ಗುಬ್ಬಿ. ಪ್ರಭಾವಿಗಳ ಪಾಲಾಯಿತೆ? ಕಲ್ಲೂರು ಗ್ರಾಮ ಪಂಚಾಯಿತಿ ಸ್ವತ್ತು

ಗುಬ್ಬಿ ತಾಲ್ಲೂಕಿನ ಕಲ್ಲೂರು ಗ್ರಾಮ ಪಂಚಾಯಿತಿಗೆ ಸೇರಿದ ಸುಮಾರು 2ಎಕರೆ 27 ಗುಂಟೆ ಸರ್ಕಾರಿ ಸ್ವತ್ತು ಪ್ರಭಾವಿಗಳ ಪಾಲಾಗಿರುವುದು ಕಂಡುಬಂದಿದೆ. ಕಲ್ಲೂರು ಗ್ರಾಮದ ಸ.ನಂ.10ರಲ್ಲಿ ಎರಡು ವಿಭಾಗವಾಗಿ ಸ.ನಂ.10/1ರಲ್ಲಿ 2.25 ಎ.ಗುಂಟೆ ಸ್ವತ್ತು ಗ್ರಾಮ ಪಂಚಾಯಿತಿ ಯ ಸಂತೆ ಜಾಗ ಎಂದು ಪಹಣಿ ದಾಖಲಾಗಿದ್ದು ಸ.ನಂ.10/2ರಲ್ಲಿ ಸಂತೆ ಆವರಣದ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ 0.2 ಗುಂಟೆ ಪಹಣಿ ಚಾಲ್ತಿಯಾಲಿದ್ದು ಇನ್ನೂಳಿದ ಗ್ರಾಮ ಪಂಚಾಯಿತಿ ಆಸ್ತಿ ಯಾರಪಾಲಾಗಿದೆ ಎಂಬುದು ಇನ್ನೂ ಸಹ ಸರ್ಕಾರದ ಗಮನಕ್ಕೆ ಬಂದಿಲ್ಲ.

ಗ್ರಾಮ ಪಂಚಾಯಿತಿ ಆಸ್ತಿಯನ್ನು ಖಾಸಗೀ ಯವರಿಗೆ ಖಾತೆ ಮಾಡಲಾಗಿದೇಯೇ? ಮೇಲ್ನೋಟಕ್ಕೆ ಗ್ರಾಮ ಪಂಚಾಯಿತಿ ಆಸ್ತಿ 2.25 ಎಕರೆ ಇರುವುದು ಸಾಧ್ಯವಿಲ್ಲ ಕಾರಣ ಗ್ರಾಮ ಪಂಚಾಯಿತಿ ಜಾಗವನ್ನು ಖಾಸಗೀ ಯವರಿಗೆ ಖಾತೆ ಮಾಡಿಕೊಟ್ಟಿರುವ ನಿದರ್ಶನಗಳು ಆರೋಪಗಳು ಸ್ಥಳೀಯವಾಗಿ ಕೇಳಿಬರುತ್ತಿದೆ. ಸರ್ಕಾರದ ಅನುಮತಿ ಇಲ್ಲದೆ ಸರ್ಕಾರದ ಆಸ್ತಿ ಯನ್ನು ಮಾರಾಟ ಮಾಡಲು ಹಾಗೂ ಪರಭಾರೆ ಮಾಡಲು ಅವಕಾಶವಿಲ್ಲದಿದ್ದರು ಸಹ ಯಾವ ಆಧಾರದ ಮೇಲೆ ಸರ್ಕಾರದ ಸ್ವತ್ತು ಬೇರೆಯವರ ಹೆಸರಿಗೆ ಖಾತೆಯಾಗಲು ಸಾಧ್ಯ ವಾಯಿತು ಎಂಬುದು ಮಾತ್ರ ತಿಳಿಯದಿರುವ ವಿಚಾರವಾಗಿದೆ.

ಸಚಿವ ಈಶ್ವರಪ್ಪ ನವರ ಆದೇಶ ಪಾಲಿಸಲು ಮುಂದಾಗುವುದೆ ಗ್ರಾಮ ಪಂಚಾಯಿತಿ ಆಡಳಿತ. ಬಿಜೆಪಿ ಸರ್ಕಾರದ ಪಂಚಾಯತ್ ರಾಜ್ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ ನವರು ಗ್ರಾಮ ಪಂಚಾಯಿತಿ ಆಸ್ತಿ ಗಳು.ಒತ್ತು ವರಿಯಾಗಿದ್ದರೆ.ಅಂತಹ ಆಸ್ತಿ ಗಳನ್ನು ಪತ್ತೆ ಹಚ್ಚಿ ಗ್ರಾಮ ಪಂಚಾಯಿತಿ ಗೆ ವಶಕ್ಕೆ ಪಡೆಯಲು ಆದೇಶ ಮಾಡಿದ್ದು ಅದರಂತೆ ಗ್ರಾಮ ಪಂಚಾಯಿತಿ ಆಡಳಿತ ಸರ್ಕಾರದ ಮತ್ತು ಸಚಿವರ ಆದೇಶವನ್ನು ಪಾಲಿಸುವಲ್ಲಿ ಕ್ರಮವಹಿಸುವರೆ ಎಂಬುದು ಕಾದು ನೋಡಬೇಕಿದೆ. ನೂತನವಾಗಿ ಅಧಿಕಾರಕ್ಕೆ ಬಂದಿರುವ ಗ್ರಾಮ ಪಂಚಾಯಿತಿ ಆಡಳಿತ ಗ್ರಾಮ ಪಂಚಾಯಿತಿಯ ಆಸ್ತಿ ತೆರವಿಗೆ ಮುಂದಾಗುವುದೆ ಕಾದುನೋಡಬೇಕಿದೆ.

ಒಟ್ಟಾರೆ ಯಾಗಿ ಸರ್ಕಾರದ ಆಸ್ತಿ ಉಳಿದರೆ ಮುಂದೆ ಹಲವು ಯೋಜನೆಗೆ ಬಳಕೆಯಾಗುತ್ತದೆ ಇದೇ ರೀತಿ ಖಾಸಗೀ ಯವರ ಪಾಲಾದರೆ ಸರ್ಕಾರದ ಜಾಗವನ್ನು ಹುಡುಕುವ ಸ್ಥಿತಿ ತಲುಪುವುದರಲ್ಲಿ ಸಂಶಯವಿಲ್ಲ.

error: Content is protected !!