ರಾಜ್ಯದಲ್ಲಿ 10 ನೇ ತರಗತಿ ಪಠ್ಯಕ್ರಮ ಶೇ.20 ರಷ್ಟು ಇಳಿಕೆಗೆ ಚಿಂತನೆ

Source : The New Indian Express

ಬೆಂಗಳೂರು: ಸಾಂಕ್ರಾಮಿಕದ ಕಾರಣದಿಂದ ಉಂಟಾಗಿರುವ SSLC ವಿದ್ಯಾರ್ಥಿಗಳ ಮೇಲಿನ ಭಾರವನ್ನು ಇಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಬಾರಿ 10 ನೇ ತರಗತಿಯ ಪಠ್ಯಕ್ರಮವನ್ನು ಶೇ.20 ರಷ್ಟು ಕಡಿತಗೊಳಿಸುವ ಪ್ರಸ್ತಾವನೆ ಹೊಂದಿದೆ. 

ಬೋರ್ಡ್ ಪರೀಕ್ಷೆಗಳನ್ನು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ಎದುರಿಸಬೇಕಿದ್ದು, ಪಠ್ಯಕ್ರಮವನ್ನು ಪೂರ್ಣಗೊಳಿಸುವಲ್ಲಿ ಹಿಂದುಳಿದಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್ ಆರ್ ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆಯೊಂದಿಗೆ ಈ ವಿಚಾರವಾಗಿ ಈಗಾಗಲೇ ಚರ್ಚೆ ನಡೆಸಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ವಿಶಾಲ್, ಪಠ್ಯಕ್ರಮವನ್ನು ಕಡಿತಗೊಳಿಸುವುದಕ್ಕಾಗಿ ತಜ್ಞರು ಮತ್ತು DESERT ನೆರವನ್ನು ಪಡೆಯಲಿದ್ದೇವೆ ಎಂದು ಹೇಳಿದ್ದಾರೆ. ಅಂತಿಮ ಪಠ್ಯಕ್ರಮವನ್ನು ಶೀಘ್ರವೇ ತೀರ್ಮಾನ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ ಎಂದು ವಿಶಾಲ್ ತಿಳಿಸಿದ್ದಾರೆ. 

ಕೊರೋನಾ ಸಾಂಕ್ರಾಮಿಕದ ಅವಧಿಯಲ್ಲಿ ಬೋರ್ಡ್ ಪರೀಕ್ಷೆಗಳನ್ನು ಬರೆಯುವುದರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಲಾಗಿತ್ತು. ನವೆಂಬರ್ ವರೆಗೂ ಶಾಲೆಗಳು ಪಠ್ಯಕ್ರಮದ ಕೆಲವು ಭಾಗಗಳನ್ನು ಪೂರ್ಣಗೊಳಿಸಿದ್ದು, ಡಿಎಸ್ಇಆರ್ ಟಿಯ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಡಿಸೆಂಬರ್ ನಿಂದ ಏಪ್ರಿಲ್ ತಿಂಗಳವರೆಗೆ ಪೂರ್ಣಗೊಂಡಿರುವ ಪಠ್ಯಕ್ರಮಕ್ಕೆ ರಿವಿಷನ್ ಎಂದು ಪರಿಗಣಿಸಲಾಗುತ್ತದೆ. 

ಸಿಲಬಸ್ ನ್ನು ಪೂರ್ಣಗೊಳಿಸುವುದಕ್ಕಾಗಿ ಶನಿವಾರ ಹಾಗೂ ಭಾನುವಾರಗಳಂದೂ ಸಹ ಶಾಲೆಗಳನ್ನು ಪ್ರಾರಂಭ ಮಾಡುವುದು ಈ ವರೆಗಿನ ಚಿಂತನೆಯಾಗಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದರು. ಶಿಕ್ಷಣ ಇಲಾಖೆ ಅಧಿಕಾರಳು ಹಾಗೂ ವಾಸ್ತವ ಪರಿಸ್ಥಿತಿಯನ್ನು ಅರಿತಿರುವ ಸಿಬ್ಬಂದಿಗಳನ್ನು ಸಂಪರ್ಕಿಸಿದ ಬಳಿಕ, ಪೂರ್ಣಗೊಳಿಸಿರುವುದಕ್ಕೆ ಸಮಯ ತುಂಬಾ ಕಡಿಮೆ ಇದೆ ಎಂಬ ಮಾಹಿತಿ ಪಡೆದಿದ್ದು, ಆಯುಕ್ತರು ಪಠ್ಯಕ್ರಮವನ್ನು ಕಡಿಮೆ ಮಾಡುವ ಸಲಹೆ ನೀಡಿದ್ದಾರೆ.

ಡಿಸೆಂಬರ್ ನಿಂದ ಏಪ್ರಿಲ್ ವರೆಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದ ಸಿಲಬಸ್ ನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ಗರಿಷ್ಠ 2-4 ಪಾಠಗಳು ಕಡಿಮೆಯಾಗಲಿವೆ. ಕಳೆದ ವರ್ಷ ಶೇ.30 ರಷ್ಟನ್ನು ಕಡಿಮೆ ಮಾಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಒಮ್ಮೆ ಸಾರ್ವಜನಿಕ ಶಿಕ್ಷಣ ಆಯುಕ್ತರು ಕಡಿತಗೊಂಡ ಪಠ್ಯಕ್ರಮವನ್ನು ಅನುಮೋದಿಸಿದ ನಂತರ ಎಸ್ಎಸ್ಎಲ್ ಸಿ ಬೋರ್ಡ್ ಗೆ ಕಳಿಸಲಾಗುತ್ತದೆ. ಅದರ ಆಧಾರದಲ್ಲಿಯೇ ಪ್ರಶ್ನೆ ಪತ್ರಿಕೆಯನ್ನು ತಯಾರಿಸಲಾಗುತ್ತದೆ.

error: Content is protected !!