ಪಡಿತರ ಚೀಟಿ ನಿಯಮದಲ್ಲಿ ಮಹತ್ವದ ಬದಲಾವಣೆ

ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ‘ಒಂದು ದೇಶ ಒಂದು ಪಡಿತರ ಚೀಟಿ’ ಅಡಿಯಲ್ಲಿ, ಇದೀಗ ಫಲಾನುಭವಿಗಳು  ತಮ್ಮ ಆಯ್ಕೆಯ ಪಡಿತರ ವಿತರಕರಿಂದ ಪಡಿತರವನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಅಂದರೆ, ಈಗ ನೀವು ನಿಮ್ಮ ಇಚ್ಛೆಯಂತೆ ಪಡಿತರ ವಿತರಕರನ್ನು ಬದಲಾಯಿಸಬಹುದು.

ಈ ಬಗ್ಗೆ ಸರ್ಕಾರ ಜ್ಞಾಪಕ ಪತ್ರ ನೀಡಿದೆ. ಇದರ ಪ್ರಕಾರ, ಯಾವುದೇ ಓರ್ವ ವ್ಯಕ್ತಿ  ಪಡಿತರ ಚೀಟಿ ಹಿಡಿದುಕೊಂಡು ಯಾವುದೇ ಡೀಲರ್ ಗಳ ಬಳಿ ಹೋದರು ಕೂಡ, ಆತ ಆ ಡೀಲರ್ ಬಳಿ ಲಾಭಾರ್ಥಿ ಆಗಿರಲಿ ಅಥವಾ ಆಗದೆ ಇರಲಿ ಆತ ಖಾಲಿ ಕೈ ಹಿಂದಿರುಗುವುದಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ಕೂಡ ಆತನಿಗೆ ರೇಶನ್ ಸಿಗುವ ವ್ಯವಸ್ಥೆ ಇರಲಿದೆ. 

ಫಲಾನುಭವಿಗಳಿಗೆ ಒಳ್ಳೆಯ ಸುದ್ದಿ
ರಾಂಚಿ ಜಿಲ್ಲಾ ಸರಬರಾಜು ಅಧಿಕಾರಿ ಅರವಿಂದ್ ಬಿಲ್ಲುಂಗ್ ಪರವಾಗಿ ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರಿಗೆ ಸೂಚನೆಗಳನ್ನು ನೀಡಲಾಗಿದೆ. ಪಡಿತರವನ್ನು ಪಡೆಯುವ  ಚೀಟಿಧಾರಾಕರ ಒಂದು ಸಮಸ್ಯೆ ಎಂದರೆ,  ಕೆಲವು ಪಡಿತರ ವಿತರಕರು ತುಂಬಾ ನಿರಂಕುಶವಾಗಿ ವರ್ತಿಸುತ್ತಾರೆ. ಆದರೆ ಇದೀಗ ಈ ವ್ಯವಸ್ಥೆಒಂದೊಮ್ಮೆ ಜಾರಿಗೆ ಬಂದ ನಂತರ, ಈಗ ಫಲಾನುಭವಿಗಳು ಅಂತಹ ವಿತರಕರಿಂದ ಪಡಿತರವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ, ಬೇರೆ ವಿತರಕರಿಂದ ಪಡಿತರವನ್ನು ಪಡೆಯುವ ಆಯ್ಕೆ ಹೊಂದಿರಲಿದ್ದಾರೆ.

ಇಲಾಖೆ ಪಡಿತರ ಪೂರೈಸಲಿದೆ
ಈ ವ್ಯವಸ್ಥೆಯಲ್ಲಿ, ನಿಗದಿತ  ಫಲಾನುಭವಿಗಳಿಗಿಂತ ಹೆಚ್ಚಿನ ಫಲಾನುಭವಿಗಳು ಪಡಿತರ ಪಡೆಯಲು ಯಾವುದೇ ಒಬ್ಬ ಪಡಿತರ ವಿತರಕರನ್ನು ತಲುಪಿದರೆ, ಅಂತಹ ವಿತರಕರಿಗೆ ಜಿಲ್ಲಾಡಳಿತದ ಸರಬರಾಜು ವಿಭಾಗದಿಂದ ಪಡಿತರವನ್ನು ನೀಡಲಿದೆ. ಇದರಿಂದ ಪ್ರತಿಯೊಬ್ಬರಿಗೂ ಸುಲಭವಾಗಿ ಪಡಿತರ ಸಿಗಲಿದೆ. ಈ ಆದೇಶ ಹೊರಡಿಸಿದ ನಂತರ ಸಾಕಷ್ಟು ಪಡಿತರ ಹೊಂದಿದವರು ಪಡಿತರ ನೀಡಲು ನಿರಾಕರಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ವಾಸ್ತವದಲ್ಲಿ, ಪಡಿತರ ಅಂಗಡಿಯಲ್ಲಿ ಹಲವು ಬಾರಿ ಹಲವು ರೀತಿಯ ಅವಾಂತರಗಳು ಕಂಡು ಬರುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಫಲಾನುಭವಿಯು ನಿರ್ದಿಷ್ಟ ಪಡಿತರ ಅಂಗಡಿಯಿಂದ ಪಡಿತರವನ್ನು ತೆಗೆದುಕೊಳ್ಳಲು ಬಯಸಿದರೆ, ನಂತರ ಅಧಿಕೃತವಾಗಿ ಅದಕ್ಕೆ ಅನುಮತಿ ನೀಡಲಾಗುವುದು

error: Content is protected !!