ಗುಬ್ಬಿ. ಹಳೇ ಮೈಸೂರು ಭಾಗದ ಒಕ್ಕಲಿಗ ಸಮುದಾಯದ ಶಾಸಕರಿಗೆ ಸಚಿವಸ್ಥಾನ ಸಿಕ್ಕಿಲ್ಲ. ಶಾಸಕ ಮಸಾಲೆ ಜಯರಾಂ ಬೇಸರ.

ಪ್ರಸ್ತುತ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರ ಆಡಳಿತ ಸರ್ಕಾರದ ಲ್ಲಿ ಹಳೇ ಮೈಸೂರು ಭಾಗದ ಒಕ್ಕಲಿಗ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಕೈ ತಪ್ಪಿರುವುದು ಬಹಳ ಬೇಸರದ ಸಂಗತಿ ಎಂದು ತುರುವೇಕೆರೆ ಶಾಸಕ ಮಸಾಲೆ ಜಯರಾಂ ಅಸಮಾಧಾನ ವ್ಯಕ್ತಪಡಿಸಿದರು.

ಗುಬ್ಬಿ ತಾಲ್ಲೂಕಿನ ಸಿ.ಎಸ್. ಪುರ ಹೋಬಳಿ ಸ್ವ ಗ್ರಾಮ ಅಂಕಳಕೊಪ್ಪ ಗ್ರಾಮದಲ್ಲಿ ಹೇಮಾವತಿ ಇಲಾಖೆಯ ವಿಶೇಷ ಅನುದಾನದಡಿಯಲ್ಲಿ 2 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಾಗಾರಿ ಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಈ ಬಾರಿ ಯ ಸಂಪುಟದ ವಿಸ್ತರಣೆ ಸಮಯದಲ್ಲಿ ಹಳೇ ಮೈಸೂರು ಪ್ರಂತ್ಯಕ್ಕೆ ಸಚಿವ ಸ್ಥಾನ ಸಿಗುವ ಭರವಸೆ ಇತ್ತು ಆದರೆ ಸಂಪುಟದಲ್ಲಿ ಸ್ಥಾನ ನೀಡದಿರುವ ಬಗ್ಗೆ ಶಾಸಕರಲ್ಲಿ ಬೇಸರವಿದೆ.ಅದರಲ್ಲೂ ಒಕ್ಕಲಿಗ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ವರಿಷ್ಠರು ಮತ್ತು ಮುಖ್ಯಮಂತ್ರಿ ಗಳು ಹೆಚ್ಚಿನ ಆಸಕ್ತಿ ಹೊಂದರಿರುವುದು ಬೇಸರ ತಂದಿದೆ. ಈ ವಿಚಾರದಲ್ಲಿ ಧ್ವನಿ ಎತ್ತಿರುವ ಶಾಸಕ ಪ್ರೀತಂ ಗೌಡರ ಪರ ನನ್ನ ಬೆಂಬಲವಿದೆ ಮುಂದಿನ ಬಾರಿ ಸಚಿವ ಸಂಪುಟದ ವಿಸ್ತರಣೆ ಸಮಯದಲ್ಲಿ ವರಿಷ್ಠ ರು ಮತ್ತು ಬಿಜೆಪಿ ಪಕ್ಷದ ಹಿರಿಯ ನಾಯಕರು ಮುಖ್ಯಮಂತ್ರಿ ಗಳು ಹಳೇ.ಮೈಸೂರು ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ತುಮಕೂರು ಜಿಲ್ಲೆಯಲ್ಲಿ ಇಬ್ಬರು ಹಿರಿಯ ನಾಯಕರಿಗೆ.ಸಚಿವ ಸ್ಥಾನ ಸಿಕ್ಕಿರುವುದು ಬಹಳ ಸಂತೋಷವಾಗಿದ್ದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಯತ್ತ ಸಾಗುತ್ತದೆ ತುಮಕೂರು ಜಿಲ್ಲೆ ಗೆ ಉಸ್ತುವಾರಿ ಸಚಿವರಾಗಿ ಮಾದುಸ್ವಾಮಿ ಯವರೇ ಮುಂದುವರೆದಿದ್ದು ಬಿ.ಸಿ.ನಾಗೇಶ್ ಅವರಿಗೆ ಶಿಕ್ಷಣ ದ ಜೋತೆಗೆ ಯಾದಗಿರಿ ಜಿಲ್ಲೆ ಉಸ್ತುವಾರಿ ನೀಡಿದ್ದಾರೆ ಅವರು ಸಹ ತಾಲ್ಲೂಕಿನ ಅಭಿವೃದ್ಧಿ ಗೆ ಸಹಕಾರ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದರು.

ಬಸವರಾಜ ಬೊಮ್ಮಾಯಿ ಯವರು ಮುಖ್ಯಮಂತ್ರಿ ಗಳಾದ ನಂತರದಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ರುವುದು ಪಕ್ಷದ ನಾಯಕರಲ್ಲಿ ಅಸಮಾಧಾನ ಉಂಟುಮಾಡಿದ್ದು ಹೊಂದಾಣಿಕೆಯ ಆಡಳಿತ ಮಾಡುವುದು ಸೂಕ್ತವಲ್ಲ ಎಂಬ ಶಾಸಕ ಪ್ರೀತಂ ಗೌಡರ ಆರೋಪಕ್ಕೆ ಮುಖ್ಯ ಮಂತ್ರಿಗಳ ಭೇಟಿ ಒಂದೇಡೆ ಪಕ್ಷದ ಕಾರ್ಯಕರ್ತರ ಬೇಸರಕ್ಕೆ ದಾರಿ ಮಾಡಿಕೊಟ್ಟಂತಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ವರದಿ.ಡಿ.ಮಂಜುನಾಥ್ ಕಲ್ಲೂರು.

error: Content is protected !!