ಮನಬಿಚ್ಚಿ ಮಾತನಾಡಿದ್ರು ನಾದಬ್ರಹ್ಮ ಹಂಸಲೇಖ: ಏನ್ ಹೇಳಿದ್ರು ಗೊತ್ತಾ.

ಬೆಂಗಳೂರು: ಅಸ್ಪೃಷ್ಯತೆ ನಿವಾರಣೆ‌ ಹೈಡ್ರಾಮಗಳನ್ನು ಕುರಿತು ಮಾರ್ಮಿಕವಾಗಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ನಾದ ಬ್ರಹ್ಮ‌ಹಂಸ ಲೇಖ ಅವರು ಮತ್ತೊಮ್ಮೆ ಮನಬಿಚ್ಚಿ ಮಾತನಾಡಿದ್ದಾರೆ.

ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಾಹಿತಿ ಎಸ್ ಜಿ ಸಿದ್ದರಾಮಯ್ಯ ಅವರ ‘ಯರೆಬೇವು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅನೇಕ ವಿಚಾರಗಳ ಬಗ್ಗೆ ಹಂಸಲೇಖ ಮಾತನಾಡಿದ್ದಾರೆ.

ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದೇನು?

ನಾನು ಭಯಸ್ತ ಅಲ್ಲ, ಮಾಗಡಿ ರೋಡ್‌ನಲ್ಲಿ ದೊಡ್ಡ ದೊಡ್ಡ ಪೋಲಿ ಆಟ ಆಡಿ ದೊಡ್ಡ ತಂಡ ಕಟ್ಕೊಂಡಿದ್ದೆ, ಚರಿತ್ರೆಯೇ ಇದೆ. ನನಗೆ ಈಗ 70 ತಿನ್ನೋದು ಒಪ್ಪತ್ತು, ಉಳಿದ ಎರಡು ಹೊತ್ತು ಹಸಿವು ಹಸಿವಾ?? ಅದು ಬರೀ ಬಸವ. ಇನ್ನೊಂದಿಷ್ಟು ಇರುತ್ತೇವೆ ಎಂದುಕೊಂಡಿದ್ದೇನೆ, ಅದನ್ನು ಸಾಧಿಸಿ ಹೋಗುತ್ತೇವೆ.

ದೇಸಿ ಸಮುದಾಯದ ಕರುಳಿನ ಕಥನ. ಸುಮಾರು ಎರಡು ದಶಕಗಳಿಂದ ದೇಸಿ ಎನ್ನುವ ಆಶಯ ಇಟ್ಟುಕೊಂಡು ಸುಶಿಕ್ಷಿತ ಕಲಾವಿದರನ್ನು ತಯಾರು ಮಾಡಬೇಕು ಎಂದು ದೇಸಿ ಸಂಸ್ಥೆ ಮಾಡಿದೆ. ಅಂದಿನ ಮುಖ್ಯಮಂತ್ರಿಗಳು ಆ ಸಂಸ್ಥೆ ಉದ್ಘಾಟನೆಗೆ ಬರಬೇಕಿತ್ತು, ಜನ ಕಡಿಮೆ ಇದ್ದಾರೆ ಅಂತ ರಿಪೋರ್ಟ್ ತಗೊಂಡು ಆ ಕಾರ್ಯಕ್ರಮಕ್ಕೆ ಬರಲಿಲ್ಲ. ದೇಸಿ ಅಂದರೆ ಬಡತನ, ಹೀಗಾಗಿ ಬರಲ್ಲ ಅಂತ ನನ್ನ ಪಕ್ಕದಲ್ಲಿದ್ದವರು ಅಂದ್ರು. ಗೋರೂರು ಚೆನ್ನಬಸಪ್ಪ ಅವರು ನಮ್ಮ ಸಂಸ್ಥೆ ಉದ್ಘಾಟನೆ ಮಾಡಿದ್ರು. ರಾಜ್ಯದ ಮಕ್ಕಳಿಗೆ ಹಾಲು ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ, ನನಗೂ ಹಾಲು ಕೊಟ್ರು.

ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಿ ತಲೆ ಹಾಕಿದರೂ ಕಡಿಮೆ ಅನುಭವ ಇದೆ ಅಂತ ಅನಿಸುತ್ತಿದ್ದರು. ಎಸ್.ಜಿ.ಸಿದ್ದರಾಮಯ್ಯ ಅವರು ನಮ್ಮನ್ನು ಎಲ್ಲ ಕಡೆ ಸಮರ್ಥಿಸಿಕೊಂಡ ಬಂದರು, ಎಸ್ ಜಿ ಎಸ್ ಏನೂ ಹೇಳಿದರೂ ಕಣ್ಣು ಮುಚ್ಚಿಕೊಂಡು ಮಾಡುವ ಶಿಷ್ಯ. ಇತ್ತೀಚೆಗೆ ನಡೆದ ಒಂದು ವಿವಾದದಲ್ಲಿ ಎಲ್ಲ ಸಮುದಾಯಗಳನ್ನು ಸಂಪರ್ಕಿಸಿ ಎಸ್‌ ಜಿ ಎಸ್ ಅವರು ನನ್ನ ಬೆಂಬಲಕ್ಕೆ ನಿಂತರು. ಅಂದು ನಾನು ಬ್ಲಡ್ ಫ್ರೈ ಬಗ್ಗೆ ಮಾತನಾಡಿದಾಗ ರಕ್ತ ತಿನ್ನೋರು, ತಿನ್ನೋದು ಬಿಟ್ಟೋರ ಒಳಗೆ ರಕ್ತ ಕುದಿತು. ನುಡಿದರೆ ಮುತ್ತಿನ ಹಾರದಂತೆ ಇರಬೇಕು ಅಂತ ಮಾತನಾಡುತ್ತೇವೆ, ಆದರೆ ಒಳಗಡೆ ಕಬ್ಬಿಣದ ಸಲಾಕೆಯಂತಿರುತ್ತದೆ ಎಂದರು.

ಏನದು ವಿವಾದ..?

ಹಂಸಲೇಖ ಅವರು ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ ಪೇಜಾವರ ಶ್ರೀಗಳು ದಲಿತರ ಮನೆ ಪ್ರವೇಶ ಕುರಿತಂತೆ ಹೇಳಿಕೆ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿ ಹಂಸಲೇಖರ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಬಳಿಕ ಇದು ರಾಜ್ಯಾದ್ಯಂತ ಭಾರಿ ಚರ್ಚೆಯನ್ನ ಹುಟ್ಟುಹಾಕಿತ್ತು.

error: Content is protected !!