ಅಪಾರ್ಟ್ ಮೆಂಟ್ ನ 12 ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು: 14 ವರ್ಷದ ಬಾಲಕಿ ಅಪಾರ್ಟ್ ಮೆಂಟ್ ನ 12 ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹುಳಿಮಾವು ನಲ್ಲಿ ಭಾನುವಾರ ನಡೆದಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಇದು ಆತ್ಮಹತ್ಯೆ ಪ್ರಕರಣವಾಗಿದ್ದು, ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಮೃತ
ಬಾಲಕಿ ಖಾಸಗಿ ಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.

ಮೃತ ಬಾಲಕಿಯನ್ನು ವೈಷ್ಣವಿ ಎಂದು ಗುರುತಿಸಲಾಗಿದ್ದು ಸಿವಿಲ್ ಕಾಂಟ್ರಾಕ್ಟರ್ ವೀರೇಂದ್ರ ಅವರ ಪುತ್ರಿಯಾಗಿದ್ದಾಳೆ.  ಈಕೆ ಹುಳಿಮಾವುನ ವೇಣುಗೋಪಾಲ್ ನಗರದ ನಿವಾಸಿಯಾಗಿದ್ದಾರೆ.

ರಾತ್ರಿ 10:30 ಕ್ಕೆ ಈ ಘಟನೆ ನಡೆದಿದ್ದು, ಊಟದ ನಂತರ  ಡ್ರಾಯಿಂಗ್ ರೂಮ್ ನಲ್ಲಿರುವ ಬಾಲ್ಕನಿಗೆ ತೆರಳಿದ್ದರು. ಕೆಲವು ಸಮಯದ ಬಳಿಕ ಆಕೆಯ ಸಹೋದರನಿಗೆ ಆಕೆ ಚೀರುತ್ತಿದ್ದ ಶಬ್ದ ಕೇಳಿಬಂದಿದ್ದು ಆತ ಅಲ್ಲಿಗೆ ತೆರಳಿ ನೋಡುವ ವೇಳೆಗೆ ಯುವತಿ ಕೆಳಗೆ ಬಿದ್ದಿದ್ದಳು. ಭದ್ರತಾ ಸಿಬ್ಬಂದಿಯೂ ಸಹ ಆಕೆ ಕೆಳಗೆ ಬಿದ್ದ ಶಬ್ದ ಕೇಳಿದ್ದು ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆ ವೇಳೆಗಾಗಲೇ ಆಕೆ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

error: Content is protected !!