ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಬ ಮೇಳದಲ್ಲಿ ಲಕ್ಷಾಂತರ ಮಂದಿ ಸಾದುಗಳು, ಸಂತರು ಗುರುವಿನ ಅನುಗ್ರಹಕ್ಕಾಗಿ ತಪಸ್ಸಿನಂತೆ ಆಚರಣೆ ಮಾಡುತ್ತಿದ್ದಾರೆ. 12 ವರ್ಷಕ್ಕೊಮ್ಮೆ ನಡೆಯುವ ಕುಂಬಮೇಳದ ವಿಶೇಷತೆ ಏನು, ಗುರುವು ಪಥ ಬದಲಿಸಿ ಕುಂಬ ರಾಶಿಗೆ ಪ್ರವೇಶಿಸುವ ಸಂದರ್ಭದಲ್ಲಿ ಭೂಚಕ್ರದಲ್ಲಿ ನಡೆಯುವ ಪವಾಡವೇನು, ಇದರಿಂದ ಜನರಿಗೆ ಅನುಕೂಲಗಳೇನು ಈ ಬಗ್ಗೆ ವೈಜ್ಞಾನಿಕ ಜ್ಯೋತಿಷಿ ಆಗಮವಾದಿ ಅಖಿಲೇಷ್ ಗುರೂಜಿ ಹಲವಾರು ಗ್ರಂಥಗಳನ್ನ ಅಧ್ಯಯನ ಮಾಡಿ ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ.
ಕುಂಭ ಮೇಳದ ಬಗ್ಗೆ ಸಾಕಷ್ಟು ವೈದಿಕ ಹಾಗೂ ಪೌರಾಣಿಕೊತ್ತಮ ಕಥೆ ಗ್ರಂಥ ಹಿನ್ನೆಲೆ ಗಮನಿಸಿರಬಹುದು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಪ್ರಯತ್ನ ಸತತವಾಗಿ 20 ದಿನಗಳ ಕಾಲ ಅನ್ವೇಷಿಶಿ ಕುಂಭಮೇಳ ಹಿಂದಿರುವ ವಿಜ್ಞಾನವನ್ನ ಅಖಿಲೇಶ್ ಆಗಮವಾದಿ ಕಲೆ ಹಾಕಿದ್ದಾರೆ.
ಈ ಕುಂಭ ಮೇಳವು ಹಿಂದೂ ಧರ್ಮದಲ್ಲಿ ಒಂದು ಸಾಮೂಹಿಕ ತೀರ್ಥ ಯಾತ್ರೆ ಎಂದು ಕರೆಯಬಹುದು ಸಾಮಾನ್ಯವಾಗಿ ಕುಂಭಮೇಳ 4 ವರ್ಷಕ್ಕೆ ಒಮ್ಮೆ ನಡೆಯುತ್ತದೆ, ಅರ್ಧ ಕುಂಭ ಮೇಳ 6 ವರ್ಷಕ್ಕೆ ಒಮ್ಮೆ ನಡೆಯುತ್ತದೆ ಪೂರ್ಣ ಕುಂಭಮೇಳ 12 ವರ್ಷಕ್ಕೆ ನಡೆಯುವ ಪದ್ಧತಿ ಇದೆ ಈ ಕುಂಭ ಮೇಳ ಈ ಕಾಲ ಘಟ್ಟದಲ್ಲಿ ನಡೆಯುವ ಉದ್ದೇಶ ಏನೆಂದರೆ ಜ್ಯೋತಿಷ್ಯ ಶಾಸ್ರ್ತದ ಪ್ರಕಾರ ಭೂಚಕ್ರದಲ್ಲಿ ನಡೆಯುವ ಗ್ರಹಗಳ ಚಲನವಲನವನ್ನು ಬೆನ್ನಟ್ಟಿದಾಗ ಗುರುಗ್ರಹವು ಗೋಚಾರದಲ್ಲಿ ಜಲತತ್ವ ಹಾಗೂ ಭೂತತ್ವ ರಾಶಿಗಳಲ್ಲಿ ಬಂದಾಗ ಈ ಕುಂಭಮೇಳ ನಡೆದಿರುವುದು ಕಂಡು ಬಂದಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ ಏಕೆಂದರೆ ಪ್ರಸ್ತುತ ಗುರುವು ಭೂತತ್ವ ರಾಶಿಯಾದ ವೃಷಭ ರಾಶಿಯಲ್ಲಿದ್ದು, ಸೂರ್ಯ ಮಕರ ರಾಶಿಯಲ್ಲಿದ್ದಾನೆ.
ಗುರುವಿನ ಸಂಪೂರ್ಣ ದೃಷ್ಟಿ 9 ನೇ ಮನೆ ಬೀಳುವುದರಿಂದ ಈ ಒಂದು ಪರಿಕ್ರಮ 12 ವರುಷಕ್ಕೆ ಮಾತ್ರ ಬರುತ್ತದೆ ಗುರುವು ವರ್ಷಕ್ಕೆ ಒಮ್ಮೆ ತನ್ನ ಪಥ ಸಂಚಲನೆ ಮಾಡುತ್ತಾನೆ ದ್ವಾದಶ ರಾಶಿ ಅಂದರೆ 12 ರಾಶಿ ಗಳ ಸಂಚಾರ 12 ವರ್ಷ ತೆಗೆದು ಕೊಳ್ಳುತ್ತದೆ
ನಮ್ಮ ಜ್ಯೋತಿಷಾಸ್ತ್ರದ ಪ್ರಕಾರ ಗುರುವಿಗೆ ಬಹಳ ಮಹತ್ವವಿದೆ ಗುರು ದೃಷ್ಟಿ ಇದ್ದರೆ ಸರ್ವ ಪಾಪ ದೋಷ ಪರಿಹಾರ ವಾಗುತ್ತದೆ ಎಂಬ ನಂಬಿಕೆ ಇದೆ ಜಾತಕದಲ್ಲಿ ಗುರು ಉಚ್ಚಸ್ಥಾನದಲ್ಲಿದ್ದರೆ ವ್ಯಕ್ತಿ ಮುನ್ನಡೆ ಸಾಗುತ್ತಾನೆ ಹಾಗೆ ಗಜಕೇಸರಿ ಗೂ ಗುರು ಚಂದ್ರರು ಕಾರಣರಾಗಿದ್ದಾರೆ ,
ಮಕರ ಸಂಕ್ರಮಣ ಕಾಲದಲ್ಲಿ ವಿಶೇಷ ವಾಗಿ ಸೂರ್ಯ ತನ್ನ ದಿಕ್ ಪಥ ಬದಲಾವಣೆ ಗೊಳ್ಳುವುದು ಅಂದರೆ ಉತ್ತರಾಯಣ ವೈದಿಕ ಹಿನ್ನೆಲೆಯ ಪ್ರಕಾರ ಈ ಒಂದು ಸಂದರ್ಭದಲ್ಲಿ ಗುರುವಿನ ಪೂರ್ಣ ದೃಷ್ಟಿ ಪ್ರಭಾವ ಹೆಚ್ಚಾಗಿ ಇರುವುದರಿಂದ ಸೂರ್ಯನು ಕುಂಬರಾಶಿಗೆ ಪ್ರವೇಶ ಮಾಡುವ ಮೊದಲು ಸೂರ್ಯನ ತೇಜಸ್ಸಿನ ಪ್ರಭಾವದಿಂದ ನದಿ ಕೆರೆ, ನೀರು ಅಮೃತದಂತೆ ಪರಿಶುದ್ಧತೆ ಪಡೆಯಲಿದೆ ಎಂಬ ಉದ್ದೇಶ ದಿಂದ ಮತ್ತು ಗಂಗಾ ಯಮುನಾ ಸರಸ್ವತಿ ನದಿಗಳಲ್ಲಿ ವಿಶೇಷವಾದ ಔಷದಿ ಗುಣಗಳಿದ್ದು ಈ ನದಿ ಸ್ನಾನ ಶ್ರೇಷ್ಠ ವೆಂದೆನಿಸುತ್ತದೆ ಇದು ವೈಜ್ಞಾನಿಕವಾಗಿ ಈಗಾಗಲೇ ಸಾಭಿತಾಗಿದೆ ಎಂದಿದ್ದಾರೆ.
ಬ್ರಹ್ಮ ಹಾಗೂ ಬ್ರಾಹ್ಮಿ ಮುಹೂರ್ತದಲ್ಲಿ ಸೂರ್ಯನ ಪ್ರಕಾಶ ಕ್ಕೆ ಅನೇಕ ನಕ್ಷತ್ರ ಪುಂಜಗಳು ಸೇರಿದಂತೆ ಗ್ರಹಗಳ ಹೊಳೆಯುತ್ತವೆ ಹೀಗೆ ಭೂಮಿಯ ಮೇಲೆ ಅದರ ಬೆಳಕು ಪ್ರತಿಬಿಂಬಿಸುವುದರಿಂದ ಗುರು ಪ್ರಭಾವ ಈ ಸಂದರ್ಭದಲ್ಲಿ ಹೆಚ್ಚು ಬೀಳುವುದರಿಂದ ಈ ಸಮಯ ನದಿ ಸ್ನಾನಕ್ಕೆ ಬಹಳ ಶ್ರೇಷ್ಠವಾಗಿದೆ ಎಂದು ಅಖಿಲೇಶ್ ಆಗಮವಾದಿ ತಿಳಿಸಿದ್ದಾರೆ.
12 ವರ್ಷಕ್ಕೊಮ್ಮೆ ನಡೆಯುವ ಕುಂಬಮೇಳ.
4 ವರ್ಷಕ್ಕೆ ಹಾಗೂ 6 ವರ್ಷಕ್ಕೆ ಬರುವ ಕುಂಭ ಮೇಳದಲ್ಲಿ ಗುರು ಜಲತತ್ವ ರಾಶಿಯಲ್ಲಿ ನೆಲೆಸಿರುತ್ತಾನೆ, 12 ವರುಷಕ್ಕೆ ಬರುವ ಕುಂಭ ಮೇಳದಲ್ಲಿ ಗುರುವು ಭೂತತ್ವ ರಾಶಿಯಲ್ಲಿ ನೆಲೆಸಿರುತ್ತಾನೆ ಆದ ಕಾರಣ ಭೂಮಂಡಲದಲ್ಲಿ ನೀರಿನ ಮೇಲೆ ಪ್ರಭಾವ ಬೀರುವುದರಿಂದ ಜಲಸ್ನಾನ ನದಿಸ್ನಾನಕ್ಕೆ ಮಹತ್ವವಾಗಿದೆ. ಜ್ಯೋತಿಷ್ಯದಲ್ಲಿ ಸಮುದ್ರಕ್ಕೆ ಚಂದ್ರ ಕಾರಕ ನದಿಗಳಿಗೆ ಗುರು ಕಾರಕ ನದಿಹರಿದು ಸಮುದ್ರ ಸೇರುವುದು ಸಂಯೋಗವಾಗಿದೆ ಗುರು ಚಂದ್ರ ಸೇರುವ ಯೋಗಕ್ಕೆ ಗಜಕೇಸರಿ ಯೋಗ ಎಂದು ಹೆಸರು ಆದ ಕಾರಣ ಈ ಸಂದರ್ಭದಲ್ಲಿ ನದಿಸ್ನಾನಕ್ಕೆ ಬಹಳ ಮಹತ್ವ ನೀಡಲಾಗಿದೆ. 28 ನೇ ತಾರೀಖು ಮಧ್ಯಾಹ್ನ ಸುಮಾರು 2.53 ಕ್ಕೆ ಗಜಕೇಸರಿ ಯೋಗ ಪ್ರಾರಂಭವಾಗಲಿದ್ದು 30 ನೇ ತಾರೀಖು ಸಂಜೆ 6 .38 ಕ್ಕೆ ಮುಗಿಯುತ್ತದೆ ಈ ವೇಳೆ ನದಿ ಸ್ನಾನಕ್ಕೆ ಪ್ರಶಸ್ತವಾಗಿದೆ ಎಂದು ತಿಳಿಸಿದ್ದಾರೆ.
ಗುರು ಅನುಗ್ರಹಕ್ಕೆ ನಾಗಸಾದು, ಸಂತರು, ಋಷಿಮುನಿಗಳು ತಪಸ್ಸಿನ ಆಚರಣೆ.
ನಾಗಸಾಧುಗಳು ಅಘೋರಿಗಳು ಸಾದು ಸಂತರು ಸಿದ್ದರು ಋಷಿ ಗಳು ತಪಸ್ವಿಗಳು ಇನ್ನೂ ಅನೇಕರು ಗುರುಪರಂಪರೆಯಾದುದ್ದರಿಂದ ಗುರುವಿನ ಅನುಗ್ರಹಕ್ಕೆ ಹಾಗೂ ಶಕ್ತಿ ಸಾದನಕ್ಕೆ ವಿಶೇಷ ಮತ್ತು ಅಲೌಕಿಕ ಶಕ್ತಿ ಅನುಗ್ರಹಕ್ಕೆ ಈ ಒಂದು ಪದ್ಧತಿ ಯನ್ನು ತಪಸ್ಸಿನಂತೆ ಆಚರಣೆ ಮಾಡುತ್ತಿದ್ದಾರೆ. ಯಾರಿಗೆ ಜಾತಕದಲ್ಲಿ ಗುರು ನೀಚನಾಗಿದ್ದರೆ ಗುರು ದುಸ್ಥಾನದಲ್ಲಿದ್ದರೆ ಈ ಒಂದು ಸ್ನಾನ ಮಾಡುವುದರಿಂದ ಗುರು ಅನುಗ್ರಹ ಸಿಗುತ್ತದೆ
ಈ ಸ್ನಾನ ಮಾಡುವುದರಿಂದ ಸತ್ ಚಿತ್ ಆನಂದ ಮನಃ ಶುದ್ಧಿ ದೇಹ ಶುದ್ಧಿ ತನು ಶುದ್ಧಿ ಏಕಾಗ್ರತೆ ಆರೋಗ್ಯ, ಚಕ್ರ ಜಾಗೃತಿ, ಜ್ಞಾನ , ವೈರಾಗ್ಯ , ಯೋಗಸಾದನೆಗೆ ಅನುಕೂಲ , ಇನ್ನೂ ಅನೇಕ ವಿಚಾರಗಳನ್ನು ಒಳಗೊಂಡಿದೆ.
ಇನ್ನೂ ಅನೇಕ ಜ್ಯೋತಿಷ ವಿಚಾರ ಜಾತಕ ಕುಂಡಲಿರಚನೆ ಮುಹೂರ್ತ ಪೌರೋಹಿತ್ಯಕ್ಕಾಗಿ ಸಂಪರ್ಕಿಸಿ
ಶ್ರೀ ಅಖಿಲೇಶ್ ಆಗಮವಾದಿ +91 84958 19002,8095959631