ಸರ್ಕಾರಕ್ಕೂ ಕೊವಿಡ್ ಮಹಾಮಾರಿಗೂ ಯಾವುದೇ ವ್ಯತ್ಯಾಸವಿಲ್ಲ : ವರ್ಮ

ಆಂದ್ರಪ್ರದೇಶ್ : ಡಿಸೆಂಬರ್ 29: ಆಂಧ್ರ ಸರ್ಕಾರ ಮತ್ತು ಕೊವಿಡ್ ಮಹಾಮಾರಿ ಎರಡೂ ಒಂದೇ; ಯಾವುದೇ ವ್ಯತ್ಯಾಸವಿಲ್ಲ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ಸಂದ‍ರ್ಶನ ನೀಡಿದ ರಾಮ್ ಗೋಪಾಲ್ ವರ್ಮ ಆಂಧ್ರ ಸರ್ಕಾರ ಮತ್ತು ಕೊವಿಡ್ ಮಹಾಮಾರಿಗೆ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಸಿನಿಮಾರಂಗಕ್ಕೆ ಬರುವ ಆದಾಯವನ್ನು ಕಡಿಮೇ ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಂಧ್ರ ಸರ್ಕಾರ ಸಿನಿಮಾರಂಗದ ಬಗ್ಗೆ ನಡೆದುಕೊಳ್ಳುವ ರೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು ಚಿತ್ರಮಂದಿರಗಳು, ಟಿಕೆಟ್ ದರಗಳ ಮೇಲೆ ದ್ವೇಷದ ನಿಲುವನ್ನ ತೋರುತ್ತಿದೆ ಎಂದರು. ತೆಲುಗು ಚಿತ್ರರಂಗಕ್ಕೆ ಸಂಬಂಧಿಸಿದ ಹಿರಿಯರು ಇದರ ಬಗ್ಗೆ ಧ್ವನಿ ಎತ್ತದಿರುವುದರಲ್ಲಿ ಯಾವುದೇ ಆಶ್ಚರ್ಯವೇನು ಇಲ್ಲ. ಸಿನಿಮಾರಂಗದ ಹಿರಿಯರೆಂದರೆ ಎಲ್ಲಾ ಹಂತದಲ್ಲೂ ಐಶಾರಾಮಿ ಜೀವನಮಟ್ಟ ನಡೆಸುತ್ತಿರುವವರು. ಅಂಥವರು ಸರ್ಕಾರದ ಜೊತೆಗೆ ಗಲಾಟೆ ಯಾಕೆ ಬೇಕು ಎಂದುಕೊಳ್ಳುತ್ತಿದ್ದಾರೆ? ಅದಕ್ಕಾಗಿಯೇ ಅವರೆಲ್ಲ ಸುಮ್ಮನಾಗಿದ್ದಾರೆ ಎಂದರು.

error: Content is protected !!