ಅನಿಲ್ ದೇಶಮುಖ್ ವಿರುದ್ಧ ಪೂರಕ ಆರೋಪಪಟ್ಟಿ ಪಟ್ಟಿ ಸಲ್ಲಿಸಿದ ಇಡಿ

ಮುಂಬೈ, ಡಿಸೆಂಬರ್ 29: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಜಾರಿ ನಿರ್ದೇಶನಾಲಯ ಬುಧವಾರ ಪೂರಕ ಆರೋಪಪಟ್ಟಿ ಸಲ್ಲಿಸಿದೆ.

ತನಿಖಾ ಸಂಸ್ಥೆಯು 7,000 ಪುಟಗಳ ಚಾರ್ಜ್ ಶೀಟ್ ಅನ್ನು ಸಲ್ಲಿಸಿದ್ದು, ಇದರಲ್ಲಿ ದೇಶಮುಖ್ ಅವರ ಇಬ್ಬರು ಪುತ್ರರನ್ನು ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.

ದೇಶಮುಖ್ ಖಾಸಗಿ ಕಾರ್ಯದರ್ಶಿ (ಹೆಚ್ಚುವರಿ ಕಲೆಕ್ಟರ್ ಶ್ರೇಣಿಯ ಅಧಿಕಾರಿ) ಸಂಜೀವ್ ಪಲಾಂಡೆ ಮತ್ತು ಆಪ್ತ ಸಹಾಯಕ ಕುಂದನ್ ಶಿಂಧೆ ಸೇರಿದಂತೆ 14 ಆರೋಪಿಗಳ ವಿರುದ್ಧ ಇಡಿ ಈ ಹಿಂದೆ ಚಾರ್ಜ್ ಶೀಟ್ ಸಲ್ಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಮುಖ್ ಅವರನ್ನು ಈ ವರ್ಷ ನವೆಂಬರ್ 1 ರಂದು ಇಡಿ ಬಂಧಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಭ್ರಷ್ಟಾಚಾರ ಮತ್ತು ಅಧಿಕೃತ ಸ್ಥಾನದ ದುರುಪಯೋಗದ ಆರೋಪದ ಮೇಲೆ ಈ ವರ್ಷದ ಏಪ್ರಿಲ್ 21 ರಂದು ಹಿರಿಯ ಎನ್‍ಸಿಪಿ ನಾಯಕನ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್‍ಐಆರ್ ದಾಖಲಿಸಿದ ನಂತರ ದೇಶ್‍ಮುಖ್ ಮತ್ತು ಅವರ ಸಹಚರರ ವಿರುದ್ಧ ಇಡಿ ತನಿಖೆ ಆರಂಭಿಸಿತ್ತು.

ಈ ಹಣವನ್ನು ಸಾಲದ ಮೂಲಕ ಮತ್ತು ಕಂಪನಿಗಳಿಂದ ಪಡೆದ ಸಿಎಸ್‍ಆರ್ ಎಂದು ದೇಶಮುಖ್ ಹೇಳಿಕೊಂಡಿದ್ದರು ಎಂದು ಇಡಿ ಆರೋಪಿಸಿದೆ. ದೇಶಮುಖ್ ಬಂಧಿತನಾರಾದ್ದು, ಜಾಮೀನಿಗೆ ಇನ್ನೂ ಅರ್ಜಿ ಸಲ್ಲಿಸಿಲ್ಲ. ದೇಶಮುಖ್ ಅವರ ಇತರ ಇಬ್ಬರು ಸಿಬ್ಬಂದಿ ಸಂಜೀವ್ ಪಲಾಂಡೆ ಮತ್ತು ಕುಂದನ್ ಶಿಂಧೆ ಅವರಿಗೆ ವಿಶೇಷ ನ್ಯಾಯಾಲಯವು ಜಾಮೀನು ನಿರಾಕರಿಸಿದ್ದು ಅವರು ಬಂಧನದಲ್ಲಿದ್ದಾರೆ.

error: Content is protected !!