ಗುಬ್ಬಿ.ಬಿಎಸ್ವೈ ಅವರನ್ನು ಕೆಳಗಿಳಿಸಿದರೆ ಭಾರತೀಯ ಜನತಾ ಪಕ್ಷವು ತಳ ಕಚ್ಚುತ್ತದೆ.ಮಠಾಧೀಶರ ಎಚ್ಚರಿಕೆ.

ಗುಬ್ಬಿ ತಾಲ್ಲೂಕಿನ ವಿವಿಧ ಮಠಗಳ ಮಠಾಧೀಶರಿಂದ ಪತ್ರಿಕಾ ಗೋಷ್ಠಿ.

ರಾಜಕಾರಣದಲ್ಲಿ ಉನ್ನತ ಸ್ಥಾನ ಹೊಂದಿರುವ ವ್ಯಕ್ತಿಗಳು ತಮ್ಮ ಕುಟುಂಬವನ್ನು ರಾಜಕೀಯಕ್ಕೆ ತರುವುದನ್ನು ಕೆಲ ಕಾಣದ ವ್ಯಕ್ತಿಗಳು ತೇಜೋವಧೆ ಗೆ ಮುಂದಾಗುತ್ತಿರುವುದು ಬೇಸರದ ಸಂಗತಿ ಎಂದು ಬೆಟ್ಟದಹಳ್ಳಿ ಮಠದ ಅಧ್ಯಕ್ಷರಾದ ಚಂದ್ರಶೇಖರ ಮಹಾಸ್ವಾಮಿಗಳು ರಾಜ್ಯ ರಾಜಕೀಯದ ವಿದ್ಯಾಮಾನಗಳ ಕುರಿತು ಬೇಸರ ವ್ಯಕ್ತಪಡಿಸಿದರು.

ಗುಬ್ಬಿ ತಾಲ್ಲೂಕಿನ ಹೇರೂರು ಗ್ರಾಮದಲ್ಲಿರುವ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಮಠಾಧೀಶರುಗಳು ಯಾವುದೇ ಜನಾಂಗದ ಪರವಾಗಿ ಸುದ್ದಿಗೋಷ್ಠಿಯನ್ನು ನಡೆಸುತ್ತಿಲ್ಲ ಸಮಾಜವನ್ನು ತಿದ್ದುವ ನಿಟ್ಟಿನಲ್ಲಿ ಗುರುಪೀಠದ ಈ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಇಲ್ಲಿಯವರೆಗೂ ಕುಟುಂಬ ರಾಜಕಾರಣದಿಂದ ಪಕ್ಷಗಳು ಹಾಳಾಗಿರುವುದು ಉದಾಹರಣೆಗಳಿಗೆ ರಾಜ್ಯ ಸರ್ಕಾರ ನಡೆಸುತ್ತಿರುವ ಬಿಎಸ್ ವೈ ಅವರನ್ನು ಅವಧಿಗೆ ಮುನ್ನ ಕೆಳಗಡೆ ಸಿಗುತ್ತಿರುವುದು ಸಮಂಜಸವಲ್ಲ ಎಂದು ತಿಳಿಸಿದವರು.

ಸಮಾಜದಲ್ಲಿ ಎಲ್ಲ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಯಡಿಯೂರಪ್ಪನವರನ್ನು ಅವಧಿ ಪೂರ್ಣಗೊಂಡ ನಂತರ ಚಿಂತಿಸುವ ಅಗತ್ಯ ಹೈಕಮಾಂಡ ತೀರ್ಮಾನಿ ಸುವುದು ಸೂಕ್ತ ಎಂದು ತಿಳಿಸಿದರು.

ಶ್ರೀ ಬಸವ ಬೃಂಗೇಶ್ವರ ಸ್ವಾಮಿಗಳು ಮಾತನಾಡಿ ತಳಮಟ್ಟದ ಸಮುದಾಯವನ್ನು ಮೇಲ್ದರ್ಜೆಗೆ ಏರಿಸಲು ಹಾಗೂ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸೌಲಭ್ಯವನ್ನು ಕಲ್ಪಿಸುವಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಶ್ರಮವಹಿಸಿದ್ದು ಇದರಿಂದ ಅವಧಿಗೆ ಮುನ್ನ ಕೆಳಗಿಳಿಸುವುದು ಸಮಂಜಸವಲ್ಲ ಎಂದು ತಿಳಿಸಿದರು.

ಶ್ರೀ ರೇವಣ ಸಿದ್ದೇಶ್ವರ ಸ್ವಾಮಿಗಳು ಮಾತನಾಡಿ ಪೂರ್ಣಪ್ರಮಾಣದಸದಸ್ಯರಿದ್ದು ಕೇವಲ ಕೆಲವೇ ವ್ಯಕ್ತಿಗಳ ಅತಿಯಾಸೆಯಿಂದ ಇಂತಹ ಘಟನೆಗಳು ಸಮಾಜದಲ್ಲಿ ನಡೆಯುತ್ತಿದೆ ಪ್ರತಿಯೊಬ್ಬ ಹಾಗೂ ಪ್ರತಿ ಸಮಾಜವು ಒಪ್ಪುವಂತಹ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿರುವುದು ಶ್ಲಾಘನೀಯ ಬಿಎಸ್ವೈ ಅವರನ್ನು ಕೆಳಗಿಳಿಸಿದರೆ ಭಾರತೀಯ ಜನತಾ ಪಕ್ಷವು ಸಮಾಜದಲ್ಲಿ ತಳ ಕಚ್ಚುತ್ತದೆ ಎಂದು ತಿಳಿಸಿದವರು.

ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಸದಸ್ಯರುಗಳನ್ನು ಪಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು ಶ್ರೀರೇವಣ ಸಿದ್ದೇಶ್ವರ ಸ್ವಾಮೀಜಿ ದೊಡ್ಡಗುಣಿ ಮಾತನಾಡಿ ಯಾವುದೇ ಜಾತಿಗೆ ಸೀಮಿತವಾಗದೆ ಮುಖ್ಯಮಂತ್ರಿಗಳನ್ನು ವಿನಾಕಾರಣ ರಾಜೀನಾಮೆ ಕೇಳುತ್ತಿರುವುದು ಸಮಂಜಸವಲ್ಲ ಕೇವಲ ಒಂದು ಸ್ಥಾನದಿಂದ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಯಡಿಯೂರಪ್ಪನವರ ಶ್ರಮ ಸಾಕಷ್ಟಿದೆ ಇದರಿಂದ ಅವಧಿಗೆ ಮುನ್ನ ಇಳಿಸುವುದು ಸೂಕ್ತವಲ್ಲ ಕೇವಲಲಿಂಗಾಯತ ಮಠಗಳ ಸ್ವಾಮಿಗಳು ಮಾತ್ರವಲ್ಲ ತಳಮಟ್ಟದ ಸಮುದಾಯದ ಮಠಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ರಾಜ್ಯದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಎಲ್ಲಾ ಸೌಲಭ್ಯಗಳನ್ನು ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರುಗಳು ಹಾಗೂ ಸ್ಥಳೀಯ ಮುಖಂಡರುಗಳು ಭಾಗವಹಿಸಿದ್ದರು

error: Content is protected !!