ಸಿಂದಗಿಯಲ್ಲಿ ಬಹುತೇಕ ಬಿಜೆಪಿ ಗೆಲುವು:ಹಾನಗಲ್ ಕಾಂಗ್ರೇಸ್ ಮುನ್ನಡೆ

ಸಿಂದಗಿ(ವಿಜಯಪುರ): ಸಿಂದಗಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಅವರಿಗೆ ಭರ್ಜರಿ ಗೆಲುವು ಸಿಕ್ಕಿದ್ದು, ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ. 

13ನೇ ಸುತ್ತಿನಲ್ಲಿ ರಮೇಶ್ ಭೂಸನೂರ 18 ಸಾವಿರದ 853 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿಗೆ 57 ಸಾವಿರದ 464 ಮತಗಳು, ಕಾಂಗ್ರೆಸ್ ಅಭ್ಯರ್ಥಿಗೆ 38 ಸಾವಿರದ 611 ಮತಗಳು ಮತ್ತು ಜೆಡಿಎಸ್ ಗೆ 2 ಸಾವಿರದ 538 ಮತಗಳು ಬಂದಿದ್ದವು. 

ಸಿಂದಗಿಯಲ್ಲಿ ರಮೇಶ್ ಭೂಸನೂರ ಅವರ ವಿರುದ್ಧ ಕಾಂಗ್ರೆಸ್ ನಿಂದ ಅಶೋಕ್ ಮನಗೂಳಿ, ಜೆಡಿಎಸ್ ನಿಂದ ಸಿಂದಗಿಯಲ್ಲಿ ನಾಜಿಯಾ ಶಕಿಲಾ ಅಂಗಡಿ ಸ್ಪರ್ಧಿಸಿದ್ದರು.  20ನೇ ಸುತ್ತಿನಲ್ಲಿ ರಮೇಶ್ ಭೂಸನೂರ 28 ಸಾವಿರದ 462 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. 

ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸಂಭ್ರಮ, ಕೇಕೆ ಜೋರಾಗಿದೆ. 

ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ: ಇನ್ನು ಹಾನಗಲ್ ಕ್ಷೇತ್ರದ ಉಪ ಚುನಾವಣೆಯ 11ನೇ ಸುತ್ತಿನ ಮತ ಎಣಿಕೆ ಕಾರ್ಯ ಮುಗಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ 50 ಸಾವಿರಕ್ಕಿಂತ ಹೆಚ್ಚು ಮತಗಳನ್ನು ಗಳಿಸಿ 5 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. 

ಮೊನ್ನೆ 30ರಂದು ಆ ಎರಡು ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಸಿಂದಗಿ ಕ್ಷೇತ್ರದಲ್ಲಿ ಶೇಕಡಾ 69.41ರಷ್ಟು ಮತ್ತು ಹಾನಗಲ್ ನಲ್ಲಿ ಶೇಕಡಾ 83.72ರಷ್ಟು ಮತದಾನವಾಗಿದೆ

Leave a Reply

Your email address will not be published. Required fields are marked *

error: Content is protected !!