ಟಿಡಿಪಿ ಮತ್ತು ವೈಎಸ್ ಪಿ ಜನರಿಗೆ ಮೋಸ ಮಾಡುತ್ತಿವೆ: ಪ್ರಕಾಶ್ ಜಾವ್ಡೇಕರ್

ವಿಜಯವಾಡ, ಡಿಸೆಂಬರ್ 28: ಆಂಧ್ರ ಪ್ರದೇಶದ ಆಡಳಿತ ಮತ್ತು ವಿರೋಧ ಪಕ್ಷಗಳಾದ ವೈಎಸ್ ಪಿ ಮತ್ತು ಟಿಡಿಪಿ ರಾಜ್ಯದ ಜನರಿಗೆ ಮೋಸ ಮಾಡುತ್ತಿವೆ ಎಂದು ಬಿಜೆಪಿ ಮುಖಂಡ ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ.

ವಿಜಯವಾಡದ ಪ್ರಜಾಗ್ರಹ ಸಭೆಯಲ್ಲಿ ಮಾತನಾಡಿದ ಅವರು “ನಾನು ಕೇಂದ್ರ ಮಂತ್ರಿಯಾಗಿದ್ದಾಗ ಪೂಲವರಂ ಯೋಜನೆಗೆ ಬೇಕಾದ ಎಲ್ಲ ಅನುಮತಿಯೂ ದೊರಕಿತ್ತು, ಅನುಮತಿ ನೀಡಿ ಏಳು ವರ್ಷಗಳು ಕಳೆದರು ಪೂಲವರಂ ಯೋಜನೆಯನ್ನ ಪೂರ್ಣಗೊಳಿಸಿಲ್ಲ, ಜೊತೆಗೆ ನಾನು ಮಂತ್ರಿಯಾಗಿದ್ದಾಗ ಆಂಧ್ರ ಪ್ರದೇಶದಲ್ಲಿ ಹಲವು ಸಮಸ್ಯೆಗಳನ್ನ ಪತ್ತೆಮಾಡಿದ್ದೆ ಎಂದು ಕೆಂಡಾಮಂಡಲವಾದರು. ಆಂದ್ರ ಪ್ರದೇಶದಲ್ಲಿ ವಿವಿಧ ಪ್ರಕರಣಗಳಲ್ಲಿ ಹಲವು ಮುಖಂಡರು ಜಾಮೀನು ಪಡೆದು ಹೊರಗಡೆ ತಿರುಗುತ್ತಿದ್ದಾರೆ ಎಂದು ಜಾವಡೇಕರ್ ತಿಳಿಸಿದರು.

ರಾಜ್ಯದಲ್ಲಿ ಮದ್ಯಪಾನವನ್ನ ನಿಷೇಧ ಎಂದು ಹೇಳಿ ಈಗ ಅದೇ ಮದ್ಯಪಾನದ ಆದಾಯದಲ್ಲಿ ರಾಜ್ಯ ಸರ್ಕಾರ ನಡೆಸುತ್ತಿದ್ದಾರೆ. ತೆಲುಗು ರಾಜ್ಯದಲ್ಲಿ ವೈಎಸ್ ಪಿ, ಟಿಡಿಪಿ, ಟಿ.ಆರ್ ಎಸ್. ಈ ಮೂರು ಪಕ್ಷಗಳು ಕುಟುಂಬ ರಾಜಕಾರಣದ ಪಾರ್ಟಿಗಳೆ ಎಂದು ವಿಮರ್ಶಿಸಿದರು. ಈ ಮೂರು ಸ್ಥಳೀಯ ಪಕ್ಷಗಳು ಭ್ರಷ್ಟಾಚಾರದ ಮಾಡುತ್ತಿದೆ ಎಂದು ಆರೋಪಿಸಿದರು. ಈ ಪಕ್ಷಗಳು ರಾಜ್ಯದ ಜನರನ್ನ ಮೋಸ ಮಾಡುತ್ತಿದೆ ಎಂದು ಆರೋಪಗಳ ಮಳೆ ಸುರಿಸಿದರು.

error: Content is protected !!