ಗುಬ್ಬಿ(ನಿಟ್ಟೂರು): ತಾಯಿ ಮಗನ ಜಗಳ ಬಿಡುಸಲು ಹೋದ ವ್ಯಕ್ತಿ ಗಳಿಂದ ಯುವಕನ ಹತ್ಯೆ.

ತಾಯಿ ಮತ್ತು ಮಗನ ನಡುವೆ ನೆಡೆಯುತ್ತಿದ್ದಜಗಳವನ್ನು ಬಿಡಿಸಲು ಹೋದ ವ್ಯಕ್ತಿಗಳೆ ಯುವಕನನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಪುರ ದಲಿತ ಕಾಲೋನಿಯಲ್ಲಿ ಜರುಗಿದೆ.

ಘಟನೆ ಹಿನ್ನೆಲೆ:ಮಂಗಳವಾರ ರಾತ್ರಿ 10.30 ಪುರಗ್ರಾಮದ ದಲಿತ ಕಾಲೋನಿಯ ಲ್ಲಿ ವಾಸವಿರುವ ಮಹಾಲಕ್ಷ್ಮಿ ಮತ್ತು ಮಗ ಹನುಮಂತ ನ ನಡುವೆ ಕುಟುಂಬದ ವಿಚಾರವಾಗಿ ಜಗಳ ನೆಡೆದಿದೆ ತಾಯಿ ಮಗನ ಗಲಾಟೆ ಏರು ಧ್ವನಿಯಲ್ಲಿ ಇದ್ದುದರಿಂದ ಮನೆಯ ಸಮೀಪದಲ್ಲಿ ಇದೇ ಗ್ರಾಮದ ವಾಸಿಗಳಾದ ಗಂಗರಾಮಯ್ಯನ ಮಗ ಆನಂದ ಮತ್ತು ಸೀನಪ್ವ ಎಂಬುವರ ಮಗ ಪರಮೇಶ ಇಬ್ಬರು ಹನುಮಂತ ಮನೆಗೆ ಹೋಗಿ ಜಗಳ ಬಿಡಿಸುವ ನೆಪದಲ್ಲಿ ಹನುಮಂತ ನಿಗೆ ಹಲ್ಲೆ ಮಾಡಿ ಕಾಲಿನಿಂದ ತುಳಿದ್ದು ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾರೆ ಎಂಬುದು ಮೃತ ಹನುಮಂತ ತಾಯಿ ಜಯಲಕ್ಷ್ಮಿ ಆರೋಪ.

ತಡರಾತ್ರಿ ಯಲ್ಲಿ ಮಗನ ಜೀವ ಕಳೆದರು. ಕೊಲೆಯಾದ ಹನುಮಂತ ನ ತಾಯಿ ಹೇಳಿಕೆ ಪ್ರಕಾರ ನಾನು ನನ್ನ ಮಗನ ಮೇಲೆ ಜಗಳ ನೆಡೆಯುವಾಗ ಈ ಇಬ್ಬರು ಬಂದು ನಾನು ಕರೆಯದಿದ್ದರು ಸಹ ಇವರು ಬಂದು ನನ್ನ ಮಗನ ಮೇಲೆ ಹೊಡೆಯಲು ಕಾಲಿನಿಂದ ತುಳಿಯಲು ಪ್ರಾರಂಭ ಮಾಡಿದರು ನಾನು ಎಷ್ಟು ಹೇಳಿದರು ನನ್ನ ಮಾತು ಕೇಳಲಿಲ್ಲ ನನ್ನ ಮಗನ ಜೋತೆ ಇಬ್ಬರು ಕೆಲವು ತಿಂಗಳ ಹಿಂದೆ ಗಲಾಟೆ ಮಾಡಿಕೊಂಡಿದರು ಈ ದ್ವೇಷದಿಂದ ಹೀಗೆ ಮಾಡಿದ್ದಾರೆ.ರಾತ್ರಿ ಗಲಾಟೆ ನೆಡೆದಾಗ ನನ್ನ ಮಗ ಇವರ ಹೊಡೆದ ರಬಸಕ್ಕೆ ನೆಲಕ್ಕೆ ಬಿದ್ದ ನಾನು ಹೆಚ್ಚು ಗಮನಿಸಲು ಸಾಧ್ಯವಾಗಲಿಲ್ಲ ನಾನು ಮಗ ಮಲಗುತ್ತಾನೆ ಎಂದು ಎಂದು ತಿಳಿದುಕೊಂಡು ಇಂದು ಮುಂಜಾನೆ ಎಂದಿನಂತೆ ನಾನು ಕೂಲಿ ಕೆಲಸಕ್ಕೆ ಹೋಗಿದ್ದೆ .ಇಂದು ನಮ್ಮ ಗ್ರಾಮದಲ್ಲಿ ರಾಮನವಮಿ ಪೂಜೆ ಸಮಯದಲ್ಲಿ ನನ್ನ ಮಗನನ್ನು ಕರೆಯಲು ನಮ್ಮ ಮನೆಯ ಬಳಿ ಬಂದ ಸಮಯದಲ್ಲಿ ಮಗನ ಜೀವ ಹೋಗಿರುವುದು ಗಮನಿಸಿ ನನಗೆ ತಿಳಿಸಿದರು ನನ್ನ ಮಗನ ಸಾವಿಗೆ ಕಾರಣರಾದವರನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳ ಬಳಿ ತಮ್ಮ ನೋವನ್ನು ತೋಡಿಕೊಂಡರು.

ಗುಬ್ಬಿ ಪೊಲೀಸರು ಭೇಟಿ ಪರಿಶೀಲನೆ.ಘಟನೆ ತಿಳಿದು ಪುರ ಕಾಲೋನಿಗೆ ಭೇಟಿ ನೀಡಿದ ಗುಬ್ಬಿ ಪೊಲೀಸರು ಮಾಹಿತಿ ಕಲೆಹಾಕಿ ಮೃತ ಯುವಕನ ತಾಯಿಯ ಹೇಳಿಕೆ ಪಡೆದು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆ ಗೆ ಮುಂದಾಗಿದ್ದಾರೆ. ಶಿರಾ ಡಿವೈಎಸ್ಪಿ ಕುಮಾರಪ್ಪ.ವೃತ್ತ ನಿರೀಕ್ಷಕ ರಾಮಕೃಷ್ಣಪ್ಪ .ಎಎಸ್ಐ ಶಿವಣ್ಣ. ಬಸವರಾಜು.ಮತ್ತು ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

error: Content is protected !!