ಗುಬ್ಬಿ. ಪಟ್ಟಣದ ಅಂಗಡಿ.ಹೋಟೆಲ್ ಬಂದ್ ಮಾಡಿಸಿದ ತಾಲೂಕು ಆಡಳಿತ.

ಜಿಲ್ಲಾಡಳಿತದ ಆದೇಶದ ಮೇರೆಗೆ ಗುಬ್ಬಿಯ ಪಟ್ಟಣದಲ್ಲಿ ದಿಡೀರ್ ಅಂತ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸುವ ಕಾರ್ಯಕ್ಕೆ ಮುಂದಾದ ಪೊಲೀಸ್ ಇಲಾಖೆ ಕಂದಾಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ವ್ಯಾಪಾರಸ್ಥರು ಹಿಡಿಶಾಪ ಹಾಕುತ್ತಿರುವುದು ಸರ್ವೇಸಾಮಾನ್ಯವಾಗಿತ್ತು.

ಇಂದು 12 30 ರವರೆಗೆ ಯಾವುದೇ ಸೂಚನೆಯಿಲ್ಲದೆ ಅಧಿಕಾರಿಗಳು ರೋಡಿಗಿಳಿದು ಯಾವುದೇ ತಿಳುವಳಿಕೆ ನೀಡದೆ ಏಕಾಏಕಿ ಅಂಗಡಿಗಳನ್ನು ಮುಚ್ಚಿಸಲು ಮುಂದಾಗಿದೆ ತಡ ಹೋಟೆಲ್ ಮತ್ತು ಅಂಗಡಿ ಮಾಲೀಕರ ಶಾಪಕ್ಕೆ ಗುರಿಯಾದರು.

ಜಿಲ್ಲಾಡಳಿತದ ಸೂಚನೆಯಂತೆ ಯಾವ ಅಂಗಡಿಗಳನ್ನು ಮುಚ್ಚಿಸಬೇಕು ಯಾವ ಅಂಗಡಿಗಳನ್ನು ತೆರೆದಿರಬೇಕು ಎಂಬ ಸಾಮಾನ್ಯ ಜ್ಞಾನವಿಲ್ಲದ ಅಧಿಕಾರಿಗಳು ತಮ್ಮ ಮನಸೋ ಇಚ್ಛೆ ಅಂಗಡಿಗಳನ್ನು ಮುಚ್ಚಿಸುತ್ತಿತ್ತು ಇದನ್ನು ಪ್ರಶ್ನಿಸಿದ ಪತ್ರಕರ್ತರಿಗೆ ಪೊಲೀಸ್ ಇಲಾಖೆಗೆ ಬಂದ ಆದೇಶ ಪತ್ರ ದಲ್ಲಿ ಒಂದು ರೀತಿ ಪಟ್ಟಣ ಪಂಚಾಯಿತಿ ಕಚೇರಿಗೆ ಬಂದ ಆದೇಶದ ಪ್ರತಿ ಇನ್ನೊಂದು ಇದರಿಂದ ಅಧಿಕಾರಿಗಳ ನಡುವೆ ಗೊಂದಲದಲ್ಲಿ ಸಿಲುಕಿದಂತಾಯಿತು.

ಅಧಿಕಾರಿಗಳ ವರ್ತನೆಗೆ ಗುಬ್ಬಿ ನಗರದ ವ್ಯಾಪಾರಸ್ಥರಲ್ಲಿ ಗೊಂದಲದಲ್ಲಿ ಗೊಂದಲವನ್ನು ಸೃಷ್ಟಿಸಿದ್ದು ಸರಿಯಾದ ಮಾಹಿತಿ ಇಲ್ಲದೆ ಏಕಾಏಕಿ ಕರೋನಾ ಹೆಸರಿನಲ್ಲಿ ಈ ರೀತಿ ದೌರ್ಜನ್ಯ ಎಸಗಿರುವುದು ಸರಿಯಲ್ಲ ಎಂದು ವರ್ತಕರು ದೂರಿದರು.

ಈ ಬಗ್ಗೆ ತಾಲೂಕು ದಂಡಾಧಿಕಾರಿ ಶಶಿಕಲಾ ರವರನ್ನು ಪ್ರಶ್ನಿಸಿದಾಗ ಸಾರ್ವಜನಿಕರು ಜಿಲ್ಲಾಡಳಿತದ ಆದೇಶಕ್ಕೆ ಮನ್ನಣೆ ನೀಡಿ ದಿನನಿತ್ಯ ಬಳಕೆಯ ಅಂಗಡಿಗಳನ್ನು ಬಂದ್ ಮಾಡುವುದಿಲ್ಲ 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಹಾಗೂ ಏಪ್ರಿಲ್ ನಾಲ್ಕರವರೆಗೆ ಈ ಆದೇಶವು ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.

ಕೊರೋನಾ ಸೊಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಾಗರಿಕರು ಸುಖಾಸುಮ್ಮನೆ ಓಡಾಡುವುದು ಸರಿಯಲ್ಲ ಮಾಸ್ಕ್ ಧರಿಸಬೇಕು ಸಾಮಾಜಿಕ ಅಂತರ ಕಾಪಾಡಬೇಕು ಇದರಿಂದ ದಿನೇ ದಿನೇ ಹೆಚ್ಚುತ್ತಿರುವ ಮಹಾಮಾರಿ ಕೊರೋನವನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿರುತ್ತದೆ ಎಂದು ತಿಳಿಸಿದರು. ಈ ವೇಳೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!