 ವಾಹನಗಳನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ವಾಹನ ಚಾಲಕರಿಗೆ ಮನಮುಟ್ಟುವಂತೆ ತಿಳುವಳಿಕೆ ನೀಡಿ ಖಡಕ್ ಎಚ್ಚರಿಕೆ ನೀಡಿದ ಡಿವೈಎಸ್ಪಿ ರಮೇಶ್, ಈರುಳ್ಳಿ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ನಿಂಬೆ ಹಣ್ಣು ಅಗತ್ಯ ವಸ್ತು ಕೊಳ್ಳಲು ಖರೀದಿ ಮಾಡಲು ನಿಗದಿತ ಸಮಯವನ್ನು ನಿಗದಿ ಪಡಿಸಿದರು ಸಹಾ, ಕುಂಟು ನೆಪ ಹೇಳಿ ಆಸ್ಪತ್ರೆ, ಮೆಡಿಕಲ್ ಎಂದು ಸುಳ್ಳು ನೆಪ ಒಡ್ಡಿ ಓಡಾಡಬೇಡಿ. ನಿಮ್ಮ ಮನಸ್ಸಾಕ್ಷಿಯ ಆತ್ಮ ಮುಟ್ಟಿಕೊಂಡು ಸತ್ಯವಾಗಿ ಆಸ್ಪತ್ರೆಗೆ ಹೋಗುತ್ತಿದ್ದೀರ ಹೇಳಿ ಎಂದು ಪ್ರಶ್ನಿಸಿದರು. ಎರಡನೇ ಅಲೆಯು ಗಂಭೀರವಾಗಿ ದೇಹಕ್ಕೆ ಹಾನಿ ಮಾಡುತ್ತಿದ್ದು, ನೀವುಗಳು ಸಹಕರಿಸದಿದ್ದರೆ ಹೇಗೆ, ಪ್ರಜ್ಞಾವಂತರಾದ ನೀವುಗಳೇ ಹೀಗೆ ಮಾಡಿದರೆ ಸರಿಯೇ ಎಂದರು. ಕೆಲವರು ರಾಜಕೀಯ ಪ್ರತಿನಿಧಿಗಳಿಗೆ ಕರೆಮಾಡಿ ಗಾಡಿ ಬಿಡಿಸುವಂತೆ ಕೇಳಿ ಫೋನ್ ಕೊಡಲು ಹೋದ ಪ್ರಸಂಗವೂ ನಡೆಯಿತು. ಯಾವುದೇ ಕರೆಯನ್ನು, ಫೋನ್ ಗಳನ್ನು ಸ್ವೀಕರಿಸದೇ ತಮ್ಮ ಕರ್ತವ್ಯ ನಿಷ್ಠೆಯನ್ನು ಪಾರದರ್ಶಕವಾಗಿ ನಡೆಸಿದರು. ಅನಗತ್ಯವಾಗಿ ಓಡಾಡುವ ಯಾವುದೇ ವಾಹನಗಳನ್ನು ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಿ.ಪಿ.ಐ. ನವೀನ್ ರವರು ಸರ್ಕಾರಿ ಕಾರ್ಯನಿರತ ನೌಕರರ ಅಧಿಕೃತ ಗುರುತಿನ ಚೀಟಿಗಳನ್ನು ಪರಿಶೀಲಿಸಿ, ತಪಾಸಣೆ ಮಾಡಿ ಕಳುಹಿಸಿದರು, ಕೆಲ ವಾಹನ ಸವಾರರಿಗೆ ಮಾತನಾಡಿಸಿ, ನಾವುಗಳು ಹಗಲಿರುಳೆನ್ನದೆ ನಿಮ್ಮಗಳ ರಕ್ಷಣೆಗೆ ಶ್ರಮಿಸುತ್ತಿದ್ದೇವೆ. ಹಲವು ಬಾರಿ ಕೋವಿಡ್ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮತ್ತು ಮನವಿಗಳನ್ನು ಮಾಡಿದರು ಸಹಾ ಜನತೆಯು ಅನಗತ್ಯವಾಗಿ ಓಡಾಡುತ್ತಿರುವುದು ಸರಿಯಲ್ಲ. ಇದರಿಂದಾಗಿ ಕರ್ತವ್ಯನಿರತ ಸಿಬ್ಬಂದಿಗಳನ್ನು ಪರಿಶೀಲಿಸಿ ಬಿಡುವಂತ ಪರಿಸ್ಥಿತಿ ಎದುರಾಗಿದೆ. ತುರ್ತು ಕೆಲಸದವರಿಗೂ ಸಹ ಅಡಚಣೆಗಳ ಆಗಿವೆ. ಪ್ರತಿಯೊಬ್ಬರನ್ನು ಪರಿಶೀಲಿಸಿ, ತಪಾಸಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಸರ್ಕಾರದ ಆದೇಶದಂತೆ ಅನಗತ್ಯವಾಗಿ ಓಡಾಡುವ ವಾಹನಗಳನ್ನು ಮುಲಾಜಿಲ್ಲದೆ ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣದ ಠಾಣೆಯ ಎ.ಎಸ್.ಐ. ಶಿವಲಿಂಗಪ್ಪ ಮತ್ತು ಸಹ ಸಿಬ್ಬಂದಿಗಳು ದಂಡಿನಶಿವರ ಠಾಣೆಯ ಪಿ.ಎಸ್.ಐ. ಶಿವಲಿಂಗಯ್ಯ ಸಹ ಸಿಬ್ಬಂದಿಗಳ ತಂಡದವರು ಗೃಹ ಇಲಾಖೆ ಸಿಬ್ಬಂದಿಗಳು ಇದ್ದರು.

ವರದಿ- ಸಚಿನ್ ಮಾಯಸಂದ್ರ.

ಡಿ.ವೈ.ಎಸ್ಪಿ. ರಮೇಶ್.
ಸಿ.ಪಿ.ಐ.ನವೀನ್

Leave a Reply

Your email address will not be published. Required fields are marked *

error: Content is protected !!