ಗುಬ್ಬಿ;- ತಲ್ವಾರ್ ಹಿಡಿದು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಸುದ್ದಿ ಬಿತ್ತರವಾದ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ ತಲ್ವಾರ್ ಝಳಪಿರುವ ಬಗ್ಗೆ ಇಬ್ಬರ ಮೇಲೆ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಗುಬ್ಬಿ ಪಟ್ಟಣದಲ್ಲಿ ಕೆಲ ಯುವಕರು ನಡುರಸ್ತೆಯಲ್ಲಿ ಸ್ನೇಹಿತರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ತಲ್ವಾರ್ ಹಿಡಿದು ಕೇಕ್ ಕತ್ತರಿಸುವ ಮೂಲಕ ವಿಚಿತ್ರವಾಗಿ ಜನರಿಗೆ ಭಯ ಹುಟ್ಟಿಸುವ ರೀತಿಯ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನಲೆ ಆರೋಪಿಗಳ ಪತ್ತೆಗೆ ತಂಡವನ್ನು ಪತ್ತೆ ಮಾಡಲು ತುಮಕೂರು ಜಿಲ್ಲಾ ಎಸ್ಪಿ ಅಶೋಕ್ ಕೆ.ವಿ ಸೂಚನೆ ಮೇರೆಗೆ ವಿಶೇಷ ತಂಡವನ್ನ ರಚಿಸಿ ಕಾರ್ಯಾಚರಣೆ ಕೈಗೊಂಡು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಸೈಯದ್ ಶರೂಕ್ ಎಂಬಾತನನ್ನು ಬಂಧಿಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಮತ್ತೊಬ್ಬ ಆರೋಪಿ ಮುಕೀಶ್ ಪಾಷಾ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.