ತುಮಕೂರು: ಹಣಕಾಸು ವಿಚಾರಕ್ಕೆ ಗುತ್ತಿಗೆದಾರರಿಬ್ಬರು ಬೀದಿ ಕಾಳಗ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಶಿರಾ ದಲ್ಲಿ ನಡೆದಿದ್ದು ಈ ವಿಡಿಯೋ ವೈರಲ್ ಆಗಿದೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಮೋಟಿಹಳ್ಳಿ ನಿವಾಸಿ ಗ್ರೇಡ್ 2 ಕಂಟ್ರಾಕ್ಟರ್ ಜಯಣ್ಣ ಹಾಗೂ ಮತ್ತೊಬ್ಬ ಗುತ್ತಿಗೆದಾರ ಸಬ್ಬೆನಹಳ್ಳಿ ಗ್ರಾಮದ ರಾಜಣ್ಣ ನಡುವೆ ಹಣಕಾಸು ವಿಚಾರಕ್ಕೆ ಬೀದಿ ರಂಪಾಟ ಮಾಡಿಕೊಂಡಿದ್ದಾರೆ.
ರಾಜಣ್ಣ ಎಂಬಾತ ನನಗೆ 10 ಲಕ್ಷ ಹಣ ಕೋಡಬೇಕಿದೆ ಇದನ್ನ ಕೇಳಿದ್ದಕ್ಕೆ ನನ್ನನ್ನು ಫಾಲೋ ಮಾಡಿಕೊಂಡು ಬಂದು ಹಲ್ಲೆ ಮಾಡಿ, ಕೊಲೆ ಯತ್ನ ನಡೆಸಿದ್ದಾನೆ, ನನಗೆ ಪ್ರಾಣಬೆದರಿಕೆ ಇದೆ ಎಂದು ಆರೋಪಿಸಿ ಗುತ್ತಿಗೆದಾರ ಜಯಣ್ಣ ಶಿರಾ ಪೊಲೀಸ್ ಠಾಣೆಯಲ್ಲಿ ರಾಜಣ್ಣ ವಿರುದ್ದ ದೂರು ನೀಡಿದ್ದಾರೆ. ಪೊಲೀಸರು ರಾಜಣ್ಣನ್ನ ಈವರೆಗೆ ಬಂದಿಸಿಲ್ಲ, ರಾಜಣ್ಣನಿಗೆ ಶಾಸಕರ ಬೆಂಬಲವಿದೆ, ಅವರಿಂದ ಎಲ್ಲಿಗೆ ಬೇಕಾದರೂ ಫೋನ್ ಮಾಡಿಸುತ್ತಾನೆ ಆಗಾಗಿ ರಾಜಣ್ಣನಿಂದ ನನಗೆ ರಕ್ಷಣೆ ಕೊಡಿ ಎಂದು ಮಾಧ್ಯಮಗಳ ಮುಂದೆ ಅವಲತ್ತುಕೊಂಡಿದ್ದಾರೆ.
ಆದ್ರೆ ಗುತ್ತಿಗೆದಾರ ರಾಜಣ್ಣ ಹೇಳೊದೆ ಬೇರೆ, ಜಯಣ್ಣನೇ ನನಗೆ 5 ಲಕ್ಷ ಹಣ ಕೊಡಬೇಕಿದೆ, ಅದನ್ನ ಕೇಳಿದ್ದಕ್ಕೆ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದಿದ್ದಾರೆ. ಈ ಹಿಂದೆ ನಾನು ಜಯಣ್ಣ ಅವರ ಹತ್ತಿರ ಕೆಲಸ ಮಾಡುತ್ತಿದ್ದೆ. 9 ಲಕ್ಷ ಹಣ ಖರ್ಚು ಮಾಡಿ ಸಿಸಿ ರಸ್ತೆ, ಚರಂಡಿ ಕೆಲಸಗಳಿಗೆ ಮೆಟಿರಿಯಲ್ ಸಪ್ಲೈ ಮಾಡಿಕೊಟ್ಟಿದ್ದೆ, ಅದೇ ಸಮಯದಲ್ಲಿ ನಮ್ಮ ಕುಟುಂಬದಲ್ಲಿ ಸೊಸೆಯೊಬ್ಬರು ಮೃತಪಟ್ಟಿದ್ದರು ಈ ವಿಚಾರಕ್ಕೆ ಜಯಣ್ಣನೇ ನನಗೆ ಸಿಎಂ ಕಚೇರಿಯಲ್ಲಿ ಎಲ್ಲರೂ ಗೊತ್ತು, ಒಳ್ಳೆಯ ಲಾಯರ್ ಗೊತ್ತಿದ್ದಾರೆ ಬೇಲ್ ಕೊಡಿಸುತ್ತೇನೆ ಎಂದರು. ನಾನು ನಂಬಿ 4.5 ಲಕ್ಷ ಹಣ ಕೊಟ್ಟಿದ್ದೆ, ಬೇಲ್ ಗೆ ಎಷ್ಟು ಖರ್ಚಾಗಿದೆ ಲೆಕ್ಕ ಬರೆದಿಟ್ಟುಕೊಳ್ಳಿ ಕೊಡುತ್ತೇನೆ ಎಂದಿದ್ದೆ, 20 ಲಕ್ಷ ಖರ್ಚಾಗಿದೆ ಎಂದು ಲೆಕ್ಕ ಬರೆದುಕೊಟ್ಟಿದ್ದರು ನನಗೆ ಆಶ್ಚರ್ಯ ಆಗಿ ಪರೀಶೀಲನೆ ಮಾಡಿದ್ಮೇಲೆ 1.5 ಲಕ್ಷ ಖರ್ಚಾಗಿದೆ ಎಂದು ತಿಳಿತು, ಬಾಕಿ ಹಣ ಇವರ ಬಳಿನೇ ಇದೆ. ಆದರೂ 20 ಲಕ್ಷ ಖರ್ಚಾಗಿದೆ ಬಾಕಿ 15 ಲಕ್ಷ ಕೊಡು ಅಂತಾ ಟಾರ್ಚರ್ ಕೊಡ್ತಿದ್ದಾರೆ.
ನನಗೆ ಕೊಡಬೇಕಿದ್ದ 9 ಲಕ್ಷ ಹಣದಲ್ಲಿ 5.44 ಲಕ್ಷ ಹಣ ಜಯಣ್ಣನೆ ಭಾಕಿ ಕೊಡಬೇಕು, ಅದನ್ನ ಕೊಡಿ ಎಂದು ಕೇಳಿದ್ದಕ್ಕೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ, ಈ ಬಗ್ಗೆ ನಾನು ಜಯಣ್ಣ ವಿರುದ್ದ ಈ ಹಿಂದೆ ದೂರು ನೀಡಿದ್ದೇನೆ, ಹಣ ಕೊಡೋದಾಗಿ ಪೊಲೀಸರ ಎದುರೆ ಒಪ್ಪಿಕೊಂಡು ಬರೆದುಕೊಟ್ಟಿದ್ದಾರೆ, ಈ ಬಗ್ಗೆ ಎನ್ ಸಿ ಆರ್ ಕೂಡ ಆಗಿದೆ ಎಂದಿದ್ದಾರೆ.