ಶೀಘ್ರದಲ್ಲೇ ಮೂಗಿನ ಲಸಿಕೆ ಭಾರತದಲ್ಲಿ ಲಭ್ಯ!

ಹೈದ್ರಾಬಾದ್, ಡಿಸೆಂಬರ್ 31: ಭಾರತದಲ್ಲಿ ಅತೀ ಶೀಘ್ರದಲ್ಲಿ ಕರೊನಾಗೆ ಮೊದಲ ಮೂಗಿನ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಈ ಲಸಿಕೆಯ ಬಗ್ಗೆ ಮಾತನಾಡಿದ್ದರು. ಕರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಕೈಗೊಂಡ ಕ್ರಮಗಳಿಂದಾಗಿ ಇದೇ ತಿಂಗಳದಲ್ಲಿ ಮೂಗಿನ ಮೂಲಕ ನೀಡುವ ವ್ಯಾಕ್ಸಿನ್ ಜನರಿಗೆ ಲಭ್ಯವಾಗುವ ಸಾಧ್ಯತೆ ಇದೆ.

ನಾಸಲ್ ಲಸಿಕೆ ಎಂದರೇನು? ಭಾರತದಲ್ಲಿ ಯಾವ ಕಂಪನಿಯ ಲಸಿಕೆ ಲಭ್ಯವಿರಬಹುದು? ಇತರ ಲಸಿಕೆಗಳಿಗಿಂತ ಇದು ಎಷ್ಟು ಭಿನ್ನವಾಗಿರುತ್ತದೆ? ಅದರ ಪ್ರಯೋಜನಗಳೇನು? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಮತ್ತು ಪ್ರಯೋಗದ ಫಲಿತಾಂಶಗಳು ಏನು ಹೇಳುತ್ತವೆ? ಇದರ ಸಂಪೂರ್ಣ ಮಾಹಿತಿ ಯುಎನ್ಐ ಕನ್ನಡ ವೆಬ್ ನ್ಯೂಸ್ ನಿಮ್ಗೆ ಒದಗಿಸಲಿದೆ.

ಮೂಗಿನ ಲಸಿಕೆ ಎಂದರೇನು?

ಪ್ರಸ್ತುತ, ನಾವು ಸ್ನಾಯುಗಳಿಗೆ ಚುಚ್ಚುಮದ್ದಿನ ಮೂಲಕ ಲಸಿಕೆಯನ್ನು ಪಡೆಯುತ್ತಿದ್ದೇವೆ. ಈ ಲಸಿಕೆಯನ್ನು ಇಂಟ್ರಾಮಸ್ಕುಲರ್ ಲಸಿಕೆ ಎಂದು ಕರೆಯಲಾಗುತ್ತದೆ. ಆದರೆ, ಹೊಸ ಸ್ವರೂಪದಲ್ಲಿ ಮೂಗಿನ ಮೂಲಕ ನೀಡುವ ಲಸಿಕೆಯನ್ನು ಇಂಟ್ರಾನಾಜಲ್ ಎಂದು ಕರೆಯಲಾಗುತ್ತದೆ. ಅಂದರೆ, ಇದನ್ನು ಚುಚ್ಚುಮದ್ದಿನ ಮೂಲಕ ನೀಡಬೇಕಾಗಿಲ್ಲ. ಇದು ಒಂದು ರೀತಿಯ ಮೂಗಿನ ಸಿಂಪಡಣೆಯಂತಿರಲಿದೆ.

ಭಾರತದಲ್ಲಿ ಯಾವ ಮೂಗಿನ ಲಸಿಕೆಗಳು ಲಭ್ಯವಿರಬಹುದು?

ಭಾರತದಲ್ಲಿ ಉತ್ಫಾದನೆಯಾಗಲಿರುವ ಲಸಿಕೆಗೆ BBV154 ಎಂದು ಹೆಸರಿಸಲಾಗಿದೆ. ಭಾರತ್ ಬಯೋಟೆಕ್ ಮತ್ತು ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ (WUSM) ಜಂಟಿಯಾಗಿ ಈ ಲಸಿಕೆಯನ್ನು ತಯಾರಿಸುತ್ತಿವೆ. ಭಾರತ್ ಬಯೋಟೆಕ್ 2022 ರಲ್ಲಿ 100 ಕೋಟಿ ಡೋಸ್ ಲಸಿಕೆಯನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿಕೆ ನೀಡಿದೆ.

ಇಲ್ಲಿಯವರೆಗೆ ನಡೆಸಿದ ಪ್ರಯೋಗಗಳ ಫಲಿತಾಂಶಗಳು ಯಾವುವು?

ಮೊದಲ ಹಂತದ ಲಸಿಕೆ ಪ್ರಯೋಗದಲ್ಲಿ ಉತ್ತಮ ಫಲಿತಾಂಶಗಳು ಲಭ್ಯವಾಗಿವೆ. ಲಸಿಕೆ ಪಡೆದ ನಂತರ ಯಾವುದೇ ಪರೀಕ್ಷಾರ್ಥಿಗಳಲ್ಲಿ ಯಾವುದೇ ರೀತಿಯ ಗಂಭೀರ ಅಡ್ಡ ಪರಿಣಾಮಗಳನ್ನು ಕಾಣಿಸಿಕೊಂಡಿಲ್ಲ. ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ ಪ್ರಕಾರ, ಈ ಮೂಗಿನ ಲಸಿಕೆಯನ್ನು ನಾಲ್ಕು ನಗರಗಳಲ್ಲಿ 175 ಜನರಿಗೆ ನೀಡಲಾಗಿದೆ. ಪ್ರಯೋಗಾಲದಲ್ಲಿ ನಡೆಸಿದ ಸಂಶೋಧನೆ ಪ್ರಕಾರ, ಸುರಕ್ಷಿತವಾಗಿದೆ ಎಂದು ಕಂಡುಬಂದಿದೆ. ಅಂದರೆ, ಪ್ರಯೋಗಾಲಯದಲ್ಲಿ ಇಲಿಗಳು ಮತ್ತು ಇತರ ಪ್ರಾಣಿಗಳ ಮೇಲೆ ಇದು ಬಹಳ ಯಶಸ್ವಿಯಾಗಿದೆ.

ಲಸಿಕೆಯ ಹಂತ-2 ಪ್ರಯೋಗಗಳ ಫಲಿತಾಂಶಗಳು ಸಹ ಸಕಾರಾತ್ಮಕವಾಗಿವೆ ಎಂದು ಭಾರತ್ ಬಯೋಟೆಕ್ ಅಧ್ಯಕ್ಷ ಕೃಷ್ಣ ಯಲ್ಲ ಹೇಳಿದ್ದಾರೆ. ಪ್ರಸ್ತುತ ಲಸಿಕೆಯ ಹಂತ-3 ಪ್ರಯೋಗದ ತಯಾರಿಯಲ್ಲಿದ್ದು, DGCI ಗೆ ಅರ್ಜಿ ಸಲ್ಲಿಸಿದೆ.

ಈ ಲಸಿಕೆಯು ಇತರ ಲಸಿಕೆಗಳಿಗಿಂತ ಎಷ್ಟು ಭಿನ್ನವಾಗಿರುತ್ತದೆ?

ದೇಶದಲ್ಲಿ ಇದುವರೆಗೆ 8 ಲಸಿಕೆಗಳನ್ನು ಅನುಮೋದಿಸಲಾಗಿದೆ. ಇವೆಲ್ಲವೂ ಇಂಟ್ರಾಮಸ್ಕುಲರ್ ಲಸಿಕೆಗಳು, ಅಂದರೆ, ಅವುಗಳನ್ನು ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ. ಆದರೆ, BBV154 ಒಂದು ಮೂಗಿನ ಮೂಲಕ ಪಡೆಯುವ ಲಸಿಕೆಯಾಗಿದ್ದು, ಇದು ದೇಶದ ಮೊದಲ ಇಂಟ್ರಾನಾಸಲ್ ವ್ಯಾಕ್ಸಿನ್ ಆಗಲಿದೆ. ಪ್ರಸ್ತುತ, ದೇಶದಲ್ಲಿ ಸ್ಪುಟ್ನಿಕ್, ಕೋವ್‌ಶೀಲ್ಡ್ ಮತ್ತು ಕೋವ್ಯಾಕ್ಸಿನ್ ಗಳು ಡಬಲ್ ಡೋಸ್ ಗಳಾಗಿವೆ. ಆದರೆ, BBV154 ಅನ್ನು ಒಮ್ಮೆ ಮಾತ್ರ ಜನರು ಪಡೆಯುವ ಡೋಸ್ ಆಗಲಿದೆ.

ಮೂಗಿನ ಲಸಿಕೆ ಹೇಗೆ ಕೆಲಸ ಮಾಡುತ್ತದೆ?

ಕರೋನಾ ವೈರಸ್ ಗಳು ಸೇರಿದಂತೆ ಅನೇಕ ಸೂಕ್ಷ್ಮಜೀವಿಗಳು (ಸೂಕ್ಷ್ಮದರ್ಶಕ ವೈರಸ್ ಗಳು), ಲೋಳೆಪೊರೆಯ ಮೂಲಕ ದೇಹವನ್ನು ಪ್ರವೇಶಿಸುತ್ತವೆ (ಮೂಗು, ಬಾಯಿ, ಶ್ವಾಸಕೋಶಗಳು ಮತ್ತು ಜೀರ್ಣಾಂಗಗಳಲ್ಲಿ ಕಂಡುಬರುವ ಆರ್ದ್ರ, ಜಿಗುಟಾದ ವಸ್ತು). ಮೂಗಿನ ಲಸಿಕೆ BBV154 ಲೋಳೆಪೊರೆಯಲ್ಲಿ ನೇರವಾಗಿ ಪ್ರತಿರೋಧ ಒಡ್ಡುವ ಪ್ರಕ್ರಿಯೆಯನ್ನು ಉಂಟು ಮಾಡಲಿದೆ.

ಅಂದರೆ, ಮೂಗಿನ ಲಸಿಕೆಯು ವೈರಸ್ ದೇಹಕ್ಕೆ ಒಳನುಸುಳುವ ಸ್ಥಳದಲ್ಲಿ ರಕ್ಷಕಣಂತೆ ಕಾರ್ಯನಿರ್ವಹಿಸಲಿದೆ. ಮೂಗಿನ ಲಸಿಕೆ ನಿಮ್ಮ ದೇಹದಲ್ಲಿ ಇಮ್ಯುನೊಗ್ಲಾಬ್ಯುಲಿನ್ A (igA) ಅನ್ನು ಉತ್ಪಾದಿಸುತ್ತದೆ. ಆರಂಭಿಕ ಹಂತದಲ್ಲಿ ಸೋಂಕನ್ನು ತಡೆಗಟ್ಟುವಲ್ಲಿ igA ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಪ್ರಯೋಗಾಲದಲ್ಲಿ ದೃಢಪಟ್ಟಿದೆ. ಇದು ಸೋಂಕನ್ನು ತಡೆಗಟ್ಟುವುದರ ಜೊತೆಗೆ ಪ್ರಸರಣವನ್ನು ತಡೆಹಿಡಿಯುತ್ತದೆ.

ಮೂಗಿನ ಲಸಿಕೆ ಪ್ರಯೋಜನಗಳೇನು?

  1. ಪ್ರಸ್ತುತ ಭಾರತದಲ್ಲಿ ನೀಡಲಾಗುತ್ತಿರುವ ಲಸಿಕೆಯ ಎರಡು ಡೋಸ್‌ಗಳನ್ನು ನೀಡಲಾಗುತ್ತಿದೆ. ಎರಡನೇ ಡೋಸ್ ನಂತರ 14 ದಿನಗಳ ಬಳಿಕ ಲಸಿಕೆ ಹಾಕಿದ ವ್ಯಕ್ತಿಯನ್ನು ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಆದರೆ, ಮೂಗಿನ ಲಸಿಕೆ 14 ದಿನಗಳಲ್ಲಿ ಪರಿಣಾಮವನ್ನು ತೋರಿಸಲು ಪ್ರಾರಂಭಿಸುತ್ತದೆ.
  2. ಮೂಗಿನ ಡೋಸ್ ಕರೋನ ವೈರಸ್ನಿಂದ ಪರಿಣಾಮಕಾರಿಯಾಗಿ ರಕ್ಷಣೆ ಮಾಡುತ್ತದೆ. ಅಲ್ಲದೆ, ರೋಗದ ಹರಡುವಿಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ತಡೆಯುತ್ತದೆ. ಇದರಿಂದ ರೋಗಿಯಲ್ಲಿ ಸೌಮ್ಯವಾದ ರೋಗಲಕ್ಷಣಗಳು ಸಹ ಕಂಡುಬರುವುದಿಲ್ಲ. ವೈರಸ್ ದೇಹದ ಇತರ ಭಾಗಗಳಿಗೂ ಹಾನಿ ಮಾಡಲು ಸಾಧ್ಯವಾಗುವುದಿಲ್ಲ.
  3. ಇದು ಒಂದೇ ಡೋಸ್ ಲಸಿಕೆ. ಇದರಿಂದಾಗಿ ಟ್ರ್ಯಾಕಿಂಗ್ ಸುಲಭ. ಇಂಟ್ರಾಮಸ್ಕುಲರ್ ಲಸಿಕೆಗೆ ಹೋಲಿಸಿದರೆ ಇದರ ಅಡ್ಡಪರಿಣಾಮಗಳು ಕಡಿಮೆ. ಇದರ ಮತ್ತೊಂದು ದೊಡ್ಡ ಅನುಕೂಲವೆಂದರೆ ಸೂಜಿಗಳು ಮತ್ತು ಸಿರಿಂಜ್ ಗಳ ತ್ಯಾಜ್ಯವೂ ಕಡಿಮೆ ಇರುತ್ತದೆ.

ಇದು ಒಮೈಕ್ರಾನ್ ವಿರುದ್ಧ ಹೋರಾಡುತ್ತದೆಯೇ?

ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಸಬೇಕಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಆದರೆ ಆರಂಭಿಕ ಸಂಶೋಧನೆಯು ಮೂಗಿನ ಲಸಿಕೆಯು ಒಂದು ರೂಪಾಂತರಿಗಿಂತ ಹೆಚ್ಚಿನ ತಳಿಗಳ ಮೇಲೆ ಪರಿಣಾಮಕಾರಿಯಾಗಲಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

error: Content is protected !!