ತುರುವೇಕೆರೆ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ‌ ಮಠದ ಮಾಯಸಂದ್ರ ಶಾಖೆ ವತಿಯಿಂದ “ಜೀವರಕ್ಷಕ ಔಷಧಿಗಳು ಮತ್ತು ಸುರಕ್ಷಾ ಪರಿಕರಗಳ” ವಿತರಿಸಿದ ಬ್ರಹ್ಮಚಾರಿಗಳಾದ ಶ್ರೀ ಸತ್ ಕೀರ್ತಿನಾಥ ಸ್ವಾಮೀಜಿ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ‌ ಮಠದ ಮಾಯಸಂದ್ರ ಶಾಖೆ ವತಿಯಿಂದ “ಜೀವರಕ್ಷಕ ಔಷಧಿಗಳು ಮತ್ತು ಸುರಕ್ಷಾ ಪರಿಕರಗಳ” ವಿತರಿಸಿದ ಬ್ರಹ್ಮಚಾರಿಗಳಾದ ಶ್ರೀ ಸತ್ ಕೀರ್ತಿನಾಥ ಸ್ವಾಮೀಜಿ.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಾಯಸಂದ್ರ- ಟಿ.ಬಿ.ಕ್ರಾಸ್ ಶಾಖೆಯ ವತಿಯಿಂದ ಸೋಂಕಿತರಿಗೆ ಮತ್ತು ಕೊರೋನಾ ವಾರಿಯರ್ಸ್ ಗಳಿಗೆ ಜೀವರಕ್ಷಕ ಔಷಧಿಗಳು ಮತ್ತು ಅಗತ್ಯ ಸುರಕ್ಷಾ ಪರಿಕರಗಳನ್ನು ಶಾಖೆಯ ಬ್ರಹ್ಮಚಾರಿ ಗಳಾದ ಶ್ರೀ ಸತ್ ಕೀರ್ತಿನಾಥ ಸ್ವಾಮೀಜಿಯವರು ತಮ್ಮ ಸೇವೆಯಾಗಿ ನೀಡಿದರು.

ಈ ವೇಳೆ ಶ್ರೀಗಳು ಮಾತನಾಡಿ ಕೊರೋನಾ ಎಂಬ ಸೋಂಕು ವಿಶ್ವದಲ್ಲೆಡೆ ಹಬ್ಬಿಕೊಂಡು ಹಲವಾರು ಜನರನ್ನು ಬಲಿ ಪಡೆದಿದೆ. ಬಡವರು, ನಿರ್ಗತಿಕರು, ಕೊರೋನಾದಿಂದ ಮೃತ ಪುಟ್ಟ ಕುಟುಂಬದವರು ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಲವಾರು ಸಂಘಟನೆಗಳು, ಸಂಘ-ಸಂಸ್ಥೆಗಳು, ಮಠ-ಮಾನ್ಯಗಳು, ಜನಪ್ರತಿನಿಧಿಗಳು,ದಾನಿಗಳು, ಸಮಾಜ ಸೇವಕರು ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದಾರೆ. ಹಾಗೆಯೇ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಕೃಪಾಶೀರ್ವಾದದಿಂದ ಹಾಗೂ ಮಠದ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ, ಕೊರೋನಾದಂತಹ ಸಮಯದಲ್ಲಿ ಹಲವು ರೀತಿಯ ಸಮಾಜಮುಖಿ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ಹಾಗಾಗೀ ನಮ್ಮ ಶಾಖಾ ವತಿಯಿಂದ ನಮ್ಮ ಕೈಲಾದ ಸೇವೆಯನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸೋಂಕಿತರಿಗೆ ಹಾಗೂ ಕೊರೋನ ವಾರಿಯರ್ಸ್ ಗಳಿಗೆ ತಮ್ಮ ಕೈಲಾದ ಅಗತ್ಯ ಸೇವೆಗಳನ್ನು ಮಾಡಲಾಗುವುದು ಎಂದರು. ತಮ್ಮ ಪ್ರಾಣದ ಹಂಗನ್ನು ತೊರೆದು ಹಗಲಿರುಳೆನ್ನದೆ ಸೇವೆಸಲ್ಲಿಸುತ್ತಿರುವ ಎಲ್ಲಾ ಕೊರೋನಾ ವಾರಿಯರ್ಸ್ ಗಳ ಸೇವೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಮಹಾಸಂಸ್ಥಾನ ಮಠದ ವತಿಯಿಂದ ಅವರುಗಳ ಸೇವೆಯನ್ನು ಶ್ಲಾಘಿಸಿಲಾಗುವುದು. ಎಲ್ಲರೂ ಸಹ ಸುರಕ್ಷಿತವಾಗಿರಿ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಪ್ಪದೇ ಲಸಿಕೆ ಪಡೆದುಕೊಂಡು ಕೊರೋನಾ ಮುಕ್ತರಾಗಿರಿ. ವಿಶ್ವದಿಂದಲೇ ಕೊರೋನಾ ಎಂಬ ಕಾಯಿಲೆಯು ದೂರವಾಗಲಿ ಎಂದು ಭಗವಂತನಲ್ಲಿ ಎಲ್ಲರೂ ಪ್ರಾರ್ಥಿಸೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಸ್.ಬಿ.ಜಿ ವಿದ್ಯಾಲಯದ ಮುಖ್ಯ ಶಿಕ್ಷಕರಾದ ಗಿರೀಶ್ ಸಹ ಸಿಬ್ಬಂದಿಗಳು‌ ಮಾಯಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಶಂಕರೇಗೌಡ. ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಯತಿರಾಜ್ ಮತ್ತು ಯೋಗೇಶ್. ಫಾರ್ಮಸಿ ಅಧಿಕಾರಿಯಾದ ಭಾರತಿ. ನರ್ಸ್ ಗಳು ಸಹಾ ಸಿಬ್ಬಂದಿ ವರ್ಗ ಸೇರಿದಂತೆ ಆಶಾ ಕಾರ್ಯಕರ್ತೆರು, ಮುಂತಾದವರು ಪಾಲ್ಗೊಂಡಿದ್ದರು.

ವರದಿ-ಸಚಿನ್ ಮಾಯಸಂದ್ರ.

Leave a Reply

Your email address will not be published. Required fields are marked *

error: Content is protected !!