ಗುಬ್ಬಿ.ನೀರು ಪೋಲಾಗುವ ಬಗ್ಗೆ ದೂರು ಹೇಳಿದ ಮೆಡಿಕಲ್ ವಿದ್ಯಾರ್ಥಿಗಳಿಗೆ ಬೆದರಿಕೆಯೊಡ್ಡಿದ ಪಪಂ ಮುಖ್ಯಾಧಿಕಾರಿ.

ಗುಬ್ಬಿ: ಪಟ್ಟಣದ ಚನ್ನಬಸವೇಶ್ವರಸ್ವಾಮಿ ದೇವಾಲಯ ಸಮೀಪ ರಸ್ತೆಯಲ್ಲಿ ನೀರು ಪೋಲಾಗಿ ಹರಿಯುತ್ತಿದ್ದದ್ದನ್ನು ಕಂಡ ಮೆಡಿಕಲ್ ವಿದ್ಯಾರ್ಥಿನಿ ಮೇಘನಾ ಮತ್ತು ಸ್ನೇಹಿತರು ಕೂಡಲೇ ಪಪಂ ಮುಖ್ಯಾಧಿಕಾರಿ ಯೋಗೀಶ್ ಅವರ ನಂಬರ್ ಪಡೆದು ವಾಟ್ಸಾಪ್ ಮೂಲಕ ಪೋಲಾಗುತ್ತಿರುವ ವಿಡಿಯೋ ಹಾಕಿದ್ದಾರೆ. ಈ ಬಗ್ಗೆ ಸ್ಪಂದಿಸಬೇಕಾದ ಮುಖ್ಯಾಧಿಕಾರಿ ದೂರು ಹೇಳಿದವರನ್ನೇ ಪ್ರಶ್ನಿಸಿ ಮನಬಂದಂತೆ ಮಾತನಾಡಿ ಈ ವಿಧ್ಯಾರ್ಥಿಗಳಿಗೆ ಧಮ್ಕಿ ಹಾಕಿದ ಪ್ರಕರಣ ಗುಬ್ಬಿ ಠಾಣೆಯಂಗಳಕ್ಕೆ ಬಂದಿದೆ.
ಕಳೆದ ಎರಡು ತಿಂಗಳ ಹಿಂದೆ ಸುಭಾಷ ನಗರ ಬಡಾವಣೆಯ ರಸ್ತೆಯೊಂದರಲ್ಲಿನ ಸಿಸ್ಟನ್ ನಿಂದ ನೀರು ಪೋಲಾಗಿ ಹರಿದು ರಸ್ತೆ ತುಂಬಾ ಹರಿದಿತ್ತು. ಸುಮಾರು ಮೂರ್ನಾಲ್ಕು ತಾಸು ನಿರಂತರವಾಗಿ ನೀರು ಹರಿದಿದ್ದನ್ನು ಕಂಡ ಮೆಡಿಕಲ್ ವಿದ್ಯಾರ್ಥಿಗಳು ಮುಖ್ಯಾಧಿಕಾರಿಗಳಿಗೆ ಫೋನ್ ಮೂಲಕ ಮಾಹಿತಿ ತಿಳಿಸಿದ್ದಾರೆ. ಈ ದೂರನ್ನು ಆಲಿಸಿ ಸ್ಪಂದಿಸಬೇಕಾದ ಅಧಿಕಾರಿ ಯೋಗೀಶ್ ಫೋನ್ ಮೂಲಕವೇ ವಿದ್ಯಾರ್ಥಿಗಳಿಗೆ ಬೆದರಿಕೆಯೊಡ್ಡಿದ್ದಾರೆ. ನಿರಂತರವಾಗಿ ಧಮ್ಕಿ ಹಾಕುವ ಕೆಲಸ ಮಾಡಿರುವುದು ಸಹಿಸದ ವಿದ್ಯಾರ್ಥಿನಿ ಮೇಘನಾ ನೇರ ಪೊಲೀಸ್ ಠಾಣೆಗೆ ಆಗಮಿಸಿ ಮುಖ್ಯಾಧಿಕಾರಿ ಯೋಗೀಶ್ ವಿರುದ್ಧ ದೂರು ನೀಡಿದ್ದಾರೆ. ದೂರು ಅರ್ಜಿಯಲ್ಲಿ ಮುಖ್ಯಾಧಿಕಾರಿ ಬೇಜವಾಬ್ದಾರಿ ಮಾತು ಮತ್ತು ಕೆಲ ಜನರಿಂದ ಬೆದರಿಕೆಯನ್ನು ಫೋನ್ ಮೂಲಕ ಮಾಡಿರುವ ಬಗ್ಗೆ ಲಿಖಿತ ದೂರು ನೀಡಿದ್ದಾರೆ.

ಸಾರ್ವಜನಿಕ ದೂರು ಬಗ್ಗೆ ಆಲಿಸಿ ಬಗೆಹರಿಸುವ ಕೆಲಸ ಮಾಡಬೇಕಾದ ಅಧಿಕಾರಿ ಸಾರ್ವಜನಿಕರಿಗೆ ಧಮ್ಕಿ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ನೀರು ಪೋಲಾಗುತ್ತಿರುವ ಬಗ್ಗೆ ಹೇಳಿದ್ದೆ ತಪ್ಪೇ ಎಂದು ಪ್ರಶ್ನಿಸಿದ ಮೇಘನಾ ಅವರ ಮಾತುಗಳ ಆಡಿಯೋ ಪೊಲೀಸ್ ಠಾಣೆಗೆ ನೀಡುತ್ತೇನೆ. ಅಧಿಕಾರಿಗಳ ಬೇಜವಾಬ್ದಾರಿತನ ಪ್ರಶ್ನಿಸಿದರೆ ಕೆಲವರಿಂದ ಧಮ್ಕಿ ಹಾಕಿಸುವ ಕೆಲಸ ಮಾಡಿರುವುದು ಸರ್ಕಾರಿ ಅಧಿಕಾರಿಯ ದರ್ಪ ಪ್ರದರ್ಶನವಾಗುತ್ತಿದೆ ಎಂದು ಹೇಳಿದರು.

ವರದಿ.ಡಿ.ಮಂಜುನಾಥ್.

ಗುಬ್ಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ವಿದ್ಯಾರ್ಥಿ.

ಗುಬ್ಬಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ.

ಮುಖ್ಯಾಧಿಕಾರಿ ದೂರುದಾರರಿಗೆ ಬೆದರಿಕೆ ಹಾಕುವ ಆಡಿಯೋ.

Leave a Reply

Your email address will not be published. Required fields are marked *

error: Content is protected !!