ಮಾಯಸಂದ್ರ ಗ್ರಾಮದಲ್ಲಿ ದಿ.ಪುನೀತ್ ರಾಜಕುಮಾರ್ ರವರ ವಿಶೇಷ ಪುಣ್ಯಸ್ಮರಣೆ ಕಾರ್ಯಕ್ರಮ.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ದಿ.ನಟ ರಾಜಕುಮಾರ್ ರವರ ಅಭಿಮಾನಿಗಳ ಸಂಘ ಮತ್ತು ವಿವಿಧ ಪರ ಸಂಘ-ಸಂಸ್ಥೆಗಳು ಜೊತೆಗೂಡಿ ಗ್ರಾಮದ ಮುಖಂಡರುಗಳ ಆಶ್ರಯದಲ್ಲಿ ಯುವರತ್ನ ದಿ. ನಟ ಪುನೀತ್ ರಾಜಕುಮಾರ್ ಅವರ ಶ್ರದ್ದಾಂಜಲಿ ಮತ್ತು ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಜಾತ್ಯತೀತವಾಗಿ ಹಾಗೂ ಪಕ್ಷಾತೀತವಾಗಿ ಬಹಳ ಅರ್ಥಪೂರ್ಣವಾಗಿ ಮಾಯಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ರಂಗಮಂದಿರದಲ್ಲಿ ನೂರಾರು ಅಭಿಮಾನಿಗಳ ಹಾಗೂ ಗ್ರಾಮಸ್ಥರು ಉಪಸ್ಥಿತಿಯಲ್ಲಿ ಆಚರಿಸಲಾಯಿತು.

ದಿ.ಪುನೀತ್ ರಾಜಕುಮಾರ್ ಅವರ ಭಾವಚಿತ್ರವಿರಿಸಿ, ಹಲವು ರೀತಿಯ ಎಡೆ- ನೈವೇದ್ಯಗಳನ್ನು ಇಟ್ಟು, ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು. ನಂತರ ಗ್ರಾಮದ ಗಣ್ಯರು ಹಾಗೂ ಮುಖಂಡರು ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರೊಂದಿಗೆ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಿದರು.

ಈ ವೇಳೆ ಹೋಬಳಿಯ ಸಾರ್ವಜನಿಕರಿಗೆ ವಿಶೇಷವಾದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.ದಿ. ಪುನೀತ್ ರವರ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಲಾಗಿದ್ದ ನೇತ್ರದಾನ ನೋಂದಣಿ ಶಿಬಿರ ಮತ್ತು ರಕ್ತದಾನ ಶಿಬಿರದಲ್ಲಿ ಗ್ರಾಮದ ಮುಖಂಡರು ಹಾಗೂ ಅಭಿಮಾನಿಗಳು ಶಿಬಿರದಲ್ಲಿ ಭಾಗವಹಿಸಿ ನೇತ್ರದಾನ ನೊಂದಣಿ ಮತ್ತು ರಕ್ತದಾನ ಮಾಡುವ ಮೂಲಕ ಸಾರ್ಥಕತೆ ಮೆರೆದರು. ಡಾಕ್ಟರ್ ರಾಜಕುಮಾರ್ ಅಭಿಮಾನಿ ಹಿರಿಯರಾದ ಶಂಕರಲಿಂಗೇಗೌಡರು ಮತ್ತು ನಿವೃತ್ತ ಶಿಕ್ಷಕರಾದ ಸಿ.ಎನ್.ನಂಜುಂಡಪ್ಪ, ಜಡೆಯ ಶಿವರಾಮ್ ರವರು ದಿ.ಪುನೀತ್ ರವರ ಜೀವನ ಚರಿತ್ರೆ ,ಅವರ ಸಾಧನೆಗಳ ಕುರಿತು ಹಲವಾರು ವಿಚಾರಧಾರೆಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಕಣಕೂರು ಚಂದ್ರಶೇಖರ್ ಕಾರ್ಯಾಧ್ಯಕ್ಷರು ಕ.ರಾ.ರೈ. ಸಂಘ.ಹ.ಸೇ. ಈಡಿಗರ ಸಂಘದ ಮುಖಂಡರಾದ ರಾಜಣ್ಣ.ಉಮೇಶ್. ನಾಗೇಶ್. ರಾಜಣ್ಣ.ಎಂ.ವಿ ಕುಮಾರ್. ಹಾಗೂ ಗ್ರಾಮದ ಎಂ.ಕೆ. ಪ್ರಕಾಶ್. ಜೀವನ್ ಪ್ರಕಾಶ್. ಚಲನಚಿತ್ರ ನಟ ಜಗ್ಗೇಶ್ ಕುಟುಂಬವರ್ಗ. ದಲಿತ ಮುಖಂಡರಾದ ಸುಬ್ರಮಣ್ಯ.ಮಾ.ಗ್ರಾ.ಪಂ.
ಅಧ್ಯಕ್ಷ ಗಿರೀಶ್. ಮುಸ್ಲಿಂ ಬಾಂಧವರ ಬಳಗ.ಡಾ. ಬಿ.ಆರ್.ಅಂಬೇಡ್ಕರ್ ಸಂಘ. ಕೊಲ್ಲಾಪುರದಮ್ಮ ಬಾಯ್ಸ್. ಅಪ್ಪು ಬಾಯ್ಸ್. ರಾಮಕ್ಕ. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಎಲ್ಲಾ ಸದಸ್ಯರುಗಳು. ಪ್ರಾಥಮಿಕ ಕೃಷಿ ಸಹಕಾರ ಸಂಘದ ಎಲ್ಲಾ ನಿರ್ದೇಶಕರುಗಳು ಮತ್ತು ಸಿಬ್ಬಂದಿವರ್ಗ. ತರಕಾರಿ ವ್ಯಾಪಾರಿಗಳ ಸಂಘ. ಬೀದಿ ಬದಿ ವ್ಯಾಪಾರಿಗಳ ಸಂಘ. ಸೇರಿದಂತೆ ಹೋಬಳಿಯ ಹಾಗೂ ಮಾಯಸಂದ್ರ ಗ್ರಾಮದ ಸಮಸ್ತ ನಾಗರಿಕ ಗ್ರಾಮಸ್ಥರು. ಸರ್ಕಾರಿ ನೌಕರರು. ವಿವಿಧ ಪರ ಸಂಘಟನೆ ಪದಾಧಿಕಾರಿಗಳು. ಅಪ್ಪು ಅಭಿಮಾನಿಗಳು. ಸ್ಥಳೀಯ ಜನಪ್ರತಿನಿಧಿಗಳು, ಹಿರಿಯರು, ಮುಂತಾದವರು ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ಪಾಲ್ಗೊಂಡಿದ್ದರು.

ವರದಿ-ಸಚಿನ್ ಮಾಯಸಂದ್ರ.

error: Content is protected !!