ಗುಬ್ಬಿ. ಅನಾವಶ್ಯಕ ವಾಗಿ ಸಂಚಾರ ಮಾಡುವ ಸವಾರರಿಗೆ ಬಿತ್ತು ದಂಡ. ಲಾಠಿಹಿಡಿದು ರಸ್ತೆ ಗಿಳೀದ್ರು ಸಿಪಿಐ ರಾಮಕೃಷ್ಣಪ್ಪ.

ಗುಬ್ಬಿ ಪಟ್ಟಣದಲ್ಲಿ ಕರೋನಾ ಹಾಗೂ ಲಾಕ್ಡೌನ್ ಹಿನ್ನೆಲೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ರಾಮಕೃಷ್ಣಯ್ಯ ನೇತೃತ್ವದಲ್ಲಿ ಅನಾವಶ್ಯಕವಾಗಿ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತನಿಖೆ ನಡೆಸಿ ಗಾಡಿಗಳನ್ನು ಕಿಸ್ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಬೆಳಿಗ್ಗೆ ಹತ್ತು ಗಂಟೆಯ ನಂತರ ಯಾವುದೇ ದ್ವೀಚಕ್ರ ವಾಹನಗಳು ಓಡಾಡಬಾರದು ಎಂದು ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಸಾರ್ವಜನಿಕರು ಸುಮ್ಮನೆ ಬೀದಿಗಳಲ್ಲಿ ಓಡಾಡದಂತೆ ಮನವಿ ಮಾಡಿದರೂ ಸಹ ಮನವಿಯನ್ನು ಉಲ್ಲಂಘಿಸಿದ ದ್ವಿಚಕ್ರ ವಾಹನ ಸವಾರರು ಹಾಗೂ ಮಾಸ್ಕ್ ಧರಿಸದ ಪಾದಚಾರಿಗಳನ್ನು ಎಚ್ಚರಿಸುವ ಮೂಲಕ ಲಾಕ್ ಡೌನ್ಲೋಡ್ ನಿಯಮಾವಳಿಯನ್ನು ಪಾಲಿಸುವಂತೆ ಗುಬ್ಬಿ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ನಾಗರಿಕರಲ್ಲಿ ಮನವಿ ಮಾಡಿದರು.

ಇಂದು ಸ್ವತಃ ಗುಬ್ಬಿ ವೃತ್ತ ನಿರೀಕ್ಷಕ ರಾಮಕೃಷ್ಣಪ್ಪ ಮತ್ತು ಸಿಬ್ಬಂದಿ ಗುಬ್ಬಿ ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗ ಹಾಗೂ ಮುಖ್ಯ ರಸ್ತೆ ಮತ್ತು ಎಂ.ಜಿ.ರಸ್ತೆಯಲ್ಲಿ ಅನಾವಶ್ಯಕವಾಗಿ ತಿರುಗಾಡುತ್ತಿದ್ದ ವ್ಯಕ್ತಿ ಗಳಿಗೆ ಮತ್ತು ವಾಹನ ಸವಾರರಿಗೆ ಸರ್ಕಾರದ ನಿಯಮದಂತೆ ತುರ್ತು ಸಮಯದಲ್ಲಿ ಮಾತ್ರ ಸಂಚಾರಕ್ಕೆ ಅವಕಾಶವಿದ್ದು ಕಾರಣ ವಿಲ್ಲದೆ ರಸ್ತೆ ಗೆ ಬಂದರೆ ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಮನವರಿಕೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!