ಗುಬ್ಬಿ ತಾಲೂಕು ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ:ನೊಂದ ವೃದ್ದನಿಂದ ವಿನೂತನ ಪ್ರತಿಭಟನೆ

ಗುಬ್ಬಿ : ತಾಲ್ಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ವೃದ್ದರೊಬ್ಬರು ತಹಸಿಲ್ದಾರ್ ಕಚೇರಿ ಎದುರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

ತಾಲ್ಲೂಕಿನ ಕಸಬಾ ಹೋಬಳಿಯ ಸಿಂಗೋನಹಳ್ಳಿ ಗ್ರಾಮದ ಸ.ನಂ.101 ರಲ್ಲಿ ಬಿಲ್ಲೇಪಾಳ್ಯ ವಾಸಿ ಗಂಗಮ್ಮ ಎಂಬುವರಿಗೆ ಸೇರಿದ ಜಮೀನು 3 ಎಕರೆ 5 ಗುಂಟೆ ವಿಸ್ತೀರ್ಣ ಹೊಂದಿದ್ದು ಈ ಜಮೀನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂಮಿ ಭೂ ಸ್ವಾದೀನವಾಗಿದ್ದು ಈ ಜಮೀನು ಕಳೆದು ಕೊಂಡ ನಮ್ಮ ಕುಟುಂಬಕ್ಕೆ ಜಮೀನು ಇಲ್ಲಾ ಮತ್ತು ಪರಿಹಾರವಿಲ್ಲ ಎಂಬ ಪರಿಸ್ಥಿತಿ ಎದುರಾಗಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ನಮಗೆ ಸಹಾಯ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಇಂದು ವಯೋ ವೃದ್ಧ ಹೇರೂರು ನಾಗಣ್ಣ ಮತ್ತು ಪುರುಷೋತ್ತಮ ಎಂಬುವ ಪರಿಹಾರ ವಂಚಿತ ಫಲಾನುಭವಿಗಳು ಗುಬ್ಬಿ ತಹಶೀಲ್ದಾರ್ ಕಛೇರಿಯ ಮುಂಭಾಗ ಕುಳಿತು ವಿನೂತನವಾಗಿ ತಾಲೂಕು ಆಡಳಿತ ವಿರುದ್ಧ ಡಬ್ಬ ಬಡಿಯುವ ಮೂಲಕ ಪ್ರತಿಭಟನೆ ನೆಡೆಸಿದರು. ಸುಮಾರು ಒಂದು ಗಂಟೆಗಳ ಕಾಲ ಪ್ರತಿಭಟನೆ ನೆಡೆಸಿದರು ಸಹ ಯಾವ ಅಧಿಕಾರಿಗಳು ಇವರ ಸಮಸ್ಯೆ ಕೇಳಲು ಯಾರು ಬಾರದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಲಯದ ಆದೇಶಕ್ಕೆ ಬೆಲೆ ನೀಡದ ತಾಲೂಕು ಆಡಳಿತ. ಜಮೀನು ಸಮಸ್ಯೆ ಸರಿಪಡಿಸಿ 4 ತಿಂಗಳ ಒಳಗೆ ದಾಖಲೆ ಮಾಡಲು ಹೈಕೋರ್ಟ್ ಆದೇಶ ಮಾಡಿದರು ಸಹ ಕಳೆದ 1 ವರ್ಷಗಳಿಂದ ಸಂಬಂಧ ಪಟ್ಟ ದಾಖಲೆಗಳನ್ನು ಈ ಕಛೇರಿಯ ಕಡತ ನಿರ್ವಾಹಕ ತಾತಾನಾಯಕ್ ಉದ್ದೇಶ ಪೂರ್ವಕವಾಗಿ ಕಡತಗಳನ್ನು ಕಳೆದುಹಾಕಿ ನಮಗೆ ಅನ್ಯಾಯವೆಸುಗುತ್ತಿದ್ದಾರೆ ಇವರ ನಿರ್ಲಕ್ಷ್ಯ ತನದಿಂದ ನಮ್ಮ ಕುಟುಂಬ ಮಾನಸಿಕನೊಂದಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಸಮಸ್ಯೆ ಸರಿಪಡಿಸದಿದ್ದರೆ ಕುಟುಂಬ ಸಮೇತ ತಾಲೂಕು ಕಛೇರಿ ಮುಂದೆ ಪ್ರತಿಭಟನೆ.

ಸಮಸ್ಯೆ ಪರಿಹರಿಸುವಲ್ಲಿ ಇನ್ನೂ ಸಹ ಬೇಜವಾಬ್ದಾರಿ ತೋರಿದರೆ ನಮ್ಮ ಕುಟುಂಬದ ಎಲ್ಲಾ ಸದಸ್ಯರು ಸಹ ಸಮಸ್ಯೆ ಪರಿಹಾರವಾಗುವ ವರೆವಿಗೂ ಸಹ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡುವ ಇಂಗಿತ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!