ಪತಿಯ ಅನುಮಾನಕ್ಕೆ ಬೇಸತ್ತ ಪತ್ನಿ ಆತ್ಮಹತ್ಯೆ.

ತುಮಕೂರು: ಪತಿಯ ಅನುಮಾನದಿಂದ ಬೇಸತ್ತ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಉಪ್ಪಾರಳ್ಳಿಯಲ್ಲಿ ನಡೆದಿದೆ.

ಉಪ್ಪಾರಳ್ಳಿ ನಿವಾಸಿ ಹಿನಾಬಾನು (22) ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ಬುಧವಾರ ರಾತ್ರಿ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕಳೆದ ಒಂದು  ವರ್ಷದ ಹಿಂದೆ ಉಪ್ಪಾರಳ್ಳಿ ನಿವಾಸಿ ಸಿಬ್ಗತ್ ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದಳು. ದಿನ ಕಳೆದಂತೆ ಪತಿ ಸಿಫತ್ ಹಿನಾಬಾನು ಮೇಲೆ ಅನುಮಾನ ವ್ಯಕ್ತ ಪಡಿಸಿ ಹಲ್ಲೆ ಮಾಡುತ್ತಿದ್ದ, ಕುಟುಂಬದವರೊಂದಿಗೂ ಮಾತನಾಡಲು ಅವಕಾಶ ನೀಡುತ್ತಿರಲಿಲ್ಲ. ಮನೆಗೆ ಯಾರೇ ಹೋದ್ರು ಅವರ ಜೋತೆ ಸಂಬಂಧವಿಟ್ಟುಕೊಂಡಿದ್ದಿಯಾ ಎಂದು ಅನುಮಾನಿಸಿ ಹಲ್ಲೆ ಮಾಡುತ್ತಿದ್ದ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಅಲ್ಲದೆ ಹಿನಾಬಾನು ಫೋನ್ ಆಗಾಗ ಚೆಕ್ ಮಾಡುತ್ತಿದ್ದ, ಅಣ್ಣನ ನಂಬರ್ ಇದ್ದರೂ ಸಹ ಅನುಮಾನದಿಂದಲೇ ನೋಡುತ್ತಿದ್ದ. ಹಲವು ಭಾರಿ ರಾಜಿಸಂದಾನ ಮಾಡಿ ಬುದ್ದಿವಾದ ಹೇಳಿದ್ದರು ಪದೆ ಪದೇ ಹಿನಾಬಾನುಗೆ ಹಲ್ಲೆ ನಡೆಸುತ್ತಿದ್ದ. ಇದರಿಂದ ಬೇಸತ್ತ ಹಿನಾಬಾನು  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ಸಿಫತ್ ಮೇಲೆ ಹಿನಾಬಾನು ಸಹೋದರಿ ಐಶಾ ಆರೋಪ ಮಾಡಿದ್ದಾರೆ.

ಸದ್ಯ ಪತಿ ಸಿಬ್ಗತ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದ್ದು ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

error: Content is protected !!