ಗುಬ್ಬಿ: ಕಾಳೇನಹಳ್ಳಿ ಗ್ರಾಮದಿಂದ ಚಿಂದಯ್ಯನಪಾಳ್ಯ ಸಂಪರ್ಕದ 1.10ಕೋಟಿ ವೆಚ್ಚದ ರಸ್ತೆಯ ಕಳಪೆ ಕಾಮಾಗಾರಿಯಲ್ಲಿ ಅಧಿಕಾರಿಗಳ ಪಾಲೆಷ್ಟು?

ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿಯ ಕಾಳೇನಹಳ್ಳಿಯಿಂದ ಚಿಂದಯ್ಯನಪಾಳ್ಯಸಂಪರ್ಕಿಸುವ ರಸ್ತೆಯು ಸಂಪೂರ್ಣ ಹಾಳಾಗಿದೆ ಎಂದು ಗ್ರಾಮಸ್ಥರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಸುಮಾರು ವರ್ಷಗಳಿಂದ ಡಾಂಬರು ರಸ್ತೆ ಕಾಣದೇ ಕಂಗಾಲಾಗಿದ್ದ ನಮಗೆ ಡಾಂಬರು ರಸ್ತೆ ನಿರ್ಮಾಣಕ್ಕೆ ಚಾಲನೆ ದೊರೆತಿದ್ದು ಸಂತೋಷ ತಂದಿದ್ದು ಆದರೆ ಕಾಮಗಾರಿ ಮುಗಿದ ಮೂರ್ನಾಲ್ಕು ದಿನಗಳಲ್ಲಿ ಸಂಪೂರ್ಣ ರಸ್ತೆ ಹಾಳಾಗಿದ್ದು ಬೇಸರ ತಂದಿದೆ ಎಂದು ಪಂಚಾಯತ್ ರಾಜ್ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕಿದರು. ಪಂಚಾಯತ್ ರಾಜ್ ಯೋಜನೆಯ ಸುಮಾರು 1 ಕೋಟಿ 10 ಲಕ್ಷ ರೂಗಳ ಅನುದಾನದ 1.87 ಉದ್ದದ ಡಾಂಬರು ರಸ್ತೆಯು ಸಂಪೂರ್ಣ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಸ್ಥಳೀಯ ಗ್ರಾಮಸ್ಥರು ಗಂಭೀರ ಆರೋಪ ಮಾಡಿದರು.                 

ಕಾಳೇನಹಳ್ಳಿಯಿಂದ ಚಿಂದಯ್ಯನಪಾಳ್ಯ ಸಂಪರ್ಕ ದ ರಸ್ತೆ ಗೆ ಡಾಂಬರು ಹಾಕಿದ ಮೂರ ದಿವಸಗಳಲ್ಲಿ ಕಿತ್ತು ಹೋಗಿರುವುದು

ಈ ಡಾಂಬರು ರಸ್ತೆಯು ಇಂಜಿನಿಯರ್ ಮತ್ತು ಗುತ್ತಿಗೆದಾರರ ಒಳ ಒಪ್ಪಂದಕ್ಕೆ ಬಲಿಯಾಗಿ ಸಂಪೂರ್ಣ ಹಾಳಾಗಿದೆ ಎಂದು ತಿಳಿಸಿದರು.

ಅಧಿಕಾರಿಗಳು ಹಣದಾಹಕ್ಕೆ ಬಲಿಯಾಗಿ ಗ್ರಾಮೀಣ ಭಾಗದ ಜನರಿಗೆ ವಂಚಿಸುವ ಇಂತಹ ಪ್ರವೃತ್ತಿಯು ಅಸಹ್ಯ ಹುಟ್ಟಿಸುವಂಥಹದು ಎಂದು ಗ್ರಾಮದ ಮಹಿಳೆ ಪಾರ್ವತಮ್ಮ ಬೇಸರ ವ್ಯಕ್ತಪಡಿಸಿದರು.

ಕೇವಲ 1.87 ಉದ್ದದ ರಸ್ತೆಯು ಬರೋಬ್ಬರಿ 110 ಲಕ್ಷಗಳ ಅನುದಾನದಲ್ಲಿ ನಿರ್ಮಾಣವಾಗಿದ್ದು ಇದು ಸಂಪೂರ್ಣ ಕಳಪೆ ಗುಣಮಟ್ಟದ ಕಾಮಗಾರಿಯಾಗಿ ಹಾಳಾಗಿದ್ದು ಕೂಡಲೇ ಸಂಬಂದಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪುನರ್ ಕಾಮಗಾರಿಗೆ ಈ ರಸ್ತೆಯನ್ನು ಒಳಪಡಿಸಿ ಈ ಭಾಗದ ಜನತೆಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.

ಈ ರಸ್ತೆಯನ್ನು ಯಾವುದೇ ರೀತಿಯ ಗುಣಮಟ್ಟಕ್ಕೆ ಒಳಪಡಿಸದೇ ನಿರ್ಮಾಣ ಮಾಡಲಾಗಿದ್ದು ನಿತ್ಯ ಈ ಭಾಗದಲ್ಲಿ ನೂರಾರು ರೈತರು ಹಾಗೂ ವಾಹನಗಳು ಸಂಚರಿಸುತ್ತಿದ್ದು ಕೂಡಲೇ ಕಾಮಗಾರಿ ಸ್ಥಳಕ್ಕೆ ಮೇಲಾಧಿಕಾರಿಗಳು ಬಂದು ಪರಿಶೀಲಿಸಿ ಕಾಮಗಾರಿ ನಡೆಸಿದ ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರು. ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!